ಉತ್ತರಪ್ರದೇಶ(ಬಸ್ತಿ): ವಿಚಿತ್ರ ಮಾದರಿಯ ಸಾರ್ವಜನಿಕ ಶೌಚಾಲಯದ ಫೋಟೋ ವೈರಲ್ ಆಗುವ ಮೂಲಕ ಉತ್ತರಪ್ರದೇಶ ಸುದ್ದಿಯಾಗಿದ್ದು, ಅದಕ್ಕೆ ಕಾರಣ ಯಾವುದೇ ಗೋಡೆ ಇಲ್ಲದೇ ಒಂದೇ ಕೋಣೆಯಲ್ಲಿ ಎರಡು ಟಾಯ್ಲೆಟ್ ಬೇಸಿನ್ ನಿರ್ಮಿಸಿರುವುದು!
ಇದನ್ನೂ ಓದಿ:ಲಂಕಾ ವಿರುದ್ಧದ ಟಿ20 ಸರಣಿಗೂ ರೋಹಿತ್ ಡೌಟ್: ಪಾಂಡ್ಯಾಗೆ ಸಿಗುತ್ತಾ ನಾಯಕತ್ವ?
ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಗೌರಾ ಧುಂಧಾ ಗ್ರಾಮದಲ್ಲಿನ ಶೌಚಾಲಯ ಸಂಕೀರ್ಣದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಜ್ಜತ್ ಘರ್ (ಘನತೆಯ ಮನೆ) ಎಂಬ ಶೌಚಾಲಯ ಸಂಕೀರ್ಣವನ್ನು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಎಂದು ವರದಿ ತಿಳಿಸಿದೆ. ಇಜ್ಜತ್ ಘರ್ ನಲ್ಲಿರುವ ಕೆಲವು ಕೋಣೆಗಳಲ್ಲಿ ಯಾವುದೇ ಅಡ್ಡ ಗೋಡೆಗಳಿಲ್ಲದೇ ಶೌಚಾಲಯದಲ್ಲಿ ಎರಡು ಬೇಸಿನ್ ಹಾಕಲಾಗಿದ್ದು, ಕೆಲವು ಕೋಣೆಗಳಿಗೆ ಬಾಗಿಲು ಕೂಡಾ ಇಲ್ಲ ಎಂದು ವರದಿ ವಿವರಿಸಿದೆ.
ಈ ಬಗ್ಗೆ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ತಿಳಿಸಿರುವುದಾಗಿ ವರದಿ ಹೇಳಿದ್ದು, ಶೌಚಾಲಯದಲ್ಲಿ ಯಾವುದೇ ಅಡ್ಡ ಗೋಡೆಗಳಿಲ್ಲದೇ ಎರಡು ಬೇಸಿನ್ ಹಾಕಿರುವ ಬಗ್ಗೆ ಮತ್ತು ಬಾಗಿಲು ಅಳವಡಿಸದಿರುವ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.