Advertisement
ವಿವಿ ಪ್ರಭಾರ ಕುಲಪತಿ ಪೊ›.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ, ಪಿಎಚ್‌ಡಿ ಪ್ರವೇಶ ಪರೀಕ್ಷೆಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಸ್ವಲ್ಪಮಟ್ಟಿನ ವಿನಾಯಿತಿ ನೀಡುವಂತೆ ಶಿಕ್ಷಣ ಮಂಡಳಿ ಕೆಲ ಸದಸ್ಯರು ಒತ್ತಾಯಿಸಿದರು.
ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಸಲು ಕೌನ್ಸಿಲ್ ಅನುಮೋದನೆ ನೀಡಿದೆ. ಈ ವೇಳೆ ಮಂಡಳಿಯ ಕೆಲವು ಸದಸ್ಯರು, ಹಿಂದುಳಿದ ವರ್ಗದ ವಿದ್ಯಾರ್ಥಿಗಳು(ಒಬಿಸಿ) ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿದರು. ಪ್ರಸ್ತುತ ಎಸ್ಸಿ/ಎಸ್ಟಿ ಮತ್ತು ವರ್ಗ-1ರ ವಿದ್ಯಾರ್ಥಿಗಳಿಗೆ ವಿವಿ ಮೀಸಲಾತಿ ಒದಗಿಸಿದ್ದು, ಈ ಮೀಸಲಾತಿ ಪ್ರಕಾರ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 50ಕ್ಕೆ 10 ಅಂಕ ಹಾಗೂ ಎಸ್ಸಿ/ಎಸ್ಟಿ ಮತ್ತು ವರ್ಗ-1 ವಿದ್ಯಾರ್ಥಿಗಳು 50ಕ್ಕೆ 8 ಅಂಕಗಳನ್ನು ಪಡೆಯಬೇಕೆಂದು ನಿರ್ಧರಿಸಲಾಗಿದೆ.
Related Articles
Advertisement
ಇದಕ್ಕೆ ಉತ್ತರಿಸಿದ ಪ್ರಭಾರ ಕುಲಪತಿ ಪ್ರೋ.ಸಿ.ಬಸವರಾಜು, ಯುಜಿಸಿ ನಿಯಮಾವಳಿ ಪ್ರಕಾರ ಪರಿಸರ ವಿಜ್ಞಾನ ವಿಷಯದ ಬೋಧನೆ ಮಾಡಲು ಈ ವಿಷಯದಲ್ಲಿ ಎಂಎಸ್ಸಿ ಪದವಿ ಹೊಂದಿರಬೇಕಿದೆ. ಅಲ್ಲದೆ ಈ ವಿಷಯ ಬೋಧನೆ ಮಾಡುವವರಿಗೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೂ ಅವಕಾಶ ನೀಡಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಮಿತಿ ಸದಸ್ಯರು, ಪರಿಸರ ವಿಜಾnನ ವಿಷಯದ ತರಗತಿ ವಾರದಲ್ಲಿ 4 ಗಂಟೆಗಳು ಮಾತ್ರ ನಡೆಯಲಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಕಾಲೇಜುಗಳಿಗೆ ಕೇವಲ 4 ಗಂಟೆ ತರಗತಿಗಾಗಿ ಎಂಎಸ್ಸಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಕಷ್ಟವಾಗಲಿದೆ ಅಭಿಪ್ರಾಯ ಮುಂದಿಟ್ಟರು. ಈ ಹಿನ್ನೆಲೆಯಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿರುವ ಅಧ್ಯಾಪಕರನ್ನೇ ನೇಮಕ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಪ್ಪಲಾಯಿತು.
ಉಳಿದಂತೆ ಬಿ.ಎಡ್ ಕಾಲೇಜುಗಳ ಶೈಕ್ಷಣಿಕ ಅವಧಿಯನ್ನು ಜೂನ್-ಜುಲೈ ಅವಧಿಯಲ್ಲೇ ಪ್ರಾರಂಭಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಮೈಸೂರು ವಿವಿ ಕುಲಸಚಿವೆ ಡಿ.ಭಾರತಿ, ಪರೀಕ್ಷಾಂಗ ಕುಲಸಚಿವ ಪ್ರೋ. ಜೆ.ಸೋಮಶೇಖರ್ ಸೇರಿದಂತೆ ಶಿಕ್ಷಣ ಮಂಡಳಿಯ ಸದಸ್ಯರು ಭಾಗವಹಿಸಿದ್ದರು
ವಿದೇಶಿ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಕಡ್ಡಾಯಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿವಿಧ ವಿಷಯಗಳ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ವಿದೇಶಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದ ಕುರಿತು ಬ್ರಿಡ್ಜ್ ಕೋರ್ಸ್ ಕಡ್ಡಾಯಗೊಳಿಸುವ ಬಗ್ಗೆ ಮೈಸೂರು ವಿವಿ ಶಿಕ್ಷಣ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಬುಧವಾರ ವಿವಿ ಪ್ರಭಾರ ಕುಲಪತಿ ಪ್ರೋ.ಸಿ.ಬಸವರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಪ್ರಸಕ್ತ ಶೈಕ್ಷಣಿಕ ವರ್ಷ(2018-19) ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುವ ಎಲ್ಲಾ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ವಿದೇಶಿ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಇಂಗ್ಲಿಷ್ ತರಬೇತಿ ಕೋರ್ಸ್ ಆರಂಭಿಸಲು ಅನುಮೋದನೆ ನೀಡಲಾಯಿತು. ಆದರೆ, ಬ್ರಿಡ್ಜ್ ಕೋರ್ಸ್ ತರಬೇತಿಯನ್ನು ಒಂದು ತಿಂಗಳ ಬದಲು ಮೂರು ತಿಂಗಳಿಗೆ ವಿಸ್ತರಿಸುವಂತೆ ಕೆಲ ಸದಸ್ಯರು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರಭಾರ ಕುಲಪತಿ ಪ್ರೋ.ಸಿ. ಬಸವರಾಜು, ವಿದೇಶದಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ಮೈಸೂರು ವಿವಿಗೆ ವ್ಯಾಸಂಗ ಮಾಡಲು ಬರುವ ಬಹುತೇಕ ವಿದೇಶಿ ವಿದ್ಯಾರ್ಥಿಗಳು ಆಂಗ್ಲ ಬಾಷೆಯ ಮೇಲೆ ಒಳ್ಳೆಯ ಹಿಡಿತ ಹೊಂದಿರುವುದಿಲ್ಲ. ಇದದಿಂದಾಗಿ ಸಾಕಷ್ಟು ವಿದ್ಯಾರ್ಥಿಗಳು ಇಂಗ್ಲಿಷ್ ಓದಲು, ಮಾತನಾಡಲು ಸಾಧ್ಯವಾಗದೆ ತೊಂದರೆ ಅನುಭವಿಸಲಿದ್ದು, ಬೋಧಕ ಸಿಬ್ಬಂದಿ ಹಾಗೂ ಪಿಎಚ್.ಡಿ ಮಾರ್ಗದರ್ಶಕರಿಗೆ ಇದು ಸವಾಲಾಗಿದೆ. ಹೀಗಾಗಿ ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಬಾಷೆಯ ಬಗ್ಗೆ ಕೌಶಲ್ಯ ಹಾಗೂ ಹಿಡಿತ ಹೊಂದುವಂತೆ ಮಾಡಲು ಸಾಮಾನ್ಯ ತರಗತಿಗಳ ಪ್ರಾರಂ¸ಕ್ಕೂ ಮುನ್ನ ಆಂಗ್ಲ ಬಾಷೆಯ ಬಗ್ಗೆ ಒಂದು ತಿಂಗಳ ಬ್ರಿಡ್ಜ್ ಕೋರ್ಸ್ ಪಡೆಯುವುದನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಈ ತರಬೇತಿಯನ್ನು ಮೈಸೂರು ವಿವಿಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೇವೆಗಳ ಕೇಂದ್ರ(ಸಿಪಿಡಿಪಿಎಸ್) ವತಿಯಿಂದ ನೀಡಲಿದ್ದು, ಇದಕ್ಕಾಗಿ ಪ್ರತಿ ವಿದ್ಯಾರ್ಥಿ 5 ಸಾವಿರ ರೂ. ಪ್ರವೇಶ ಶುಲ್ಕ ಪಾವತಿಸಬೇಕಿದೆ ಎಂದು ಅವರು, ಬಾರತದಲ್ಲಿ ಪದವಿ ವ್ಯಾಸಂಗ ಮಾಡಿ ರುವ ವಿದೇಶಿ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ನ ಅಗತ್ಯವಿರುವುದಿಲ್ಲ ಎಂದು ಹೇಳಿದರು.