Advertisement

ಕ್ರೀಡೆಗಳಿಂದ ದೈಹಿಕ-ಮಾನಸಿಕ ಆರೋಗ್ಯ: ಕಾಡದೇವರ

01:08 PM Sep 22, 2018 | |

ಹೊನ್ನಾಳಿ: ಕ್ರೀಡೆಗಳಿಂದ ದೈಹಿಕ, ಮಾನಸಿಕ ಆರೋಗ್ಯ ಲಭಿಸುತ್ತದೆ ಎಂದು ಪಿಎಸ್‌ಐ ಎನ್‌.ಸಿ. ಕಾಡದೇವರ ಹೇಳಿದರು. ತಾಲೂಕಿನ ನೇರಲಗುಂಡಿ ಗ್ರಾಮದ ಎವರೆಸ್ಟ್‌ ಅಥ್ಲೆಟಿಕ್‌ ಕ್ಲಬ್‌ ಮತ್ತು ಎವರೆಸ್ಟ್‌ ಅಥ್ಲೆಟಿಕ್‌ ಕ್ಲಬ್‌ನ ಶಿವಮೊಗ್ಗ ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನೇರಲಗುಂಡಿ ಗ್ರಾಮದಲ್ಲಿ ಪರಿಸರ ಮತ್ತು ಜೀವಸಂಕುಲದ ಸಂರಕ್ಷಣೆಗಾಗಿ ಹಮ್ಮಿಕೊಂಡ ಪುರುಷರ ಮತ್ತು ಮಹಿಳೆಯರ ವಿಭಾಗಗಳ ಗುಡ್ಡಗಾಡು ಓಟದ ರಾಜ್ಯಮಟ್ಟದ ಎರಡನೇ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕ್ರೀಡೆಗಳಿಂದ ದೇಹಕ್ಕೆ ಅಗತ್ಯವಾದ ವ್ಯಾಯಾಮ ದೊರೆಯುತ್ತದೆ. ಹಾಗಾಗಿ, ದೇಹ, ಮನಸ್ಸುಗಳು ಆರೋಗ್ಯದಿಂದಿರಲು ಸಹಕಾರಿಯಾಗುತ್ತದೆ. ಆದ್ದರಿಂದ, ಎಲ್ಲರೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಎವರೆಸ್ಟ್‌ ಅಥ್ಲೆಟಿಕ್‌ ಕ್ಲಬ್‌ ಕಾರ್ಯದರ್ಶಿ ಎನ್‌.ಇ. ಚೇತನ್‌ಕುಮಾರ್‌ ಮಾತನಾಡಿ, ನಮ್ಮ ಯುವಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೆಲವು ಕ್ರೀಡೆಗಳನ್ನು ಆಯೋಜಿಸುವ ಮೂಲಕ
ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
 
ಎವರೆಸ್ಟ್‌ ಅಥ್ಲೆಟಿಕ್‌ ಕ್ಲಬ್‌ ಅಧ್ಯಕ್ಷ ಎನ್‌.ಎಸ್‌. ರಘು, ಕ್ಲಬ್‌ನ ಪದಾಧಿ ಕಾರಿಗಳಾದ ಮೈಕೆಲ್‌, ಬಾಲಕೃಷ್ಣ ಅವಲಕ್ಕಿ ಇತರರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪುರುಷರು ಮತ್ತು ಮಹಿಳೆಯರು ಗುಡ್ಡಗಾಡು
ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹೊನ್ನಾಳಿ ಹಿರೇಕಲ್ಮಠದ ಒಡೆಯರ್‌ ಡಾ| ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next