ಫಿಲಿಫೈನ್ಸ್: ಕೆಲವರು ತಮ್ಮ ಸಂಗಾತಿ ಮೇಲಿನ ಪ್ರೀತಿಯನ್ನು ತೋರ್ಪಡಿಸಲು ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಾರೆ. ಕೆಲವರು ದುಬಾರಿ ಉಡುಗೊರೆಗಳನ್ನು ಕೊಟ್ಟು ಸಂತಸಪಡಿಸಿದರೆ, ಇನ್ನೂ ಕೆಲವರು ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಾರೆ. ಆದರೆ ಫಿಲಿಫೈನ್ಸ್ ವ್ಯಕ್ತಿಯೊಬ್ಬ ತಾನು ಹೋದಲ್ಲೆಲ್ಲಾ ಕರೆದುಕೊಂಡು ಹೋಗುವುದಾಗಿ ತನ್ನ ಹೆಂಡತಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಹೊಸ ಉಪಾಯವನ್ನು ಕಂಡುಕೊಂಡು ಭಾರಿ ಸುದ್ದಿಯಾಗಿದ್ದಾನೆ.
ರೇಮಂಡ್ ಮತ್ತು ಜೊವಾನ್ನೆ ಫಾರ್ಚುನಾಡೋ ದಂಪತಿಗಳು, ಫಿಲಿಪೈನ್ಸ್‌ನ ಪಲವಾನ್‌ನಲ್ಲಿರುವ ಕೊರೊನ್‌ನಲ್ಲಿ ದೀರ್ಘಕಾಲ ಒಟ್ಟಿಗೆ ಸಮಯವನ್ನು ಕಳೆಯಲು ಯೋಜಿಸಿದ್ದರು. ಫ್ರೀಲ್ಯಾನ್ಸ್ ಮಾಡೆಲ್ ಆಗಿ ಕೆಲಸ ಮಾಡುವ ಜೋನ್ನೆ ಕೊನೆಯ ಕ್ಷಣದಲ್ಲಿ ತನ್ನ ಯೋಜನೆಗಳನ್ನು ರದ್ದುಗೊಳಿಸಬೇಕಾಯಿತು. ಇದಕ್ಕಾಗಿ ರೇಮಂಡ್ ತಮ್ಮ ಪ್ರವಾಸ ಮುಂದುವರೆಸಲೆಂದು ಉಪಾಯವೊಂದನ್ನೂಹೂಡಿ, ತಾನು ಹೋದಲ್ಲೆಲ್ಲಾ ತಮ್ಮ ಮಡದಿಯ ಮೆಮೆ-ಫೇಸ್ ಅನ್ನು (ಮುಖ) ದಿಂಬಿನ ರೂಪದಲ್ಲಿ ಮಾಡಿ ತಮ್ಮ ರೇಮಂಡ್ ಪ್ರವಾಸವನ್ನು ಮುಂದುವರೆಸಿದ್ದಾನೆ. ಇದೀಗ “ರೊಮ್ಯಾಂಟಿಕ್” ರಜಾದಿನದ ಫೋಟೋಗಳು ಮತ್ತು ವಿಡಿಯೋಗಳು ಫೇಸ್‌ಬುಕ್‌ನಲ್ಲಿ ವೈರಲ್ ಆಗುತ್ತಿವೆ.
ನಾವಿಬ್ಬರು ಬಹಳ ಅನ್ಯೋನ್ಯವಾಗಿದ್ದೇವೆ. ಕೊನೆ ಕ್ಷಣದಲ್ಲಿ ನಮ್ಮ ಯೋಜನೆ ರದ್ದಾಗಿದ್ದರಿಂದ ತಾನು ತುಂಬಾ ಬೇಸರಗೊಂಡಿದ್ದೆ. ಈ ಬೇಸರವನ್ನು ಕಳೆಯಲೆಂದು ಈ ಯೋಜನೆಯನ್ನು ರೂಪಿಸಿಕೊಂಡೆ. ಆರಂಭದಲ್ಲಿ ಹೆಂಡತಿಯ ಮುಖವನ್ನು ಕನ್ವೇಯರ್ ಬೆಲ್ಟ್‌ನಲ್ಲಿ ಹೊಂದಿರುವ ದಿಂಬಿನ ಸಣ್ಣ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದು ನನ್ನ ತಾಯ್ನಾಡಿನಲ್ಲಿ ವೈರಲ್ ಆಯಿತು. ಬಳಿಕ ಹಲವರು ನನ್ನನ್ನು ಸಂದರ್ಶನ ಮಾಡಿದ್ದಾರೆ ಅವರ ಬಳಿ ಈ ಆಲೋಚನೆ ಹೇಗೆ ಬಂತು ಎಂದು ವಿವರಿಸಿದ್ದೇನೆ ಎಂದು ರೇಮಂಡ್ ಹೇಳಿದ್ದಾನೆ.
ಇದನ್ನೂ ಓದಿ: ಬ್ಯಾಟಿಂಗ್ ನಲ್ಲಿ ಕೇವಲ 12 ರನ್ ಗಳಿಸಿದರೂ ಗೆಲುವಿನ ಹೀರೋ ಆದ ಸಂಜು ಸ್ಯಾಮ್ಸನ್
ರೇಮಂಡ್ ಅವರ ಪೋಸ್ಟ್‌ಗೆ ಸುಮಾರು 20 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿದ್ದು, ಅನೇಕರನ್ನು ತಮ್ಮ ಅಭಿಪ್ರಾಯ ಹಾಗೂ ಭಾವನೆಗಳನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ.