Advertisement

ಇವಿಎಂನಲ್ಲಿರಲಿದೆ ಅಭ್ಯರ್ಥಿಗಳ ಚಿತ್ರ

02:29 AM Apr 12, 2019 | Team Udayavani |

ಉಡುಪಿ: ಓದುಬರಹದ ತಿಳಿವಳಿಕೆ ಇಲ್ಲದ ಕಾಲದಲ್ಲಿ ಕೇವಲ ಅಭ್ಯರ್ಥಿಗಳ ಹೆಸರು ಇರುತ್ತಿತ್ತು. ಆಗ ಒಂದೇ ರೀತಿಯ ಹೆಸರುಗಳುಳ್ಳ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರವನ್ನು ಪಕ್ಷಗಳು ನಡೆಸುತ್ತಿದ್ದವು. ಮತಪತ್ರದಲ್ಲಿ ಮೊದಲಾಗಿ ಹೆಸರು ಇರುವವರಿಗೆ ಮತ ಹೆಚ್ಚಿಗೆ ಬೀಳುತ್ತವೆ ಎಂಬ ಮಾತೂ ಇತ್ತು.

Advertisement

ಈಗ ಹಾಗಲ್ಲ; ಓದುಬರಹ, ತಿಳಿವಳಿಕೆ ಜಾಸ್ತಿಯಾಗಿದೆ, ಅಭ್ಯರ್ಥಿ ಗಳನ್ನು ಗುರುತಿಸಲು ನೆರವಾಗುವಂತೆ ಅವರ ಭಾವಚಿತ್ರಗಳನ್ನೂ ವಿದ್ಯುನ್ಮಾನ ಮತಯಂತ್ರದಲ್ಲಿ ಅಳವಡಿಸಲಾಗು ತ್ತಿದೆ. ಇದು 2018ರ ವಿಧಾನಸಭೆ ಚುನಾವಣೆಯಲ್ಲಿ ಜಾರಿಗೆ ತರಲಾಯಿತು. ಲೋಕಸಭಾ ಚುನಾ ವಣೆಯಲ್ಲಿಯೂ ಈ ವ್ಯವಸ್ಥೆ ಇದೆ.

ಅಭ್ಯರ್ಥಿಗಳ ಹೆಸರುಗಳನ್ನು ಕನ್ನಡ ಭಾಷೆಯ ಅನುಕ್ರಮಣಿಕೆಯಂತೆ ಅಳವಡಿಸಲಾಗಿದೆ. ನಿಯಮಾವಳಿ ಪ್ರಕಾರ ಹೆಸರಿನ ಹಿಂದಿನ ಇನಿಶಿಯಲ್‌ ಪರಿಗಣಿಸದೆ ಹೆಸರನ್ನು ಮಾತ್ರ ಪರಿಗಣಿ ಸಲಾಗುತ್ತದೆ. ಮೊದಲು ರಾಷ್ಟ್ರೀಯ ಪಕ್ಷಗಳು, ಬಳಿಕ ನೋಂದಾಯಿತ ಪಕ್ಷಗಳು, ಅನಂತರ ಪಕ್ಷೇತರರ ಹೆಸರುಗಳಿವೆ. ಅದರಂತೆ ಮೊದಲ ಹೆಸರು ಪಿ. ಪರಮೇಶ್ವರ (ಬಿಎಸ್‌ಪಿ) ಅವರಿಗೆ ಸಿಕ್ಕಿದೆ. ಅನಂತರ ಕ್ರಮವಾಗಿ ಪ್ರಮೋದ್‌ ಮಧ್ವರಾಜ್‌ (ಜೆಡಿಎಸ್‌), ಶೋಭಾ ಕರಂದ್ಲಾಜೆ (ಬಿಜೆಪಿ), ಮತ್ತಿತರರ ಹೆಸರುಗಳಿವೆ. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next