Advertisement

ಜವಳಿ ವ್ಯಾಪಾರಿಗೆ ಛಾಯಾಗ್ರಹಣ ಬಳುವಳಿ : ಇವರು ಕಂಡಿದ್ದೇ ಸತ್ಯ!

03:10 PM Jan 14, 2017 | |

ಮೊನ್ನೆ ಮೊನ್ನೆಯಷ್ಟೇ ಕೊಲ್ಕತ್ತಾದಲ್ಲಿ ನಡೆದ ವಿಶ್ವಫೋಟೋಗ್ರಫಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದು  ಸತ್ಯನಾರಾಯಣ್‌.  ಕ್ಯಾಮರ ಹಿಡಿದರೆ ನೆರಳುಧಿಧಿ- ಬೆಳಕಿನ ಆಟ ಶುರುವಾದರೆ ಜಗತ್ತನ್ನೇ ಮರೆತು ಫೋಟೋ ತೆಗೆಯೋದು ಇವರ ಹುಚ್ಚು. ಈಗಾಗಲೇ ಲಕ್ಷಾಂತರ ಫೋಟೋ ತೆಗೆದು, 800ಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿ, ಪ್ರಪಂಚದಾದ್ಯಂತ ತಿರುಗುತ್ತಲೇ ಬೆರಗುಗಳನ್ನು ಹಿಡಿದಿಟ್ಟಿದ್ದಾರೆ. ಅಂದಹಾಗೆ ಇವರು ಹಿರಿಯ ಫೋಟೋಗ್ರಾಫ‌ರ್‌ ರಾಜಗೋಪಾಲ್‌ ಅವರ ಶಿಷ್ಯರು.

Advertisement

ಡೂಟೂ ಪ್ಲೆ„ನ್ಸ್‌ ಕಾಡದು.ಇಲ್ಲಿ ಕಾಲಿಟ್ಟರೆ ಸೈಟಿಂಗ್‌ ಗ್ಯಾರಂಟಿ. ಕ್ಯಾಮರ ಹೊಟ್ಟೆ ತುಂಬಿಸಿಕೊಳ್ಳಬಹುದು. ಏಕೆಂದರೆ ಮಳೆ ನಿಂತು ಚಿಗುರೊಡೆಯೋ ಸಮಯದಲ್ಲಿ ಪ್ರಾಣಿಗಳು ವಲಸೆ ಬರ್ತವೆ. ಇದನ್ನೇ ಸಿಂಹ, ಚೀತಾಗಳು ಕಾಯ್ತಾ ಇರ್ತವೆ. ಇದಕ್ಕಾಗಿ ನಾವು ಕಾಯ್ತಾ ಇರ್ತೀವಿ.  

“ನೋಡಿ, ನೋಡಿ ಆ ಚೀತಾ ಬೇಟೆ ಆಡಬೋದು’- ಅಂದ ಡ್ರೈವರ್‌.  ಇವರಿಗೆ ಪ್ರಾಣಿಗಳ ಹಾವಾಭಾವ ಚೆನ್ನಾಗಿ ಗೊತ್ತಿರುತ್ತೆ. ಅವನ ಮಾತನ್ನು ಹಿಂಬಾಲಿಸಿದರೆ ದೂರದಲಿ ಚೀತಾ ತಲೆ ತಿರುಗಿಸುತ್ತಾ, ಕಣ್ಣಗಳನ್ನು ಓಡಿಸುತ್ತಾ ಬೇಟೆಯ ಹೊಂಚು ಹಾಕುತ್ತಿದೆ. ಅದರ ಬದಿಯಲ್ಲಿ ಒಂದಷ್ಟು ಜಿಂಕೆಗಳು ಮೇಯುತ್ತಿದ್ದವು. ಕತ್ತು ಕೆಳಗೆ ಮಾಡಿ ಕುಳಿತುಕೊಂಡಿತು. ಮೂಗಿನ ಹೊಳ್ಳೆ ಮಿಸುಕಾಡ ತೊಡಗಿತು. ಚೂರು ಮುಂದೆ ಬಂತು. ಹುಲ್ಲಿನ ಮಧ್ಯೆದಲ್ಲಿ ಅವಿತುಕೊಂಡಿತು. ನೀರಲ್ಲಿ ಈಜುವಂತೆ ಮುಂದೋಗುತ್ತಲೇ ಜಿಂಕೆಯ ಮೇರೆ ಹಾರಿತು. ಅಷ್ಟೂ ಜಿಂಕೆಗಳು ಚದುರಿ ಹೋದವು. 

 ಚೀತಾ ಬುದ್ಧಿವಂತ ಪ್ರಾಣಿ. ಕಣ್ಣಲ್ಲೇ ತನ್ನಗೆ ಯಾವ ಜಿಂಕೆ ಬೇಕು, ಅದು ತಪ್ಪಿಸಿಕೊಂಡರೆ ಬದಲಿ ಜಿಂಕೆ ಯಾವುದಿರಬೇಕು ಅನ್ನೋದನ್ನೆಲ್ಲಾ ಲೆಕ್ಕ ಹಾಕಿಯೇ ಬೇಟೆಗೆ ಇಳಿಯೋದು. ಆವತ್ತು ಲೆಕ್ಕ ಹಾಕಿತೋ ಇಲ್ಲವೋ ಗಣಿತವಂತೂ ತಪ್ಪಿತು. ಹಾರಿದ ಜಿಂಕೆಯ ಬೆನ್ನು ಸಿಕ್ಕದ್ದರಿಂದ ಒದರಿ ಮುಂದೆ ಓಡಿತು. ಸಾಮಾನ್ಯವಾಗಿ ಅದು ಕತ್ತಿಗೆ ಬಾಯಿ ಹಾಕಿ, ನಿಧಾನಕ್ಕೆ ಎಲ್ಲ ಅಂಗಗಳನ್ನು ವೀಕ್‌ ಮಾಡುತ್ತಾ ಹೋಗುತ್ತದೆ. ಹೀಗೆ ಎರಡು, ಮೂರು ಬಾರಿ ಪ್ರಯತ್ನಿಸಲೂ ವಿಫ‌ಲವೇ ಆಯಿತು.

 ನಾವಂತೂ ಒಂದು ಗಂಟೆಯಿಂದ ಈ ಚೀತಾ ಪ್ರಯತ್ನಗಳನ್ನು ಹಿಡಿಯುವ ಬೇಟೆಗಾರರಾಗಿದ್ದವು. ಇದ್ದಕ್ಕಿದ್ದಂತೆ ದೇಹದ ಎಲ್ಲ ಬಲವನ್ನು ಮುಂಗಾಲಿಗೆ ತಂದಂತೆ ಚೀತಾ ಒಂದೇ ಸಾರಿ ಹಾರಿದಾಗ ಕ್ಯಾಮರಾ ಕಣ್ಣುಗಳ ಪಟಪಟನೇ ಹೊಡೆದುಕೊಂಡವು. ವಿಚಿತ್ರವಾದ ಸದ್ದಿನೊಂದಿಗೆ ಮರಿ ಜಿಂಕೆ ಹಾರುತಲಿತ್ತು, ಒಂದೇ ನೆಗೆತಕ್ಕೆ ಚೀತ 8-10 ಅಡಿಯಷ್ಟು ಉದ್ದ ನೆಗೆದು, ಗಾಳಿಯಲ್ಲಿ ಹಾರುತ್ತಿದ್ದ ಜಿಂಕೆಯ ಮರಿಯ ಬೆನ್ನಿಗೆ ಫ‌ಕ್‌ ಅಂತ ಹೊಡೆಯುವ ಪ್ರಯತ್ನ ನಾಜೂಕಾಗಿ ಕ್ಯಾಮರ ಒಳಗೆ ಸೇರಿಬಿಟ್ಟಿತು. ಅಷ್ಟರಲ್ಲಿ ಹೆಚ್ಚಾ ಕಮ್ಮಿ 20 ಫೋಟೋ ಚಕ, ಚಕನೇ ದಾಖಲಾದವು. ಅದರಲ್ಲಿ ಇದೂ ಒಂದು. ಕ್ಯಾಮರದಿಂದ ಕಣ್ಣು ಕಿತ್ತು ನೋಡಿದರೆ…  ಜಿಂಕೆ ಮರಿ ಚೀತಾ ಕೈಯಿಂದ ತಪ್ಪಿಸಿಕೊಂಡು ಓಡಿಬಿಡುವುದೇ.  ಈ ಚಿತ್ರಕ್ಕೆ ಬರೋಬ್ಬರಿ ಒಟ್ಟು 30 ಅವಾರ್ಡು ಬಂದಿದೆ. 

Advertisement

ಹೀಗೆ ಎದುರಿಗಿದ್ದ ಆಲ್ಬಂ ಹಿಡಿದು ಸತ್ಯನಾರಾಯಣ ಚಿತ್ರಕತೆ ಹೇಳುತ್ತಾ ಹೋದರು. ಇವರಲ್ಲಿ ಇಂಥ ಸಾವಿರಾರು ಫೋಟೋಗಳಿವೆ. ಹಾಗೇ ಸಾವಿರಾರು ಕಥೆಗಳಿವೆ.  ಮೊನ್ನೆ ತಾನೇ ಇವರಿಗೆ ಈ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಬಂಗಾರ ಪದಕವೂ ಸಂದಿದೆ. ಸತ್ಯನಾರಾಯಣ್‌ ಫೋಟೋ ಜಗತ್ತಿಗೆ ಚಿರಪರಿಚಿತ ಹೆಸರು. ಪ್ರಕೃತಿಯ ಚಮತ್ಕಾರಗಳನ್ನು ಹಿಡಿಯುವ ಸೆರೆಗಾರ.  ನೆರಳು ಬೆಳಕನ್ನು ಸರಿಯಾಗಿ ದುಡಿಸಿಕೊಳ್ಳುವ ಚತುರ ಫೋಟೋಗ್ರಾಫ‌ರ್‌ ಅಂತೆಲ್ಲ ಹೆಸರಿದೆ. ವೈಲ್ಡ್‌ಲೈಫ್, ಪಿಕ್ಟೋರಿಯಲ್‌, ಬರ್ಡ ಹೀಗೆ ಫೋಟೋಗ್ರಫಿ ನಾನಾ ವಿಭಾಗದಲ್ಲಿ ಸತ್ಯನಾರಾಯಣ್‌ ಅಚ್ಚಳಿಯದ ಕ್ಲಿಕ್ಕಿದೆ. 

ಚಮತ್ಕಾರ ಹೇಗೆ ಅನ್ನೋದು ಇನ್ನೊಂದು ಕಥೆ ಕೇಳಿ- ಒಂದ್ಸಲ ಕಬಿನಿ ಹಿನ್ನೀರಿಗೆ ಹೋಗಿದ್ದೆವು. ನಾನು, ಎಂ.ಎನ್‌ ಜಯಕುಮಾರ್‌ ಬೋಟಲ್ಲಿ ಫೋಟೋ ಶೂಟ್‌ ಮಾಡುತ್ತಿರುವಾಗ ನಡಗಡ್ಡೆ ಬದಿಗೆ ಒಂದು ದೊಡ್ಡ ಟಸ್ಕರ್‌ ನಡೆಯುತ್ತಾ ಬಂತು. ವೈಭವೋಪೇರಿತ ಅಂದ. ದೊಡ್ಡ ಕೋಡುಗಳು. ನೋಡೋಕೆ ಚೆಂದ. ತಕ್ಷಣ ಸೋಲೋ ಫೋಟೋಗಳನ್ನು ತೆಗೆಯುತ್ತಿರಲೂ ಹಿಂದೆ ನೀರು ಅಲ್ಲಾಡಿದಂತಾಯಿತು. ನೋಡಿದರೆ ಬೆಟ್ಟವೊಂದು ಮೆಲ್ಲಗೆ ಎದ್ದು ಬಂದಂತಾಯಿತು. ನೋಡ್ತಾ, ನೋಡ್ತಾ ಇದ್ದರೆ ಆನೆಯೊಂದು ಈಜುತ್ತಾ ಬರುತ್ತಿದೆ. ಮತ್ತೆ ಎಲ್ಲರ ಕ್ಯಾಮರಾಗಳು ಫ‌ಕಫ‌ಕ ಎಂದಿತು. ನೋಡ ನೋಡುತ್ತಲೇ ನೀರಲ್ಲಿ ಮೀಯುತ್ತಿದ್ದ ಆನೆ ನಿಧಾನವಾಗಿ ನಡೆಯುತ್ತಾ ಬಂದು, ಬಂದು ದೊಡ್ಡ ಕೋಡಿನ ಆನೆಗೆ ಅಭಿಮುಖವಾಗಿ ನಡೆಯುತ್ತಾ ಬಂತು. ತಕ್ಷಣ ನನ್ನ ಕ್ಯಾಮರ ಎಚ್ಚೆತ್ತು ಫೋಟೋ ತೆಗೆಯಿತು ನೋಡಿ. ಒಂದೇ ದೇಹದ ಎರಡು ತಲೆಯ ಆನೆಯಂತೆ ಚಮತ್ಕಾರವಾಗಿ ಬಂತು. ಇಂಥ ಫೋಟೋಗಳಿಗೆಲ್ಲಾ ಅದೃಷ್ಟವೂ ಬೇಕು. ತಾಳ್ಮೆಯೂ ಇರಬೇಕು. 

  ಸತ್ಯನಾರಾಯಣ್‌ ಮೂಲತಃ ಸಿಲ್ಕ್ ಮರ್ಚೆಂಟ್‌. ಚಿಕ್ಕಪೇಟೆಯಲ್ಲಿ ರಾಜಾರಾಮ್‌ ಸಿಲ್ಕ್ ಎಂಬ ಹೋಲ್‌ಸೇಲ್‌ ಸೀರೆ ಅಂಗಡಿ ಇಟ್ಟುಕೊಂಡಿದ್ದಾರೆ. ಅಲ್ಲೂ ಕೂಡ ಬಣ್ಣ ಬೆಳಕಿನ ಕೆಲಸ. ಇಲ್ಲಿ ನೆರಳು ಬೆಳಕಿನ ಹವ್ಯಾಸ.  ಇವರು ಕಾಲಿಗೆ ಪ್ರಪಂಚದ ಅಷ್ಟೂ ನ್ಯಾಷನಲ್‌ಪಾರ್ಕುಗಳನ್ನು ಸುತ್ತಿದ ಅನುಭವವಿದೆ. ದೇಶ, ವಿದೇಶಗಳಲ್ಲಿ ಫೋಟೋಗ್ರಫಿ ಮಾಡಿದ ಅನುಭವ ಕ್ಯಾಮರಕ್ಕೆ ಇದೆ. ಸುತ್ತುವುದು ಸತ್ಯನಾರಾಯಣರ ಇನ್ನೊಂದು ಹವ್ಯಾಸ.

 ಈ ಕೆಲಸ ಬಿಟ್ಟು ಆಕೆ ಹವ್ಯಾಸ ಹೇಗೆ ಸರಿದೂಗಿಸುತ್ತೀರಿ? ಹೀಗಂದರೆ ಬಾಯಿ ತುಂಬ ನಗುತ್ತಾರೆ. ಹೀಗೇ ಮ್ಯಾನೇಜ್‌ ಮಾಡ್ತೀನಿ ಅಂತಾರೆ. ಸತ್ಯನಾರಾಯಣರಿಗೆ  ಈ ರೀತಿ ಸುತ್ತುವ-ಫೋಟೋಗ್ರಫಿಯ ಹುಚ್ಚು ಹತ್ತಿಸಿದ್ದು ಗೆಳೆಯ ರವಿ. ಈತ ಫೋಟೋಗ್ರಫಿ ಮಾಡುತ್ತಿರುವಾಗ ಸತ್ಯನಾರಾಯಣ್‌ ಟೇಬಲ್‌ ಟೆನ್ನಿಸ್‌ ಆಡುತ್ತಿದ್ದರು. ರಾಜ್ಯ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದರು. ಆಗಾಗ ರವಿ, ರಾಜಗೋಪಾಲ್‌, ಸುಂದರಂ, ಶ್ರೀನಿವಾಸರ ಜೊತೆ ಕ್ಯಾಮರ ಹಿಡಿದು ಹೋದಾಗ ನಿಜವಾದ ಹುಚ್ಚು ಹತ್ತಿತ್ತು. ಟೇಬಲ್‌ ಟೆನ್ನಿಸ್‌ ಬಿಟ್ಟವರೇ ಕ್ಯಾಮರ ಹಿಡಿದರು.  ರಾಜಗೋಪಾಲ್‌ ನಂಟಿನಿಂದ ನೆರಳು, ಬೆಳಕನ್ನು ದುಡಿಸಿಕೊಳ್ಳುವ ತಂತ್ರ ಕಲಿತರು. 

 ಲುಕ್‌ಫಾರ್‌ ದಿ ಲೈಟಿಂಗ್‌
 ಸರ್ಚ ಫಾರ್‌ ದಿ ಸಬೆjಕ್ಟ್
 ಪಿಕ್ಚರ್‌ವಿಲ್‌ಬಿ ಯುವರ್ಸ್‌
 ಸತ್ಯನಾರಾಯಣರ ಯಾವುದೇ ಛಾಯಾಚಿತ್ರಗಳನ್ನು ನೋಡಿದರೂ ಈ ಸೂತ್ರ ಇದ್ದೇ ಇರುತ್ತದೆ. ಇದು ರಾಜಗೋಪಾಲ್‌ ಹೇಳಿ ಕೊಟ್ಟ ದೊಡ್ಡ ಪಾಠ. ಈ ಕಾರಣಕ್ಕಾಗಿಯೇ ಸತ್ಯ ಅವರು ಕಣ್ಣುಗಳನ್ನು ಬೆಳಕು, ಬಣ್ಣಕ್ಕೆ ಟ್ರೈನ್‌ ಮಾಡಿಕೊಂಡಿದ್ದಾರೆ. 

 “ನಾನು ಇಂಥದೇ ಚಿತ್ರ ಬೇಕು ಅಂತ ಹುಡಿಕಿ ಹೋಗಲ್ಲ. ಎಲ್ಲೇ ಹೋದರೂ ಜೊತೆಯಲ್ಲಿ ಕ್ಯಾಮರ ಇದ್ದೇ ಇರುತ್ತದೆ. ಲೈಟಿಂಗ್‌, ಸಬೆjಕ್ಟ್ ಸರಿಯಾಗಿದ್ದರೆ ಚಕ್‌ ಅಂತ ಫೋಟೋ ತೆಗೀತೀನಿ. ಚಿತ್ರದ ಬ್ಯಾಗ್ರೌಂಡ್‌, ಕಂಪೋಸಿಷನ್‌ ಬಹಳ ಮುಖ್ಯ. ನನ್ನ ಚಿತ್ರಗಳು 2/3, 1/3  ಬ್ಯಾಲೆನ್ಸ್‌ನಲ್ಲೇ ಇರುತ್ತದೆ ‘ ಅಂತಾರೆ ಸತ್ಯ.

  ಸತ್ಯ ಕಂಡುಕೊಂಡ ಸತ್ಯ ಏನೆಂದರೆ ಫೋಟೋಗ್ರಫಿ ಅನ್ನೋದು ನಮ್ಮ ಮನಸ್ಸಿನ ಚಿತ್ರಣ. ಮೊದಲು ತಲೆಯಲ್ಲಿ ಕ್ಲಿಕ್ಕಿಸಿದ ಫೋಟೋವನ್ನು ಮ್ಯಾಚ್‌ ಮಾಡುವುದಕ್ಕೆ ಒದ್ದಾಡುವುದು.  ಇದೊಂದ ರಿಫ್ಲಕ್ಷನ್‌ ಆಫ್ ದ ಮೈಂಡ್‌.  

 “ಫೋಟೋ ತೆಗೆಯೋ ಮೊದಲು. ಸಬೆjಕ್ಟ್ ನೋಡಿದಾಕ್ಷಣ ಅದು ಹೀಗೇ ಬರಬೇಕು ಅಂತ ಮೈಂಡ್‌ನ‌ಲ್ಲಿ ಲೆಕ್ಕ ಶುರುವಾಗುತ್ತದೆ. ಫ‌ಸ್ಟ್‌ ಪ್ರಿಂಟಾಗೋದೇ ಅಲ್ಲಿ. ಕಲರ್‌ ಕಾಂಬಿನೇಷನ್‌, ಸ್ಪೇಸಿಂಗ್‌, ಕಾಂಪೋಸಿಷನ್‌ ಎಲ್ಲವೂ ರೂಪಗೊಳ್ಳುತ್ತದೆ.   ಆಮೇಲೆ ಅದೇ ರೀತಿ ಫೋಟೋ ತೆಗೆಯೋಕೆ ಹೋಗ್ತಿàವಿ. ನನ್ನ ಬಹುತೇಕ ಫೋಟೋಗಳು ಮೈಂಡ್‌ನ‌ಲ್ಲಿ ಇರೋ ಚಿತ್ರಣದಂತೆಯೇ ಇರುತ್ತದೆ. ಫೋಟೋ ಯಾರು ಬೇಕಾದರೂ ತೆಗೆಯಬಹುದು. ಆದರೆ ಇಂಥ ಚಿತ್ರ, ಇಂಥ ಬಣ್ಣದ ಬ್ಯಾಗ್ರೌಂಡ್‌  ಅಂಥ ಮನಸ್ಸು ಮೊದಲು ಕ್ಲಿಕ್‌ ಮಾಡಬೇಕು. ಈ ಕಲ್ಪನೆ ಇರದೇ ಒಳ್ಳೇ ಫೋಟೊಗಳು ಸಿಗುವುದು ಬಹಳ ಕಷ್ಟ’ ಎನ್ನುತ್ತಾರೆ. 

  ಮನಸ್ಸು ಕ್ಲಿಕ್ಕಿಸಿದ ಫೋಟೋಗಳಿ ಸಿಗಲು ಸಾಧ್ಯವೇ? ಖಂಡಿತ ಅಂತಾರೆ ಸತ್ಯ. ಶೇ. 100ಕ್ಕೆ 100ರಷ್ಟು ಸಿಗುತ್ತದೆ. ಚಿತ್ರಗಳನ್ನು ನೋಡಿ, ನೋಡಿ ಕಣ್ಣಿಗೆ, ಮನಸ್ಸಿಗೆ ಕಸರತ್ತು ಮಾಡಿಸಿದರೆ ಒಳ್ಳೆ ಫೋಟೋಗಳು ಬರೋಕ್ಕೆ ಸಾಧ್ಯ. ನಾವು ನೆಗಟೀವ್‌ ಕಾಲದಲ್ಲೇ ಬ್ಯಾಗ್ರೌಂಡ್‌, ಕಲರ್‌ ಕಾಂಬಿನೇಷನ್‌ ನೋಡಿ ಒಳ್ಳೇ ಚಿತ್ರ ಆಗುತ್ತೆ ಅಂತ  ತೀರ್ಮಾನಿಸುತ್ತಿದ್ದೆವು ಅಂತ ವಿವರಿಸುತ್ತಾರೆ ಸತ್ಯ.

  ಸತ್ಯ ಇವನ್ನೆಲ್ಲ ಕಲಿತದ್ದು ರಾಜಗೋಪಾಲ್‌, ಬಿ. ಶ್ರೀನಿವಾಸರ ಹತ್ತಿರ. ಶ್ರೀನಿವಾಸ್‌ ಕಲರ್‌ ಕಾಂಬಿನೇಷನ್‌ನಲ್ಲಿ ಬಹಳ ನಿಪುಣರು. ಫೋಟೋ ಪ್ರಿಂಟಿಗೆ ಕೊಟ್ಟಾಗ- ರೀತಿ ಇದು ಹೀಗಬೇಕಿತ್ತು, ಸಬೆjಕ್ಟ್ ಇಲ್ಲಿದ್ದರೆ ಹಾಗೆ ಕಾಣುತ್ತಿತ್ತು’ ಅಂತೆಲ್ಲಾ ಸತ್ಯದರ್ಶನ ಮಾಡಿಸುತ್ತಿದ್ದರಂತೆ. 

  ರಾಜ್‌ಗೊàಪಾಲ್‌ ಅವರ ನೋಡೋ ನಡೆ ಇದೆಯಲ್ಲ. ಅದರಲ್ಲಿ ನಮಗೆ ಪಾಠವಾಗುತ್ತಿತ್ತು. ಮೊದಲು ಫೋಟೋ ಕೈಗೆ ತೆಗೆದು ಕೊಳ್ಳುತ್ತಿದ್ದರು. ನೋಡಿದಾಕ್ಷಣ ಏನೂ ಮಾತನಾಡದೇ ಇದ್ದರೆ ಫೋಟೋ ಚೆನ್ನಾಗಿ ಅಂತ.  ಆಹಾಹ ಅಂತ ಉದ್ಘಾರ ತೆಗೆದರೆ ಚುಂಬಾ ಚೆನ್ನಾಗಿದೆ ಅನ್ನೋ ಸೂಚನೆ. ಹೀಗೆ ಅವರ ಹಾವಾಭಾವದಲ್ಲಿಯೇ ನಾವು ಫೋಟೋಗ್ರಫಿ ಕಲಿತದ್ದು ಎಂದರು ಸತ್ಯ.  ಸತ್ಯರ ಮಾತುಗಳ ಸಾಕ್ಷಿಗೆ ನೂರಾರು ಫೋಟೋಗಳು ಇದ್ದವು.

 ಸತ್ಯ ಇದು ಸತ್ಯ
  ಸಿ.ಆರ್‌. ಸತ್ಯನಾರಾಯಣ ಎರಡು ಸಲ ವಿಶ್ವಕಪ್‌ ಕ್ಯಾಪ್ಟನ್‌ ಕೂಡ ಆಗಿದ್ದವರು. ಇವರ ನಾಯಕತ್ವದಲ್ಲಿ 2010 ಹಾಗೂ 2014ರಲ್ಲಿ ಇದರ ನೇತೃತ್ವ ಇವರೇ ವಹಿಸಿಕೊಂಡಿದ್ದರು. ಈವರಗೆ ಲಕ್ಷಾಂತರ ಫೋಟೋಗಳನ್ನು ತೆಗೆದಿದ್ದಾರೆ. ಅದರಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ 8ಸಾವಿರ ಫೋಟೋಗಳು ಸ್ವೀಕೃತವಾಗಿವೆ. ಹಾಗೇ ನೋಡಿದರೆ ನಾನಾ ದೇಶಗಳನ್ನು ಅಲೆದಿರುವ ಸತ್ಯ ಅವರಿಗೆ ಸುಮಾರು 800ಕ್ಕೂ ಅಧಿಕ ಪ್ರಶಸ್ತಿಗಳು ಸಂದಿವೆ. ಮೊನ್ನೆಯಷ್ಟೇ ಕೊಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಫೋಟೋ ಸ್ಪರ್ಧೆಯಲ್ಲಿ ಇವರಿಗೆ ಬಂಗಾರದ ಪದಕ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next