Advertisement

Tirunelveli: ಪ್ರವಾಹದಲ್ಲಿ ಸಿಲುಕಿದ್ದ ಜನರ ರಕ್ಷಣೆಗೆ ಧಾವಿಸಿದ ನಿರ್ದೇಶಕ ಮಾರಿ ಸೆಲ್ವರಾಜ್

05:19 PM Dec 19, 2023 | Team Udayavani |

ಚೆನ್ನೈ: ಕಳೆದ ಕೆಲ ದಿನಗಳಿಂದ ದಕ್ಷಿಣ ತಮಿಳುನಾಡಿನೆಲ್ಲೆಡೆ ಭಾರೀ ಮಳೆಯ ಪರಿಣಾಮ ನಾನಾ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ಪರಿಹಾರಕ್ಕಾಗಿ ಸರ್ಕಾರಕ್ಕೆ ಕಲಾವಿದರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ತಮ್ಮಿಂದಾಗುವ ಸಹಾಯವನ್ನು ಮಾಡಿದ್ದಾರೆ.

Advertisement

ನಿರ್ದೇಶಕ ಮಾರಿ ಸೆಲ್ವರಾಜ್, ನಟ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಸೇರಿಕೊಂಡು ನೆರೆ ಪ್ರದೇಶದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ಜೊತೆಯಾಗಿದ್ದಾರೆ.  ಭಾರೀ ಮಳೆಯ ಪರಿಣಾಮ ತಿರುನಲ್ವೇಲಿ, ತೂತಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿಯ ಹಲವು ಪ್ರದೇಶಗಳು ಜಲಾವೃತಗೊಂಡಿದೆ.

ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ತಂಡ ಜನರ ರಕ್ಷಣೆಗೆ ಧಾವಿಸಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರ್ದೇಶಕ ಮಾರಿ ಸೆಲ್ವರಾಜ್‌ ಹಾಗೂ ನಟ, ಸಚಿವ ಸ್ಟಾಲಿನ್ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ದೋಣಿಗಳ ಮೂಲಕ ತಿರುನಲ್ವೇಲಿಯ ಒಳಗಿನ ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಜಲಾವೃತವಾಗಿರುವ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಲ್ಲಿ ಜನರನ್ನು ಸಾಗಿಸಿದ್ದಾರೆ.

ಮಾರಿ ಸೆಲ್ವರಾಜ್ ಮಾತನಾಡಿ, “ಪ್ರವಾಹದಿಂದ ಹಲವಾರು ಗ್ರಾಮಗಳಿಗೆ ನೀರು ನುಗ್ಗಿದ್ದು ಆ ಪ್ರದೇಶಕ್ಕೆ ದೋಣಿಗಳು ಹೋಗಲು ಆಗುವುದಿಲ್ಲ. ಅಲ್ಲಿಗೆ ಹೋಗಲು ಹೆಲಿಕಾಪ್ಟರ್‌ ಗಳು ಬೇಕಾಗುತ್ತದೆ. ನಾವು ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ” ಎಂದು ಹೇಳಿದ್ದಾರೆ.

Advertisement

ರಕ್ಷಣಾ ಕಾರ್ಯಾಚರಣೆಯ ಫೋಟೋವನ್ನು ಸೆಲ್ವರಾಜ್‌ ಹಂಚಿಕೊಂಡಿದ್ದಾರೆ.

ಉದಯನಿಧಿ ಸ್ಟಾಲಿನ್‌ ಯೊಂದಿಗೆ ಮಾರಿ ಸೆಲ್ವರಾಜ್‌ ʼಮಾಮಣ್ಣನ್‌ʼ ಸಿನಿಮಾವನ್ನು ಈ ವರ್ಷ ಮಾಡಿದ್ದಾರೆ. ಸಿನಿಮಾಕ್ಕೆ ಉತ್ತಮ ವಿಮರ್ಶೆ ಕೇಳಿ ಬಂದಿತ್ತು.

ʼಕರ್ಣನ್‌ʼ ಬಳಿಕ ಧನುಷ್‌ ಯೊಂದಿಗೆ ಸೆಲ್ವರಾಜ್ ಮತ್ತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಅದು ಇದುವರೆಗೆ ಸಟ್ಟೇರಿಲ್ಲ. ಸದ್ಯ ಸೆಲ್ವರಾಜ್‌ ತಮ್ಮ ʼವಾಝೈ’ ಸಿನಿಮಾವನ್ನು ಮುಗಿಸಿದ್ದಾರೆ. ಶೀಘ್ರದಲ್ಲಿ ಸಿನಿಮಾ ತೆರೆ ಕಾಣುವ ಸಾಧ್ಯತೆಯಿದೆ.

 

Advertisement

Udayavani is now on Telegram. Click here to join our channel and stay updated with the latest news.

Next