Advertisement

ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ವೃದ್ಧಿ: ಮೋದಿ

10:26 AM Nov 03, 2017 | Team Udayavani |

ಜೇವರ್ಗಿ: ವಿದ್ಯೆ ಮಾನಸಿಕ ಸಾಮರ್ಥ್ಯ ಬೆಳೆಸಿದರೆ, ಕ್ರೀಡೆ ದೈಹಿಕ ಸಾಮರ್ಥ್ಯದ ಜೊತೆಗೆ ಎದುರಾಳಿಯನ್ನು ಎದುರಿಸುವ ಕಲೆ ಕಲಿಸುತ್ತದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಮೇಯರ್‌ ಶರಣುಕುಮಾರ ಮೋದಿ
ಹೇಳಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಪ್ರಥಮ ಪ್ರೋ ಕಬ್ಬಡ್ಡಿ ಹೊನಲು ಬೆಳಕಿನ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಇವೆರಡನ್ನು ಸಮವಾಗಿ ಸ್ವೀಕರಿಸುವ ಭಾವನೆ ಹೊಂದಿರಬೇಕು.
ಕ್ರೀಡಾಪಟುಗಳು ಯಾವುದೇ ಆಟವಾಡಲಿ ಅವರಲ್ಲಿ ದ್ವೇಷದ ಭಾವ ಇರಬಾರದು. ಗ್ರಾಮೀಣ ಕ್ರೀಡೆಗಳನ್ನು ಆಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢವಾಗುತ್ತದೆ. ಕಬ್ಬಡ್ಡಿ, ಕುಸ್ತಿ, ಭಾರ ಎತ್ತುವ ಕ್ರೀಡೆಗಳು ನಶಿಸುತ್ತಿರುವ ಇಂದಿನ ದಿನಗಳಲ್ಲಿ ಅವುಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.  

ರೈತ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೀತಿಯಲ್ಲಿ
ಪಟ್ಟಣದಲ್ಲಿ ಪ್ರೋ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಿರುವ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದರು.

ನಂತರ ರಜಪೂತ ಲಯನ್ಸ್‌ ಹಾಗೂ ಜೈ ಸೇವಾಲಾಲ ತಂಡದ ನಡುವೆ ಪಂದ್ಯ ನಡೆದು ಕೊನೆಗೆ ಒಂದು ಅಂಕದಿಂದ ಜೈ ಸೇವಾಲಾಲ ತಂಡ ಜಯಶಾಲಿಯಾಯಿತು. ಮುಖಂಡ ರಾಜಶೇಖರ ಸೀರಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಸದಸ್ಯರಾದ ಶಿವರಾಜ ಪಾಟೀಲ ರದ್ದೇವಾಡಗಿ, ಶಾಂತಪ್ಪ ಕೂಡಲಗಿ ಮತ್ತಿತರರು ಇದ್ದರು. ಸಂದೀಪಸಿಂಗ್‌ ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜು ಮುದ್ದಡಗಿ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next