Advertisement

ವಿಮಾನ ಪ್ರಯಾಣಿಕರ ಗಮನಕ್ಕೆ! ಪ್ರಯಾಣದ ವೇಳೆ ನಿಯಮ ಉಲ್ಲಂಘಿಸಿದರೆ ಜೋಕೆ!

02:39 PM Sep 14, 2020 | sudhir |

ಹೊಸದಿಲ್ಲಿ: ವಿಮಾನದೊಳಗೆ ಪ್ರಯಾಣಿಕರು ಫೋಟೋ ಹಾಗೂ ವೀಡಿಯೋಗಳನ್ನು ಸೆರೆ ಹಿಡಿಯಬಹುದು. ಆದರೆ, ಗೊಂದಲ ಸೃಷ್ಟಿಸುವಂತಹ, ವಿಮಾನದ ಕಾರ್ಯಾಚರಣೆಗೆ ಅಡ್ಡಿಯಾಗುವಂತಹ, ಸುರಕ್ಷತಾ ನಿಯಮ ಉಲ್ಲಂಘಿಸುವಂಥ ಅಥವಾ ವಿಮಾನದ ಸಿಬಂದಿಯಿಂದ ನಿರ್ಬಂಧಕ್ಕೊಳಗಾಗಿರುವಂಥ ರೆಕಾರ್ಡಿಂಗ್‌ ಸಲಕರಣೆಗಳನ್ನು ಬಳಸುವಂತಿಲ್ಲ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶ ನಾಲಯ(ಡಿಜಿಸಿಎ) ಹೇಳಿದೆ.

Advertisement

ನಟಿ ಕಂಗನಾ ರಣೌತ್‌ ಇತ್ತೀಚೆಗೆ ವಿಮಾನದಲ್ಲಿ ಮುಂಬಯಿಗೆ ಪ್ರಯಾಣಿಸಿದಾಗ, ಪತ್ರಕರ್ತರು ಇಂಡಿಗೋ ವಿಮಾನದಲ್ಲಿ ಸುರಕ್ಷಾ ನಿಯಮ ಉಲ್ಲಂಘಿಸಿದ್ದರು. ಈ ಹಿನ್ನೆಲೆ ಶನಿವಾರ ಹೊಸ ಆದೇಶ ಹೊರಡಿಸಿದ್ದ ಡಿಜಿಸಿಎ, ಇನ್ನು ಯಾರಾದರೂ ವಿಮಾನದೊಳಗೆ ಫೋಟೋ ಗ್ರಫಿ ಮಾಡುವುದು ಕಂಡುಬಂದರೆ, ಅಂತಹ ವಿಮಾನ ಗಳಿಗೆ 2 ವಾರ ಸಂಚಾರ ನಿರ್ಬಂಧ ಹೇರಲಾಗುವುದು ಎಂದು ಎಚ್ಚರಿಸಿತ್ತು.

ಇದನ್ನೂ ಓದಿ : ಮಹಾರಾಷ್ಟ್ರಕ್ಕೆ ಕಳಂಕ ತರಲು ಕೆಲವರು ಸಂಚು ರೂಪಿಸಿದ್ದಾರೆ: ಉದ್ಧವ್‌ ಠಾಕ್ರೆ

Advertisement

Udayavani is now on Telegram. Click here to join our channel and stay updated with the latest news.

Next