Advertisement
ಧ್ವನಿಭಾಷಿಕ ಚಿಕಿತ್ಸೆಯು ಶ್ರವಣ ಸಾಮರ್ಥ್ಯದ ಗರಿಷ್ಠ ಮಟ್ಟದ ಪ್ರಗತಿಯನ್ನು ತಂತ್ರಜ್ಞಾನದ ನೆರವಿನಿಂದ ಸಾಧಿಸುವ ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಿದೆ. ಈ ವಿಧಾನವು ಅರ್ಥವತ್ತಾದ ಧ್ವನಿಯನ್ನು ಸಹಜವಾಗಿ ಮಿದುಳಿಗೆ ತಲುಪಿಸುವ ಕೆಲಸ ಮಾಡುತ್ತದೆ. ಸಹಜ ಶ್ರವಣ ಶಕ್ತಿಯುಳ್ಳ ಇತರರಂತೆಯೇ ತನ್ನ ಮೂಲಕ ಧ್ವನಿಯನ್ನು ಆಲಿಸಲು ಸಾಧ್ಯ ಎನ್ನುವುದಾಗಿ ಧ್ವನಿಭಾಷಿಕ ಚಿಕಿತ್ಸೆಯು ಪ್ರತಿಪಾದಿಸುತ್ತದೆ. ಆದ್ದರಿಂದ ಈ ತರಬೇತಿಯು ಸಹಜ ಧ್ವನಿಭಾಷಿಕ ಚಟುವಟಿಕೆಯನ್ನು ಹೊಂದಿರುತ್ತದೆ. ಧ್ವನಿ ತರಬೇತಿಯಲ್ಲಿ ಅಕ್ಷರಗಳ ಮೇಲೆ ಅಸಹಜ ಎನ್ನುವಷ್ಟು ಒತ್ತು ನೀಡಲಾಗುತ್ತದೆ. ಅಲ್ಲದೆ, ಅದು ಆರಂಭದಲ್ಲಿ ಅಕ್ಷರಗಳು, ಪದಗಳು ಮತ್ತು ವಾಕ್ಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ; ಆದರೆ ಸಹಜ ಕೇಳುವಿಕೆಯ ಸಾಮರ್ಥ್ಯ ಉಳ್ಳವರು ಅಕ್ಷರಗಳು, ಪದ ಅಥವಾ ವಾಕ್ಯಗಳ ಮೇಲೆ ಅಷ್ಟು ಅಸಹಜ ಪ್ರಮಾಣದ ಒತ್ತು ನೀಡುವುದಿಲ್ಲ.
ಧ್ವನಿಭಾಷಿಕ ಚಿಕಿತ್ಸೆಯನ್ನು ಪಡೆಯುತ್ತಿರುವ ಮಗುವಿನ ಜತೆಗೆ ಮಾತನಾಡುವಾಗ ನೀವು ನೆನಪಿಡಬೇಕಾದದ್ದು
1. ಕೇಳುವಂತಹ ವಾತಾವರಣವನ್ನು ಸೃಷ್ಟಿಸಿ.
2. ಧ್ವನಿಯತ್ತ ಮಗುವಿನ ಗಮನವನ್ನು ಪ್ರೋತ್ಸಾಹಿಸಿ.
3. ಮಗು ಮಾತಿನ ಧ್ವನಿ ಗ್ರಹಣ ನಡೆಸುವುದನ್ನು ಉತ್ತೇಜಿಸಿ.
4. ಭಾಷೆಯ ಜ್ಞಾನವನ್ನು ಹೆಚ್ಚಿಸಿ.
5. ಭಾಷೆಯ ಮಾತುಕತೆ ಮತ್ತು ಗ್ರಹಿಸುವಿಕೆಯನ್ನು ಉತ್ತೇಜಿಸಿ.
6. ಸ್ವತಂತ್ರ ಕಲಿಕೆಯನ್ನು ಬೆಂಬಲಿಸಿ
2. ಧ್ವನಿಯತ್ತ ಮಗುವಿನ ಗಮನವನ್ನು ಪ್ರೋತ್ಸಾಹಿಸಿ.
3. ಮಗು ಮಾತಿನ ಧ್ವನಿ ಗ್ರಹಣ ನಡೆಸುವುದನ್ನು ಉತ್ತೇಜಿಸಿ.
4. ಭಾಷೆಯ ಜ್ಞಾನವನ್ನು ಹೆಚ್ಚಿಸಿ.
5. ಭಾಷೆಯ ಮಾತುಕತೆ ಮತ್ತು ಗ್ರಹಿಸುವಿಕೆಯನ್ನು ಉತ್ತೇಜಿಸಿ.
6. ಸ್ವತಂತ್ರ ಕಲಿಕೆಯನ್ನು ಬೆಂಬಲಿಸಿ
ಹೆತ್ತವರಿಗೆ ಕೆಲವು ಸಲಹೆಗಳು
1. ಯಾವತ್ತು ಕೂಡ ಬಾಯಿಯನ್ನು ಮರೆಮಾಚಿಕೊಂಡು ಮಗುವಿನ ಜತೆಗೆ ಮಾತನಾಡಬೇಡಿ. ಹಾಗೆ ಮಾಡಿದರೆ ಮಗುವಿಗೆ ಪೂರ್ಣ ಪ್ರಮಾಣದಲ್ಲಿ ಧ್ವನಿ ಗಮನವನ್ನು ನೀಡುವುದಕ್ಕಾಗುವುದಿಲ್ಲ; ಅಲ್ಲದೆ ಬಾಯಿಯನ್ನು ಮರೆ ಮಾಡಿಕೊಂಡರೆ ಅದು ಧ್ವನಿಯ ಕೇಳುವಿಕೆಗೆ ತಡೆಯಾಗಿಯೂ ಪರಿಣಮಿಸಬಹುದು.
2. ”ಬಾಯಿಯ ಮೇಲೆ ಕೈ”, ”ತುಟಿಗಳ ಚಲನೆ”ಯಂತಹ ದೃಶ್ಯ ಸಂಕೇತಗಳನ್ನು ಕೂಡ ಮರೆ ಮಾಚದಿರಿ. ಹಾಗೆ ಮಾಡಿದರೆ ದೃಶ್ಯ ಕಲಿಕೆ ಮತ್ತು ದೃಶ್ಯ ಸ್ಮರಣೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು.
3. ಮಗುವಿನ ಜತೆಗೆ ಮಾಡನಾಡುವಾಗ ಮುಖವನ್ನು ಕಿವಿಗೆ ತುಂಬಾ ಹತ್ತಿರ ತಂದು ಮಾಡನಾಡಬೇಡಿ. ಹಾಗೆ ಮಾಡುವುದರಿಂದ ಮಗು ಪರಿವರ್ತಿತ ಮಾತನ್ನು ಕಲಿಯುವ ಸಾಧ್ಯತೆಯಿದೆ.
Related Articles
4. ದೊಡ್ಡದಾಗಿ ಮಾತನಾಡಬೇಕಿಲ್ಲ; ಅದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗೆ ಮಾಡಿದರೆ ನಿಮಗೆ ಧ್ವನಿ ತೊಂದರೆ ಉಂಟಾಗುವ ಸಾಧ್ಯತೆಯೇ ಹೆಚ್ಚು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊಕ್ಲಿಯರ್ ಇಂಪ್ಲಾಂಟ್ ವಿಶ್ಲೇಷಣೆ ಮತ್ತು ನಿರ್ವಹಣೆ ನಡೆಸುವ ವಿಶೇಷಜ್ಞ ತಂಡವಿದೆ. ಶ್ರವಣ ದೋಷವುಳ್ಳ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ಧ್ವನಿಭಾಷಿಕ ಚಿಕಿತ್ಸೆಯ ತರಬೇತಿ ಪಡೆದ ತಂಡ ಇಲ್ಲಿದೆ. ಧ್ವನಿಭಾಷಿಕ ಚಿಕಿತ್ಸೆಯಲ್ಲಿ ಯಾವುದೇ ಸಹಾಯ ಅಥವಾ ನೆರವು ಬೇಕಾಗಿದ್ದಲ್ಲಿ ಸಂಪರ್ಕಿಸ ಬಹುದಾಗಿದೆ.
ಡಾ| ರದೀಶ್ ಕುಮಾರ್ ಬಿ.,
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕೆಎಂಸಿ, ಮಂಗಳೂರು
Advertisement