Advertisement

ಫೋಟೋಗ್ರಫಿಗೆ ಹೇಳಿ ಮಾಡಿಸಿದ ಎರಡು ತಾಣಗಳು

04:52 PM Jan 14, 2017 | Team Udayavani |

ಒಂದು ದಿನವನ್ನು ಅಸಾಮಾನ್ಯವಾಗಿ ಕಳೆಯಬೇಕು ಅಂತ ಫ್ರೆಂಡ್ಸ್‌ ಮಾತಾಡಿ ಕೊಳ್ಳುವುದು ಇದ್ದಿದ್ದೇ. ಒಂದು ಚೆಂದದೂರಿಗೆ ಹೋಗಿ ಬರಬೇಕು ಅನ್ನೋದು ಎಲ್ಲರದೂ ಸಾಮಾನ್ಯ ಆಸೆ. ಹಾಗಾಗಿಯೇ ವಾರಾಂತ್ಯಕ್ಕೆ ನಾಲ್ಕೈದು ಜನ ಸೇರಿಕೊಂಡರೆ ಸಾಕು ಯಾವುದೋ ಒಂದು ಬೆಟ್ಟ, ಯಾವುದೋ ಒಂದು ನದಿ ದಂಡೆ, ಯಾವುದೋ ಒಂದು ಊರು ನೋಡಿ ಬಂದರೇನೇ ಸಮಾಧಾನ. ಬೈಕರ್‌ಗಳಿಗಂತೂ ವಾರಕ್ಕೊಂದು ಲಾಂಗ್‌ ರೈಡ್‌ ಹೋಗದಿದ್ದರೆ ನೆಮ್ಮದಿ ಇರಲ್ಲ. ಫೋಟೋಗ್ರಾಫ‌ರ್‌ಗಳಿಗೆ ಒಂದು ದಿನವಾದರೂ ಕ್ಯಾಮೆರಾ ಹಿಡ್ಕೊಂಡ್‌ ಒಂದೇ ಒಂದು ಚೆಂದದ ಫೋಟೋ ತೆಗೆದರಷ್ಟೇ ವಾರವಿಡೀ ಉತ್ಸಾಹದಲ್ಲಿರಲು ಸಾಧ್ಯ. ಇಂಥಾ ಅಡ್ವೆಂಚರ್‌ ಮನಸ್ಸಿರೋರಿಗೆ ಎರಡು ಆಯ್ಕೆಗಳು.

Advertisement

ಮೈದನಹಳ್ಳಿ
ತುಮಕೂರು ಜಿಲ್ಲೆಯಲ್ಲಿರುವ ಮೈದನಹಳ್ಳಿ ಇನ್ನೊಂದ್‌ ಹೆಸರಿದೆ ಜಯಮಂಗಲಿ ಬ್ಲಾಕ್‌ಬಕ್‌ ಸ್ಯಾಂಕುcರಿ. ಯಾರಿಗೆಲ್ಲಾ ಫೋಟೋಗ್ರಫಿ ಮೋಹ ಇದೆಯೋ ಅವರೆಲ್ಲಾ ಯಾವತ್ತಾದರೊಂದು ಇಲ್ಲಿಗೆ ಹೋಗಿ ಬರಬೇಕು. ಇಲ್ಲೊಂದು ವಿಶಾಲವಾದ ಹುಲ್ಲುಗಾವಲು. ಅಲ್ಲಿ ನೂರಾರು ಬಗೆಯ ಪಕ್ಷಿಗಳು. ಇದು ಕೃಷ್ಣ ಮೃಗ ಸಂರಕ್ಷಣಾ ವನ್ಯಧಾಮ. ಹಾಗಾಗಿ ಕೃಷ್ಣ ಮೃಗ ಅತ್ತಕಡೆಯಿಂದ ಬಂದು ಇತ್ತಕಡೆಗೆ ಓಡಿ ಹೋಗುತ್ತದೆ. ಅದೃಷ್ಟವಿದ್ದರೆ ಮತ್ತು ಕ್ಯಾಮೆರಾ ರೆಡಿ ಇದ್ದರೆ ಒಂದು ಫೋಟೋ. ಇಲ್ಲದಿದ್ದರೆ ಕಣ್ಣೇ ಸಾಕು, ಖುಷಿ ಪಡಲು. ಸಾಧ್ಯವಾದರೆ ಇಲ್ಲಿ ನಿಂತು ಸಂಜೆ ಸೂರ್ಯ ಮುಳುಗೋದನ್ನು ನೋಡಬೇಕು. ಆ ಸೂರ್ಯ ಮುಳುಗೋ ದೃಶ್ಯ ನೋಡಲೆಂದೇ ಬಹುತೇಕರು ಅಲ್ಲಿಗೆ ಹೋಗುವುದಿದ್ದೆ. ನಿಧಾನಕ್ಕೆ ಸೂರ್ಯ ನಿರ್ಗಮಿಸುವ ಆ ಚೆಂದ ಹಾಗೇ ಕಣ್ಣಲ್ಲಿ ಉಳಿದುಹೋಗುತ್ತದೆ. ಮಧುಗಿರಿಯಲ್ಲಿ ಯಾರಾದರೂ ಫ್ರೆಂಡ್ಸ್‌ ಇದ್ದರೆ ವಿಚಾರಿಸಿ ಹೋಗಿಬನ್ನಿ. ಅರಣ್ಯ ಇಲಾಖೆಯಲ್ಲಿ ಮಾತಾಡಿದರೆ ಇನ್ನೂ ಒಳ್ಳೆಯದು.

ಎಷ್ಟು ದೂರ: ಸುಮಾರು 150 ಕಿಮೀ
ದಾರಿ: ಬೆಂಗಳೂರು ತುಮ
ಕೂರು ರಸ್ತೆಯಲ್ಲಿ ಸಾಗಿ ದಾಬಸ್‌ಪೇಟೆ ಫ್ಲೈ ಓವರ್‌ ಹತ್ತಿರ ಬಲಕ್ಕೆ ತಿರುಗಿ ಮಧು ಗಿರಿ ತಲುಪಿ ಅಲ್ಲಿಂದ ಎಡಕ್ಕೆ
ಹೋಗಿರುವ ಕೊಡೀಗೇನ ಹಳ್ಳಿ ರಸ್ತೆಯಲ್ಲಿ ಸಾಗಬೇಕು. ಸಿದ್ದನಹಳ್ಳಿ ಹತ್ತಿರ ಮತ್ತೆ ಎಡಕ್ಕೆ ದಾರಿ.

 ಹೊರಗಿನ ಬೆಟ್ಟ


ಅಷ್ಟೇನೂ ಪ್ರಸಿದ್ಧವಲ್ಲದಿದ್ದರೂ ಟ್ರೆಕ್ಕಿಂಗ್‌ ಮಾಡೋರಿಗೆ ಮಾತ್ರ ಈ ಬೆಟ್ಟ ಅಚ್ಚುಮೆಚ್ಚು. ಕೆಲವರು ಹಗಲಲ್ಲಿ ಟ್ರೆಕ್ಕಿಂಗ್‌ ಮಾಡಿದರೆ ಇನ್ನು ಕೆಲವರು ನೈಟ್‌ ಟ್ರೆಕ್‌ ಹೋಗಿ ಖುಷಿ ಪಡುವುದಿದೆ. ಅಂದಹಾಗೆ ಈ ಬೆಟ್ಟಕ್ಕೂ ನಂದಿ 
ಬೆಟ್ಟಕ್ಕೂ ತುಂಬಾ ಹತ್ತಿರದ ಸಂಬಂಧ. ಹೊರಗಿನ 
ಬೆಟ್ಟದಿಂದ ನಂದಿಬೆಟ್ಟಕ್ಕೆ ಕೆಲವೇ ಕಿಮೀಗಳ ಅಂತರವಿದೆಯಷ್ಟೇ.
ಹಾಗಾಗಿ ಬೆಟ್ಟ ನೋಡಲು ಹೋಗುವವರಾದರೆ ಒಂದೇ ದಿನ ಎರಡು ಬೆಟ್ಟ ನೋಡಿ ಖುಷಿ ಪಡಬಹುದು. ಟ್ರೆಕ್ಕಿಂಗ್‌ ಮಾಡೋರಾದರೆ ಒಂದು ಬೆಟ್ಟವನ್ನು ಮಣಿಸಿದರೆ ಸಾಕು. ಬೆಟ್ಟ ಎಷ್ಟು ಚೆಂದ ಇದೆಯೆಂದರೆ ಫೋಟೋಗ್ರಫಿ ಮಾಡೋರಿಗಂತೂ ಹಬ್ಬ. ಇಲ್ಲಿಗೆ ಹೋದರೆ ನೂರಾರು ಬಗೆಯ ಹಕ್ಕಿಗಳು ಕಾಣಸಿಗುತ್ತವೆ. ಹಕ್ಕಿಗಳ 
ಫೋಟೋ ತೆಗೆಯೋರು ಕಾದರೆ ಸಾಕಷ್ಟು ಒಳ್ಳೆಯ 
ಫೋಟೋಗಳು ಸಿಗುವುದರಲ್ಲಿ ಅನುಮಾನವಿಲ್ಲ. ಟ್ರೆಕ್ಕಿಂಗ್‌ ಹೋಗುವವರು ಸಾಕಷ್ಟು ನೀರು ಹಿಡಿದುಕೊಂಡು ಹೋಗುವುದು ಒಳ್ಳೆಯದು.

Advertisement

ಎಷ್ಟು ದೂರ: ಸುಮಾರು 65 ಕಿಮೀ.
ದಾರಿ: ಬೆಂಗಳೂರು ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಹೋಗಬೇಕು. ನಂದಿ ಬೆಟ್ಟ ಕ್ರಾಸ್‌ ಸಿಗುತ್ತದಲ್ಲ ಅಲ್ಲಿಂದ ನಂದಿಬೆಟ್ಟ ಕಡೆಗೆ ಸಾಗುವಾಗ ನಿಮಗೆ ಈ ಹೊರಗಿನ ಬೆಟ್ಟ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next