ಪ್ರಿನ್ಸ್ ಫಿಲಿಪ್, ಫಿಲಿಪ್ ಗ್ರೀಸ್ ರಾಜ ಜಾರ್ಜ್ I ಮತ್ತು ರಾಜಕುಮಾರಿ ಆಲಿಸ್ ದಂಪತಿಯ ಮಗ ಪ್ರಿನ್ಸ್ ಆಂಡ್ರ್ಯೂ.ಇವರು 1921ರಲ್ಲಿ ಜನಿಸಿದರು. ಫಿಲಿಪ್ ನ ತಂದೆ, ಕಿಂಗ್ ಜಾರ್ಜ್ I ರ ಕಿರಿಯ ಮಗ, ಗ್ರೀಸ್ ನ ರಾಜಕುಮಾರ ಆಂಡ್ರ್ಯೂ. ತಾಯಿ ರಾಜಕುಮಾರಿ ಆಲಿಸ್ (1885-1969), ಮಿಲ್ಫೋರ್ಡ್ ಹೆವೆನ್ ನ 1 ನೇ ಮಾರ್ಕ್ವೆಸ್ ಲೂಯಿಸ್ ಅಲೆಕ್ಸಾಂಡರ್ ಮೌಂಟ್ ಬ್ಯಾಟನ್ ಮತ್ತು ಹೆಸ್ಸೆ ರಾಜಕುಮಾರಿ ವಿಕ್ಟೋರಿಯಾ ಮತ್ತು ವಿಕ್ಟೋರಿಯಾ ರಾಣಿಯ ಮೊಮ್ಮಗಳು ರೈನ್ ಅವರ ಹಿರಿಯ ಮಗಳು.
ಪಿನ್ಸ್ ಫಿಲಿಪ್, ಶಿಶುವಾಗಿದ್ದಾಗ, ಅವರ ಕುಟುಂಬವನ್ನು ಗಡಿಪಾರು ಮಾಡಲಾಯಿತು, ಅವರ ತಾಯಿಯನ್ನು ಕುಟುಂಬದಿಂದ ತ್ಯಜಿಸಲಾಯಿತು, ತಂದೆ ತನ್ನ ಪ್ರೇಯಸಿಯೊಂದಿಗೆ ಕುಟುಂಬವನ್ನು ತೊರೆದು ಹೋದರು.
ಗ್ರೇಟ್ ಬ್ರಿಟನ್‌ನಲ್ಲಿ ಬೆಳೆದ ಫಿಲಿಪ್, ಸ್ಕಾಟ್ಲೆಂಡ್ ನ ಮೊರೆ, ಎಲ್ಗಿನ್ ಬಳಿಯ ಗೋರ್ಡನ್ ಸ್ಟೌನ್ ಶಾಲೆಯಲ್ಲಿ ಮತ್ತು ಇಂಗ್ಲೆಂಡ್‌ನ ಡೆವೊನ್ ನ ಡಾರ್ಟ್ಮೌತ್ ನ ರಾಯಲ್ ನೇವಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ಜನವರಿ 1940 ರಿಂದ ಎರಡನೇ ಮಹಾಯುದ್ಧದ ಅಂತ್ಯದವರೆಗೆ, ಅವರು ಮೆಡಿಟೆರೇನಿಯನ್ ಮತ್ತು ಪೆಸಿಫಿಕ್ ಯುದ್ಧಗಳಲ್ಲಿ ರಾಯಲ್ ನೇವಿಯೊಂದಿಗೆ ಸೇವೆ ಸಲ್ಲಿಸಿರುವುದು ಅವರ ಹೆಚ್ಚುಗಾರಿಕೆ.
ಫೆಬ್ರವರಿ 28, 1947 ರಂದು, ಫಿಲಿಪ್ ಅವರ ದೂರದ ಸೋದರ ಸಂಬಂಧಿ ರಾಜಕುಮಾರಿ ಎಲಿಜಬೆತ್ ಅವರ ವಿವಾಹವು ನವೆಂಬರ್ 20, 1947 ರಂದು ವೆಸ್ಟ್ ಮಿನಿಸ್ಟರ್ ನಲ್ಲಿ ನಡೆಯಿತು. ಫಿಲಿಪ್ ಹಾಗೂ ಎಲಿಜಬೆತ್ ನಾಲ್ವರು ಮಕ್ಕಳನ್ನು ಹೊಂದಿದ್ದಾರೆ.
ಪ್ರಿನ್ಸ್ ಫಿಲಿಪ್ ಯುನೈಟೆಡ್ ಕಿಂಗ್ ಡಂ ನ ರಾಣಿ ಎಲಿಜಬೆತ್ II ರ ಪತಿಯಾದ ಮೇಲೆಯೇ ಖ್ಯಾತಿಗೆ ಬಂದಿದ್ದು. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಸೇರಿದಂತೆ ಹಲವಾರು ದತ್ತಿಗಳನ್ನು ಬೆಂಬಲಿಸಿ ಫಿಲಿಫ್ ಖ್ಯಾತನಾಮರಾದರು. ಬಲಪಂಥೀಯ ದೃಷ್ಟಿಕೋನಗಳಿಗಾಗಿ ಅವರು ಹೆಸರುವಾಸಿಯಾಗಿದ್ದರು.
ಜೂನ್ ನಲ್ಲಿ 100ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿಕೊಳ್ಳುವ ಒಂದು ತಿಂಗಳ ಮೊದಲು ಫಿಲಿಪ್ ವಿಧಿವಶರಾಗಿದ್ದಾರೆ. ನೂರು ವರ್ಷ ಪೂರೈಸುತ್ತಿದ್ದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕವಾಗಿ ಫಿಲಿಪ್ ಅವರಿಗೆ ಶುಭಾಶಯಗಳು ಹರಿದು ಬಂದಿದ್ದವು. ಕಳೆದ ನವೆಂಬರ್ ತಿಂಗಳಿನಲ್ಲಿ ಎಲಿಜಬೆತ್, ಫಿಲಿಪ್ ದಂಪತಿ 73ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.