ಸಿಂದಗಿ: ಪ್ರಪಂಚದ ಪ್ರತಿಯೊಂದು ಪರಿವರ್ತನೆ ಕಾರಣ ಹೋರಾಟ ಪ್ರತಿ ಹೋರಾಟ ಹಿಂದೆ ಚೇತನ ಶಕ್ತಿ ಇರುತ್ತದೆ. ಚೇತನ ಶಕ್ತಿಗೆ ಸ್ವಂತಿಕೆಯುಳ್ಳ ಆಲೋಚನೆ ಎಂಥ ಕಠಿಣ ದಾರಿ ದುಸ್ತರ ದಾರಿಯನ್ನು ಕೂಡ ಮೆಟ್ಟಿ ಮುನ್ನುಗ್ಗುವ ಶಕ್ತಿ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಅಂಥ ಕಠಿಣ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ತಮ್ಮ ಜೀವನವನ್ನು ಸಮಾಜದಲ್ಲಿರುವ ಸಂಪ್ರದಾಯ ಹೆಸರಿನ ಮೂಢನಂಬಿಕೆಗಳ ವಿರುದ್ಧ ಹೋರಾಡಿದರು ಎಂದು ಕ್ಷೇತ್ರ ಸಮನ್ವಯಾ ಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.
ರಾಂಪುರ ಪಿ.ಎ. ಗ್ರಾಮದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಭಾರತ ಸೇವಾದಳ ಹಮ್ಮಿಕೊಂಡ ಭಾರತ ಸೇವಾದಳದ ಸಪ್ತಾಹ ಆಚರಣೆ ಸಮಾರೋಪ ಹಾಗೂ ಭಾರತದ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತೀಯ ಮಹಿಳೆಯರಿಗೆ ಶಿಕ್ಷಣ ಕೊಡುವ ಮೂಲಕ ಸ್ವತಂತ್ರ ಬದುಕಿಗೆ ನಾಂದಿ ಹಾಡಿದ ಮಹಾನ್ ತಾಯಿ. ಭಾರತದ ಪ್ರಗತಿಯಲ್ಲಿ ಮಹಿಳೆಯರ ಸ್ಥಾನಮಾನ ಮಹತ್ವದ್ದಾಗಿದ್ದು, ಆ ಸ್ಥಾನಮಾನ ಹಿಂದಿನ ಪರಿಶ್ರಮ ಸಾವಿತ್ರಿಬಾಯಿ ಫುಲೆ ಕಾರಣ ಎಂದು ಹೇಳಿದರು.
ಭಾರತೀಯ ಸೇವಾದಳದಂತಹ ಸಂಘಟನೆಗಳು ಯುವಕ -ಯುವತಿಯರಲ್ಲಿ ದೇಶಪ್ರೇಮ, ಭಾವೈಕ್ಯತೆ ಮೂಡಿಸುತ್ತವೆ. ಭಾರತೀಯ ಸಂಸ್ಕೃತಿ, ದೇಶದ ಹೆಮ್ಮೆಯ ವಿಚಾರಗಳನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದರು. ನಿವೃತ್ತ ಶಿಕ್ಷಕ ಎಸ್.ಡಿ. ಕುಂಬಾರ್ ಮಾತನಾಡಿ, ರಾಷ್ಟ್ರ ಸೇವೆಗೆ ಸಿದ್ಧರಿರಲು ಕರೆಕೊಟ್ಟರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಜೆ. ಬಿರಾದಾರ, ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಜೇವೂರು, ಪ್ರಾಥಮಿಕ ಶಾಲೆಯ ಮುಖ್ಯಗುರು ಎಂ.ಎಸ್. ಆಂದೇಲಿ, ಸಿಆರ್‌ಪಿ ಪರಮಾನಂದ ಓಲೇಕರ ಭಾಗವಹಿಸಿದ್ದರು. ಎಸ್.ಎಂ. ಜೇವರಗಿ ಸ್ವಾಗತಿಸಿದರು.
ಶಿಕ್ಷಕ ಎಸ್.ಐ. ಅಂಕಲಗಿ ನಿರೂಪಿಸಿದರು. ಎಂ.ಎಸ್. ಆಂದೇಲಿ ವಂದಿಸಿದರು. ನಂದಗೇರಿ: ತಾಲೂಕಿನ ನಂದಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ಮೊದಲ ಶಿಕ್ಷಕಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರ ಜನ್ಮ ದಿನಾಚರಣೆ ಮಾಡಲಾಯಿತು. ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರು ಎಂ.ಜಿ. ತಳವಾರ ಮಾತನಾಡಿದರು. ಶಿಕ್ಷಕರಾದ ಎಸ್.ಎಲ್. ಸುಂಬಡ, ಕೆ.ಎಂ. ಬಿರಾದಾರ, ಬಿ.ಎಂ. ನಾಯೊRàಡಿ, ಬಿ.ಎಂ. ಕೋಟಿ, ಬಿ.ಜಿ. ಯಂಕಂಚಿ, ಎಸ್.ಐ. ಚಾಂದಕವಠೆ, ನವಿನಕುಮಾರ ಎಚ್.ಎಲ್. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.