Advertisement

ಛಾಯಾಚಿತ್ರಗ್ರಾಹಕ ಕಿಂಗ್‌ಟನ್‌ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್‌ !

01:08 AM Jun 04, 2019 | Team Udayavani |

ಲಂಡನ್‌: ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ಪಂದ್ಯದ ವೇಳೆಛಾಯಾಚಿತ್ರಗ್ರಾಹಕರೊಬ್ಬರು ಒಂದು ಕೈಯಲ್ಲಿ ಅದ್ಭುತ ಕ್ಯಾಚ್‌ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ನಾಯಕ ಫಾ ಡು ಪ್ಲೆಸಿಸ್‌ ಭರ್ಜರಿಯಾಗಿ ಸಿಕ್ಸರ್‌ ಸಿಡಿಸಿ ಅರ್ಧ ಶತಕ ಪೂರೈಸಿದರು.

Advertisement

ಈ ಸಿಕ್ಸರ್‌ ಚೆಂಡು ನೇರವಾಗಿ ಮೈದಾನದ ಪೆವಿಲಿಯನ್‌ ಎಂಡ್‌ ಕಡೆ ಸಾಗಿತು. ಅಲ್ಲಿಯೇ ಛಾಯಾಚಿತ್ರ ತೆಗೆಯುತ್ತಿದ್ದ ಇಯಾನ್‌ ಕಿಂಗ್‌ಟನ್‌ ಒಂದೇ ಕೈಯಲ್ಲಿ ಅದ್ಭುತ ರೀತಿಯಲ್ಲಿ ಚೆಂಡನ್ನು ಹಿಡಿದರು. ಅಲ್ಲಿದ್ದ ಪ್ರೇಕ್ಷಕರೆಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸಿದರು. ಕಿಂಗ್‌ಸ್ಟನ್‌ ಅವರ ಪ್ರಯತ್ನವನ್ನು ” ಪ್ಲೇ ಆಫ್ ದ ಡೇ’ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ಮತ್ತು ಬಿಬಿಸಿ ಬಣ್ಣಿಸಿದೆ.

ಕಿಂಗ್‌ಟನ್‌ ಅವರು ಪ್ಲೆಸಿಸ್‌ ಸಿಕ್ಸರ್‌ ಹೊಡೆತದ ಪ್ರಯತ್ನವನ್ನು ತನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದರು. ತತ್‌ಕ್ಷಣವೇ ಆ ಚೆಂಡು ತನ್ನ ಕಡೆ ಬರುತ್ತಿದ್ದುದನ್ನು ಗಮನಿಸಿದ ಅವರು ಉದ್ದ ಲೆನ್ಸ್‌ನ ಕ್ಯಾಮರಾವನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿ ಚೆಂಡನ್ನು ಪಡೆದರು. ಬಳಿಕ ಕ್ಯಾಚ್‌ ಪಡೆದ ಸಾಹಸವನ್ನು ಪ್ರೇಕ್ಷಕರತ್ತ ತೋರಿಸುತ್ತ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next