Advertisement
ಕೊಲ್ಲಮೊಗ್ರು ಗ್ರಾಮದ ಪನ್ನೆ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಕೋತ್ನಡ್ಕದ ರಾಮಕೃಷ್ಣ ಅವರ ಮನೆಯಿಂದ ಮಹೇಶ್ ಪಿಕಪ್‌ನಲ್ಲಿ ತೆಂಗಿನಕಾಯಿ ಹೇರಿಕೊಂಡು ಹಿಂದಿರುಗುವ ವೇಳೆ ಹೊಳೆ ದಾಟುವ ಸಂದರ್ಭ ದಿಢೀರ್ ನೆರೆ ನೀರು ಹರಿದು ಬಂದು ಹೊಳೆ ಮಧ್ಯದಲ್ಲಿ ಪಿಕಪ್ ವಾಹನ ಸಿಲುಕಿಕೊಂಡಿತು. ಈ ಘಟನೆಯಿಂದ ಪಿಕಪ್‌ನಲ್ಲಿದ್ದ ನೂರಾರು ತೆಂಗಿನಕಾಯಿಗಳು ನೀರು ಪಾಲಾಗಿವೆ ಎಂದು ತಿಳಿದುಬಂದಿದೆ.
ಸುಬ್ರಹ್ಮಣ್ಯ: ಗುರುವಾರ ಸಂಜೆ ಸುರಿದ ಮಳೆಗೆ ಯೇನೆ ಕಲ್ಲು ಪೇಟೆಯ ಬಳಿಯ ಹೊಳೆಯಲ್ಲಿ ಮಳೆ ನೀರಿನ ಹರಿವಿಗೆ ಮಣ್ಣು ಕೊಚ್ಚಿ ಹೋಗಿದ್ದು, ಕೆಲವು ಕಟ್ಟಡಗಳು ಅಪಾಯದಲ್ಲಿವೆ.
Related Articles
Advertisement
ಸರಕಾರಿ ಪ್ರೌಢಶಾಲೆಯ ಗೇಟ್ ಬಳಿ ಹರಿಯುವ ಸಣ್ಣ ತೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಕೋಟಿಗೌಡನ ಮನೆ, ಮಾದನಮನೆ, ಕಡಿಂಬಿಲ ಬೈಲಿನ ಭಾಗಗಳಲ್ಲಿ ನೀರು ತೊಟಕ್ಕೆ ನುಗ್ಗಿ ಜಲಾವೃತಗೊಂಡಿತ್ತು. ಲಿಂಗಪ್ಪ ಗೌಡ ಮಲ್ಲಾರ ಅವರ ಮನೆಯ ಬಳಿಯ ಮೋರಿ ನೀರುಪಾಲಾಗಿದೆ.