Advertisement

ಸೋಂಕಿತರ ನೆರವಿಗೆ ಹಳ್ಳಿಗಳತ್ತ ವೈದ್ಯರ ನಿಯೋಜನೆ

07:29 PM Jun 02, 2021 | Team Udayavani |

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕನ್ನುಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಹಾಗೂ ಕ್ಷೇತ್ರದಜನರ ಆರೋಗ್ಯ ರಕ್ಷಣೆಗೆ ಶ್ರೀ ಸಿದ್ದಾರ್ಥ ವೈದ್ಯಕೀಯಕಾಲೇಜು ಮತ್ತು ಆಸ್ಪತ್ರೆಯ ಸಮುದಾಯವೈದ್ಯಕೀಯ ವಿಭಾಗದ12 ಮಂದಿ ವೈದ್ಯರ ತಂಡವನ್ನುಕ್ಷೇತ್ರಕ್ಕೆ ನಿಯೋಜಿಸಿರುವುದಾಗಿ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.

Advertisement

ಸಿದ್ದಾರ್ಥ ಕಾಲೇಜಿನ ವೈದ್ಯರ ಜತೆಗೆ ಸ್ಥಳೀಯಕಂದಾಯ,ಆರೋಗ್ಯಹಾಗೂಪಂಚಾಯತ್‌ಇಲಾಖೆಯೊಂದಿಗೆ ಹಮ್ಮಿಕೊಂಡಿರುವ ವೈದ್ಯರ ನಡೆ-ಹಳ್ಳಿಯಕಡೆಗೆ ಮತ್ತು ವೈದ್ಯಕೀಯಕಿಟ್‌ ವಿತರಣೆ ಯೋಜನೆಗೆಚಾಲನೆ ನೀಡಿ ಮಾತನಾಡಿದ ಅವರು, ಸಿದ್ದಾರ್ಥ ಆಸ್ಪತ್ರೆಯ ವೈದ್ಯರು ಜನತೆ ಆರೋಗ್ಯ ರಕ್ಷಣೆ ಮಾಡುವುದು ತಮ್ಮ ಮೊದಲ ಆದ್ಯತೆ ಆಗಬೇಕು. ವೈದ್ಯರು ಕೊರಟಗೆರೆ ತಾಲೂಕಿನ ಪ್ರತಿ ಹಳ್ಳಿಗೆ ಭೇಟಿ ನೀಡಲಿದ್ದು, ಅದಕ್ಕಾಗಿ ತಾಲೂಕಿನ ಜೆಟ್ಟಿ ಅಗ್ರಹಾರ ಪಂಚಾಯ್ತಿಯ 18ಹಳ್ಳಿಗಳನ್ನು ಅಯ್ಕೆ ಮಾಡಿಕೊಂಡು ಹಳ್ಳಿ ಜನರಲ್ಲಿಜಾಗೃತಿ ಮೂಡಿಸುವರು ಎಂದರು.

ವೈದ್ಯರಿಂದ ಜಾಗೃತಿ: ಸಿದ್ದಾರ್ಥ ಶಿಕ್ಷಣ ಸಂಸ್ಥೆಯಕಾರ್ಯದರ್ಶಿ ಡಾ.ಜಿ.ಪರಮೇಶ್ವರಸೂಚನೆ ಮೇರೆಗೆವೈದ್ಯರ ತಂಡ ಕೊರಟಗೆರೆ ತಾಲೂಕಿನ ಹಳ್ಳಿಹಳ್ಳಿಗೆಭೇಟಿ ನೀಡಿ ಜನರಿಗೆ ಕೊರೊನಾ ಸೋಕಿನ ಬಗ್ಗೆ ಅರಿವು ಮೂಡಿಸಿದರು. ಸಿದ್ದಾರ್ಥ ಕಾಲೇಜಿನ ವೈದ್ಯರು ಈವೇಳೆ ಕೊರೊನಾ ಸೋಂಕಿತರ ಮನೆಗೆ ತೆರಳಿ ಅಗತ್ಯಚಿಕಿತ್ಸೆ ಹಾಗೂ ಔಷಧ ನೀಡಿದರು.

ಕಂದಾಯ, ಪ್ರಾಥಮಿಕ ಆರೋಗ್ಯ ಸಿಬ್ಬಂದಿ, ಗ್ರಾಪಂ, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಆಶಾ ಕಾರ್ಯಕರ್ತೆಯರಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಕ್ಷೇತ್ರದ ಜನರಸಂಕಷ್ಟದಲ್ಲಿ ಭಾಗಿಯಾಗಿ ಜೆಟ್ಟಿ ಅಗ್ರಹಾರ, ನವಲಕುರಿಕೆ, ದಮ್ಮರನಹಳ್ಳಿ ಪಾಳ್ಯ ಸೇರಿ 18 ಹಳ್ಳಿಗಳ 120ಮಂದಿ ಕೋವಿಡ್‌ ಶಂಕಿತರಿಗೆ ಔಷಧ ಮತ್ತು ವೈದ್ಯಕೀಯ ನೆರವು ನೀಡಿದರು.ಪಿಡಿಒ ಸುನಿಲ್‌ ಕುಮಾರ್‌ ಮತು ¤ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಸಮುದಾಯ ವೈದ್ಯಕೀಯ ವಿಭಾಗದ ವೈದ್ಯಡಾ.ರಾಜ ೇಶ್‌ ನೇತೃತ್ವದ ತಂಡ, ಎಂಜಿನಿಯರಿಂಗ್‌ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್‌ಡಾ.ಜಯಪ್ರಕಾಶ್‌ ಮತ್ತು ವೈದ್ಯರು ಮತ್ತು ಸಿಬ್ಬಂದಿ ಈಆಂದೋಲನದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next