Advertisement

PhonePಯಿಂದ ನೂತನ ಸೇವೆ|ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಾಗಿ ‘ಆಟೋಪೇ’

05:41 PM Aug 17, 2021 | Team Udayavani |

ನವದೆಹಲಿ: ಭಾರತದ ಅತಿದೊಡ್ಡ ಡಿಜಿಟಲ್ ಪೇಮೆಂಟ್‌ ಕಂಪನಿ PhonePe  ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳಿಗಾಗಿ UPI ಆಧಾರಿತ ಆಟೋಪೇ ಸೌಲಭ್ಯವನ್ನು ಘೋಷಿಸಿದೆ.

Advertisement

ಅದು ತನ್ನ ಗ್ರಾಹಕರಿಗೆ ಕೆಲವೇ ಸೆಕೆಂಡುಗಳಲ್ಲಿ ತಮ್ಮ ಮ್ಯೂಚುವಲ್ ಫಂಡ್ SIP ಗಳನ್ನು ಸೆಟ್‌ ಅಪ್‌ ಮಾಡಲು ಅನುವು ಮಾಡಿಕೊಡುತ್ತದೆ. ಈ ಮೂಲಕ ದೇಶದಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಿದ ಮೊದಲ ಡಿಜಿಟಲ್ ಹೂಡಿಕೆ ಪ್ಲಾಟ್‌ಫಾರ್ಮ್‌ PhonePe .

UPI ಆಟೋಪೇ ಮೂಲಕ, PhonePe ಗ್ರಾಹಕರು ಅವರ SIP ಗಳನ್ನು ಕೇವಲ 3 ಹಂತಗಳಲ್ಲಿ ಮಾಡಿಕೊಳ್ಳಬಹುದು.

ನೀವು ಹೂಡಿಕೆ ಮಾಡಬೇಕಾಗಿರುವ ಫಂಡ್‌ ಆಯ್ಕೆ ಮಾಡಿ, ಮಾಸಿಕ SIP ಹೂಡಿಕೆ ಮೊತ್ತವನ್ನು ನಮೂದಿಸಿ, ಮತ್ತು UPI PIN ಅನ್ನು ದೃಢೀಕರಿಸಿ. ಇದು ದೇಶಾದ್ಯಂತ ಲಕ್ಷಾಂತರ ಗ್ರಾಹಕರಿಗೆ ವಿನೂತನ ಅನುಭವ ನೀಡುತ್ತದೆ. PhonePe ಆ್ಯಪ್‌ ನಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆದಾರರು ಮತ್ತು ಹೊಸ ಹೂಡಿಕೆದಾರರಿಗೆ UPI ಆಟೋಪೇ ಆಯ್ಕೆಯ ಮೂಲಕ SIP ಲಭ್ಯವಿದೆ.

PhonePe ನಲ್ಲಿ ಹೂಡಿಕೆಗಳಿಗಾಗಿ UPI ಆಟೋಪೇ ಅನ್ನು ಹೇಗೆ ಹೊಂದಿಸುವುದು?:

Advertisement

PhonePe ಆ್ಯಪ್‌ ಹೋಂ ಪುಟದಲ್ಲಿ ಹೂಡಿಕೆ ವಿಭಾಗದಲ್ಲಿ‘SIP ಪ್ರಾರಂಭಿಸಿ’ ಐಕಾನ್‌ ಮೇಲೆ ಕ್ಲಿಕ್‌ ಮಾಡಿ.

ನಿಮ್ಮ ಹೂಡಿಕೆಯ ಶೈಲಿ (ಕನ್ಸರ್ವೇಟಿವ್/ಮಾಡರೇಟ್/ಅಗ್ರೆಸ್ಸಿವ್‌ ನಿಂದ) ಮತ್ತು ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಿ (ಕಡಿಮೆ ಅವಧಿ/ಮಧ್ಯಮ/ದೀರ್ಘಾವಧಿ)

ಫಂಡ್‌ ಆಯ್ಕೆ ಮಾಡಿ ಮತ್ತು ಮಾಸಿಕ ಹೂಡಿಕೆ ಮೊತ್ತವನ್ನು ನಮೂದಿಸಿ.

ನಿಯಮಿತ ಹೂಡಿಕೆಗಳನ್ನು ಸೆಟ್‌ ಅಪ್‌ ಮಾಡಲು, ನಿಮ್ಮ UPI PIN ಅನ್ನು ನಮೂದಿಸಿ.

PhonePe ನಲ್ಲಿ ಲಭ್ಯವಿರುವ ಯಾವುದೇ ಮ್ಯೂಚುವಲ್ ಫಂಡ್ ಹೂಡಿಕೆ ಆಯ್ಕೆಗಳ ಮೂಲಕ ಮಾಸಿಕ SIP ಗಳನ್ನು ಆಯ್ಕೆ ಮಾಡುವಾಗ ಗ್ರಾಹಕರು UPI ಆಟೋಪೇ ವೈಶಿಷ್ಟ್ಯವನ್ನು ಸಹ ಪ್ರವೇಶಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next