ಪುತ್ತೂರು : ಊಟದ ಜತೆಗೆ ಉಪ್ಪಿನಕಾಯಿಗೆ ಅಗ್ರಸ್ಥಾನವಿದೆ. ಮಾವಿನ ಮಿಡಿಯ ಉಪ್ಪಿನಕಾಯಿಯ ಪ್ರಿಯರಿಗಂತೂ ಬರವೇನೂ ಇಲ್ಲ. ಬೇಸಗೆಯ ಬಿಸಿ ನಿಧಾನವಾಗಿ ಏರುತ್ತಿರುವ ಈ ಹೊತ್ತಲ್ಲಿ ಮಾರುಕಟ್ಟೆ, ಬೀದಿ ಬದಿಗಳಲ್ಲಿ ಮಾವಿನ ಮಿಡಿ ಮಾರಾಟ ನಡೆಯುತ್ತಿದ್ದು ಭರಪೂರ ಬೇಡಿಕೆ ಕಂಡು ಬಂದಿದೆ. ಹಾಗೆಯೇ ಬೆಲೆಯೂ ಇದೆ.
ಪ್ರಾರಂಭದಲ್ಲಿ ನಿರೀಕ್ಷೆಗೂ ಮೀರಿ ಮಾವಿನ ಮರ ಹೂ ಬಿಟ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಕೆಲವೆಡೆ ಅಕಾಲಿಕ ಒಣಹವೆ, ಇಬ್ಬನಿಗೆ ಸಿಲುಕಿದ ಹೂವು ಕಮರಿ ಹೋಯಿತು. ಇನ್ನೂ ಕೆಲವೆಡೆ ನಿರೀಕ್ಷೆಗೂ ಮೀರಿ ಮಾವಿನ ಮಿಡಿ ಕಂಡು ಬಂದಿದೆ. ಅಂತೂ ಮಾರುಕಟ್ಟೆಯಲ್ಲಿ ಕಾಡು ಮಾವಿನ ಮರದ ಮಿಡಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು ಖರೀದಿ ಜೋರಾಗಿಯೇ ನಡೆಯುತ್ತಿದೆ.
ಮಂಗಳವಾರ ಪುತ್ತೂರು ನಗರದಲ್ಲಿ ಕೆ.ಜಿ. ಮಾವಿನ ಮಿಡಿಗೆ 200 ರೂ. ಧಾರಣೆ ಇತ್ತು. ಗ್ರಾಮಾಂತರದಲ್ಲಿ 100 ಮಾವಿನ ಮಿಡಿ 150 ರೂ.ನಂತೆ ಮಾರಾಟವಾಗಿದೆ. ಮಾವಿನ ಮಿಡಿಯಲ್ಲಿಯೂ ವೈವಿಧ್ಯ ಇದೆ. ಆಯಾಯ ಊರಿಗೆ ತಕ್ಕಂತೆ ಹೆಸರಿದೆ.
ಇದನ್ನೂ ಓದಿ : ಅಪ್ಪಟ ಅಭಿಮಾನಿ: ಪತ್ನಿ, ಐವರು ಮಕ್ಕಳೊಂದಿಗೆ ಅಪ್ಪು ಸ್ಮಾರಕಕ್ಕೆ ಪಾದಯಾತ್ರೆ ಹೊರಟ ವಕೀಲ