ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯಲ್ಲಿ ಎಷ್ಟು ಮಿಂಚಿದ್ದಾರೆಯೋ, ಮಾನವೀಯ ಮೌಲ್ಯ ಹಾಗೂ ಗುಣಗಳಿಂದಲೂ ಅಪಾರ ಮಂದಿಯ ಮನಗೆದ್ದಿದ್ದಾರೆ. ಇತ್ತೀಚೆಗೆ ಅವರ ಮಾನವೀಯತೆಯ ಕೆಲಸವೊಂದು ಮತ್ತೊಮ್ಮೆ ಎಲ್ಲರ ಮನಸ್ಸು ಗೆದ್ದಿದೆ.
ಕ್ಯಾನ್ಸರ್ ಗೆದ್ದ 9 ವರ್ಷದ ಜಗನ್ಬೀರ್ ಎನ್ನುವ ಬಾಲಕನನ್ನು ಭೇಟಿಯಾಗುವ ಮೂಲಕ ಕೊಟ್ಟ ಮಾತನ್ನು ನೆರವೇರಿಸಿದ್ದಾರೆ.
ಜಗನ್‌ಬೀರ್ ಮೂರು ವರ್ಷದವನಾಗಿದ್ದಾಗ, ಅವರ ಮೆದುಳಿನಲ್ಲಿ ಸಣ್ಣ ಗಡ್ಡೆಯಿಂದಾಗಿ, ಆತನ ದೃಷ್ಟಿ ಮಂದವಾಗಿತ್ತು. ಈ ಕಾರಣದಿಂದ ಚಿಕಿತ್ಸೆ ನೀಡಲು ತಂದೆ ಪುಷ್ಪಿಂದರ್ ಜಗನ್ ಬೀರ್ ಅವರನ್ನು ಮುಂಬಯಿಗೆ ಕರೆತರುತ್ತಾರೆ. ಜಗನ್ ಬೀರ್ ಅವರಿಗೆ ಸಲ್ಮಾನ್ ಖಾನ್ ಅವರನ್ನು ಭೇಟಿ ಆಗುವ ಆಸೆಯಿತ್ತು. ಜಗನ್‌ಬೀರ್ ಆಸ್ಪತ್ರೆಗೆ ದಾಖಲಾದ ನಂತರ, ಸಲ್ಮಾನ್ ಅವರನ್ನು ಭೇಟಿಯಾಗಲು ಬಯಸಿದ ವೀಡಿಯೊ ವೈರಲ್ ಆಗಿತ್ತು. 2018 ರಲ್ಲಿ ಅವರು ಜಗನ್ ನಾಲ್ಕು ವರ್ಷದವರಾಗಿದ್ದಾಗ ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನಲ್ಲಿ ಅವರು ಗಡ್ಡೆಗೆ ಕೀಮೋಥೆರಪಿಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ಮೊದಲ ಬಾರಿ ಭೇಟಿ ಆಗಿದ್ದರು.
ಸಂಪೂರ್ಣವಾಗಿ ಗುಣಮುಖವಾದ ಬಳಿಕ ಮತ್ತೆ ನಿಮ್ಮನ್ನು ಭೇಟಿ ಆಗುತ್ತೇನೆ ಎಂದು ಸಲ್ಮಾನ್ ಖಾನ್ ಅಂದು ಜಗನ್ ಬೀರ್ ಅವರಿಗೆ ಭರವಸೆ ಕೊಟ್ಟಿದ್ದರು. ಅದರಂತೆ ಇತ್ತೀಚೆಗೆ ಸಲ್ಮಾನ್ ಖಾನ್ 9 ಕೀಮೋಥೆರಪಿಗೆ ಒಳಗಾಗಿ, ಕ್ಯಾನ್ಸರ್ ಗೆದ್ದ ಜಗನ್ ಬೀರ್ ಅವರನ್ನು ಭೇಟಿಯಾಗಿದ್ದಾರೆ.
ಸಲ್ಮಾನ್ ಖಾನ್ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.