ಮುಂಬೈ: ನಗ್ನ ಫೋಟೋಶೂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ರಣವೀರ್ ಸಿಂಗ್ ಅವರ ಹೇಳಿಕೆಯನ್ನು ದಾಖಲಿಸಿದ ಕೆಲವು ದಿನಗಳ ನಂತರ, ಯಾರೋ ತನ್ನ ಫೋಟೋವನ್ನು ಮಾರ್ಫ್ ಮಾಡಿದ್ದಾರೆ ಮತ್ತು ವಿರೂಪಗೊಳಿಸಿದ್ದಾರೆ ಎಂದು ರಣವೀರ್ ಸಿಂಗ್ ಹೇಳಿರುವುದು ಗುರುವಾರ ಬಹಿರಂಗವಾಗಿದೆ.
ಪೊಲೀಸರು ಆಗಸ್ಟ್ 29 ರಂದು ರಣವೀರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸದ್ಯ ಬಹಿರಂಗವಾಗಿರುವ ರೀತಿಯಲ್ಲಿ ಫೋಟೊವನ್ನು ಚಿತ್ರೀಕರಿಸಲಾಗಿಲ್ಲ ಎಂದು ರಣವೀರ್ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 292, 294 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ 509 ಮತ್ತು 67 (A) ಅಡಿಯಲ್ಲಿ ನಟ ರಣವೀರ್ ಸಿಂಗ್ ವಿರುದ್ಧ ಚೆಂಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರಿಗೆ ಬಂದಿರುವ ದೂರಿನಲ್ಲಿ ರಣವೀರ್ ಸಿಂಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು. ನಟನು ತನ್ನ ಛಾಯಾಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಎಂದು ದೂರುದಾರರು ಹೇಳಿದ್ದಾರೆ.
ಇದನ್ನೂ ಓದಿ:ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ನಿವೃತ್ತಿ?: ಏನಿದು ಭವಿಷ್ಯವಾಣಿ
ಜುಲೈನಲ್ಲಿ ‘ಪೇಪರ್’ ನಿಯತಕಾಲಿಕೆಯೊಂದಿಗೆ ಅವರ ಫೋಟೋಶೂಟ್ ಬಿಡುಗಡೆಯಾದಾಗಿನಿಂದ ಹಲವು ವಿವಾದಗಳು ಆರಂಭವಾಗಿತ್ತು. ಚಿತ್ರಗಳು ರಾತ್ರೋರಾತ್ರಿ ವೈರಲ್ ಆಗಿದ್ದವು.