Advertisement

ಬೆಳಗಾವಿ : ಛಾಯಾಗ್ರಾಹಕನ ಕೈ ಹಿಡಿದ ಮತದಾರರು: 160 ಮತದಿಂದ ಭರ್ಜರಿ ಗೆಲುವು

02:26 PM Dec 30, 2020 | Team Udayavani |

ಬೆಳಗಾವಿ :ತಾಲೂಕಿನ ಹಿಂಡಲಗಾ ಗ್ರಾಮ ಪಂಚಾಯಿತ್ ಚುನಾವಣೆಯಲ್ಲಿ ವಾರ್ಡ್ ನಂಬರ್ 10ರಲ್ಲಿ ಸ್ಪರ್ದೆ ಮಾಡಿದ್ದ ಬೆಳಗಾವಿಯ ಖ್ಯಾತ ಛಾಯಾಗ್ರಾಹಕ ಡಿ.ಬಿ.ಪಾಟೀಲ 160 ಮತದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

Advertisement

ಸಾಮಾಜಿಕ ಕಾರ್ಯಕರ್ತರಾಗಿರುವ ಪಾಟೀಲ ವೃತ್ತಿಯಲ್ಲಿ ಛಾಯಾಚಿತ್ರ ಗ್ರಾಹಕರಾಗಿದ್ದರೂ ಸಹಕಾರ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಳಗಾವಿ ನಾರ್ವೇಕರ್ ಗಲ್ಲಿಯಲ್ಲಿ ಸ್ವಂತ ಫೋಟೋ ಸ್ಟುಡಿಯೋ ನಡೆಸುತ್ತಿದ್ದಾರೆ.

ಹಿಂಡಲಗಾ ರಕ್ಷಕ ಕಾಲೋನಿ ರಹವಾಸಿ ಸಂಘಟನೆಯ ಉಮೇದುದಾರರಾಗಿ ಡಿ.ಬಿ. ಪಾಟೀಲ ಈಗ ಪಂಚಾಯತ್ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

ಇದನ್ನೂ ಓದಿ:ಕಲಬುರಗಿ: ಗ್ರಾಮ ಪಂಚಾಯತ್ ಚುನಾವಣೆ ಗೆದ್ದ ತಾಲೂಕು ಪಂಚಾಯತ್ ಸದಸ್ಯ!

Advertisement

Udayavani is now on Telegram. Click here to join our channel and stay updated with the latest news.

Next