Advertisement

ಫೋಟೋ ಕಾಪಿ ನೋಟುಗಳು ವಶಕ್ಕೆ : ಮನೆ ಮಾಲಕನ ವಿಚಾರಣೆ

08:30 PM Apr 01, 2023 | Team Udayavani |

ಬದಿಯಡ್ಕ: ಕೇಂದ್ರ ಸರಕಾರ ನಿಷೇಧಿಸಿದ 1000 ರೂಪಾಯಿಯ ಕಲರ್‌ ಫೋಟೋ ಕಾಪಿಗಳ ಬೃಹತ್‌ ಸಂಗ್ರಹ ಪತ್ತೆಹಚ್ಚಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮನೆಯ ಮಾಲಕ ಚೆರ್ಕಳ ನಿವಾಸಿಯಾದ ಶಾಫಿಯನ್ನು ಬದಿಯಡ್ಕ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಮನೆಯಲ್ಲಿ ಬಾಡಿಗೆಗಿದ್ದ ಫಾರೂಕ್‌ನನ್ನು ಸಂಪರ್ಕಿಸಲು ಕರೆ ಮಾಡಿದ್ದರೂ, ಫೋನ್‌ ಸ್ವಿಚ್‌ ಆಫ್‌ ಆಗಿದೆ.

Advertisement

ಈ ಮನೆಯಲ್ಲಿ ನೋಟುಗಳ ಫೋಟೋ ಕಾಪಿಗಳನ್ನು ಬಚ್ಚಿಟ್ಟಿರುವುದು ತನಗೆ ತಿಳಿದಿಲ್ಲ ಎಂದು ಶಾಫಿ ಪೊಲೀಸರಲ್ಲಿ ಹೇಳಿದ್ದಾರೆ. ಪೊಲೀಸರು ಈ ಮನೆಗೆ ದಾಳಿ ಮಾಡಿದಾಗ ಮನೆಯಲ್ಲಿದ್ದವರು ಕಾರಿನಲ್ಲಿ ಪರಾರಿಯಾಗಿದ್ದರು. ವಶಪಡಿಸಿಕೊಂಡ ನೋಟುಗಳ ಫೋಟೋ ಕಾಪಿಗಳನ್ನು ಕಾಸರಗೋಡು ಜ್ಯುಡೀಶಿಯಲ್‌ ಮೆಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next