Advertisement

ಬ್ರಹ್ಮಾಂಡದಲ್ಲಿ ಮತ್ತೂಂದು ಗುರುತ್ವಾಕರ್ಷಣ ತರಂಗ ಪತ್ತೆ

03:45 AM Jun 03, 2017 | Team Udayavani |

ಬೋಸ್ಟನ್‌: ಖ್ಯಾತ ವಿಜ್ಞಾನಿ ಐನ್‌ಸ್ಟಿàನ್‌ ಅವರು ತಮ್ಮ ಸಾಪೇಕ್ಷ ಸಿದ್ಧಾಂತದಲ್ಲಿ ಹೇಳಿದ್ದ “ಗುರುತ್ವಾ ಕರ್ಷಣ ತರಂಗ’ವನ್ನು ಮತ್ತೂಮ್ಮೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
 
ಭಾರತೀಯ ವಿಜ್ಞಾನಿಗಳೂ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಲೇಸರ್‌ ಇಂಟರ್‌ಫೆರೋ ಮೀಟರ್‌ ಗುರುತ್ವಾಕರ್ಷಣ ತರಂಗ ಪರಿಶೋಧಕ ಸಾಧನ’ (ಲಿಗೋ) ಮೂಲಕ ಈ ವೈಚಿತ್ರ್ಯವನ್ನು ಗುರುತಿಸಲಾಗಿದೆ. 

Advertisement

ಭೂಮಿಯಿಂದ 300 ಕೋಟಿ ಜ್ಯೋತಿರ್ವರ್ಷಗಳಾಚೆ (ಒಂದು ಜ್ಯೋತಿರ್ವರ್ಷ ಎಂದರೆ 9,500,000,000,000 ಕಿ.ಮೀ.ಗಳು) ಎರಡು ಕಪ್ಪುರಂಧ್ರಗಳು ವಿಲೀನವಾಗುತ್ತಿರುವ ಸಂದರ್ಭ ಈ ಗುರುತ್ವ ತರಂಗ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ. ಅಲ್ಲದೇ ಈ ವಿಲೀನದಿಂದಾಗಿ ನೂತನ ಕಪ್ಪುರಂಧ್ರ ಸೃಷ್ಟಿಯಾಗಿದ್ದು, ಇದು ನಮ್ಮ ಸೂರ್ಯನಿಂದ 49 ಪಟ್ಟು ಹೆಚ್ಚು ದ್ರವ್ಯರಾಶಿಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. 

ಭಾರೀ ಗಾತ್ರದ ಎರಡು ಕಪ್ಪುರಂಧ್ರಗಳಿರುವ ಬಗ್ಗೆ ಲಿಗೋ ಕಂಡುಹಿಡಿವ ಮೊದಲು ನಮಗೆ ಅದರ ಅರಿವಿರಲಿಲ್ಲ. ಸದ್ಯ ಗುರುತ್ವ ತರಂಗದ ಪತ್ತೆಯಂದಿಗೆ ಶತಕೋಟಿ ವರ್ಷಗಳ ಹಿಂದೆ ಏನಾಗಿದ್ದಿರಬಹುದು ಮತ್ತು ಬ್ರಹ್ಮಾಂಡದಲ್ಲಿ ಈಗ ಶತಕೋಟಿ ಜ್ಯೋತಿವರ್ಷಗಳ ದೂರದಲ್ಲಿ ಏನಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸುಲಭವಾಗಿದೆ ಎಂದು ಮಸ್ಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ವಿಜ್ಞಾನಿ, ಲಿಗೋದ ವಕ್ತಾರ ಡೇವಿಡ್‌ ಶೂಮಾಕರ್‌ ಹೇಳಿದ್ದಾರೆ. 

ಕಳೆದ ನವೆಂಬರ್‌ 30ರಿಂದ ಲಿಗೋ ಶೋಧನೆಯನ್ನು ಶುರುಮಾಡಿತ್ತು. ಅಮೆರಿಕದ ವಾಷಿಂಗ್ಟನ್‌ ಮತ್ತು ಲೂಸಿಯಾನಾದಲ್ಲಿ ಲಿಗೋದ ಎರಡು ದೊಡ್ಡ ಪತ್ತೆಯಂತ್ರಗಳು ಚಾಚಿಕೊಂಡಿವೆ. ಲಿಗೋದ ಸಂಶೋಧನೆಯಲ್ಲಿ ಭಾರತದ 13 ಸಂಸ್ಥೆಗಳ 67 ಮಂದಿ ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ 2015 ಸೆಪ್ಟೆಂಬರ್‌ನಲ್ಲಿ, ಡಿಸೆಂಬರ್‌ನಲ್ಲಿ ಲಿಗೋ ಗುರುತ್ವ ತರಂಗವನ್ನು ಪತ್ತೆ ಹಚ್ಚಿದೆ. ಈಗ ಪತ್ತೆಯಾದ ಗುರುತ್ವ ತರಂಗ ಜ.4ರಂದು ಸೃಷ್ಟಿಯಾದದ್ದು ಎನ್ನಲಾಗಿದೆ.

2 ಬಾರಿ ಪತ್ತೆಹಚ್ಚಿದ್ದ ಲಿಗೋ
100 ವರ್ಷಗಳ ಹಿಂದೆ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವ ತರಂಗದ ಬಗ್ಗೆ ಐನ್‌ಸ್ಟಿàನ್‌ ಅವರು ಹೇಳಿದ್ದರು. ಗುರುತ್ವ ತರಂಗ ಪತ್ತೆ ನಕ್ಷತ್ರಗಳ ಅವನತಿ, ಕಪ್ಪುರಂಧ್ರ ಸೃಷ್ಟಿಯ ಕುರಿತ ಸಂಶೋಧನೆಯಲ್ಲಿ ಮಹತ್ವದ ಅಂಶವಾಗಿದೆ. ಈ ಮೊದಲು ಲಿಗೋ 2 ಬಾರಿ ಬ್ರಹ್ಮಾಂಡದಿಂದ ಗುರುತ್ವ ತರಂಗವನ್ನುದ ಪತ್ತೆ ಹಚ್ಚಿತ್ತು. ಲಿಗೋ ಕೇಂದ್ರದಲ್ಲಿ ವಿಶ್ವದ ಸುಮಾರು 1000 ವಿಜ್ಞಾನಿ ಗಳು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next