Advertisement
ಒಂದೂವರೆ ತಿಂಗಳಿಂದ ರಣ ಬಿಸಿಲನ್ನು ಲೆಕ್ಕಿಸದೆ ರಾಜಕೀಯ ಪಕ್ಷಗಳು ಭರ್ಜರಿಯಾಗಿ ಮತ ಬೇಟೆ ನಡೆಸಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿವೆ. ಮತದಾರರನ್ನು ಸೆಳೆಯಲು ಎಲ್ಲ ತಂತ್ರಗಾರಿಕೆ, ರಾಜಕೀಯ ಪಟ್ಟುಗಳನ್ನು ಬಳ ಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಅಂತಿಮವಾಗಿ ಮತದಾರರನ ಮೇಲೆ ಭಾರ ಹಾಕಿದ್ದಾರೆ.
Related Articles
Advertisement
ಘಟಾನುಘಟಿಗಳು ಕಣದಲ್ಲಿಇಬ್ಬರು ಮಾಜಿ ಸಿಎಂಗಳು, ಇಬ್ಬರು ಹಾಲಿ ಕೇಂದ್ರ ಸಚಿವರು ಸ್ಪರ್ಧೆಯಲ್ಲಿ ರುವುದರಿಂದ ಚುನಾವಣೆ ಪ್ರತಿಷ್ಠೆ ಪಡೆದುಕೊಂಡಿದೆ. ಹಾವೇರಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪರ್ಧಿಸಿದ್ದರೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಧಾರವಾಡದಿಂದ, ಭಗವಂತ ಖೂಬಾ ಬೀದರ್ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದ್ದಾರೆ. ಬೆಳಗಾವಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್, ಬೀದರ್‌ನಿಂದ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರೆ, ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಬಿಜೆಪಿಯಿಂದ ಕಣದಲ್ಲಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರ ಸಹೋದರಿ ಗೀತಾ ಶಿವರಾಜ್‌ಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆಯಿಂದ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರ ಸಹೋದರ ಕೆ. ರಾಜಶೇಖರ್ ಹಿಟ್ನಾಳ್ ಕೊಪ್ಪಳದಿಂದ ಸ್ಪರ್ಧೆಯಲ್ಲಿದ್ದಾರೆ. ಬಳ್ಳಾರಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಸಂಡೂರು ಶಾಸಕ ತುಕಾರಾಂ ಸ್ಪರ್ಧಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ವಿರುದ್ಧ ಬಂಡೆದಿದ್ದರೆ, ದಾವಣಗೆರೆಯಲ್ಲಿ ವಿನಯ್ ಕುಮಾರ್ ಕಾಂಗ್ರೆಸ್ ವಿರುದ್ಧ ಸೆಟೆದು ನಿಂತಿದ್ದಾರೆ. ಒಟ್ಟು ಕ್ಷೇತ್ರಗಳು 14 (10 ಸಾಮಾನ್ಯ,
4 ಮೀಸಲು) ಅತೀ ಹೆಚ್ಚು ಮತದಾರರು
ಕಲಬುರಗಿ: 20.98 ಲಕ್ಷ
ಅತೀ ಕಡಿಮೆ ಮತದಾರರು
ಉತ್ತರ ಕನ್ನಡ: 16.41 ಲಕ್ಷ
ಅತೀ ಹೆಚ್ಚು ಅಭ್ಯರ್ಥಿಗಳು
ದಾವಣಗೆರೆ: 30
ಅತೀ ಕಡಿಮೆ ಅಭ್ಯರ್ಥಿಗಳು
ವಿಜಯಪುರ: 8
ಅತೀ ಹೆಚ್ಚು ಮತಗಟ್ಟೆಗಳು
ರಾಯಚೂರು: 2,203
ಅತೀ ಕಡಿಮೆ ಮತಗಟ್ಟೆಗಳು
ಧಾರವಾಡ: 1,893
ಒಟ್ಟು ಮತದಾರರು
2.59 ಕೋಟಿ
ಪುರುಷರು 1,29,48,978
ಮಹಿಳೆಯರು 1,29,66,570
ಯುವ ಮತದಾರರು 6.90 ಲಕ್ಷ
ಪೊಲೀಸರು 45,000ಕ್ಕೂ ಹೆಚ್ಚು
ಒಟ್ಟು ಮತಗಟ್ಟೆಗಳು 28,257
ಒಟ್ಟು ಅಭ್ಯರ್ಥಿಗಳು 227 ಮೊದಲ ಹಂತದ 14 ಕ್ಷೇತ್ರಗಳಲ್ಲಿ ಮತದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈಗ ಮಂಗಳವಾರ ಮತದಾನ ನಡೆಯಲಿರುವ 14 ಕ್ಷೇತ್ರಗಳ ಮತದಾರರು ತಮ್ಮ ಮನೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಹೊರಬಂದು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಮೊದಲ ಹಂತದ ಮತದಾನ ದಾಖಲೆ ಹಿಂದಿಕ್ಕುವ ರೀತಿ ಮತದಾನ ಮಾಡಬೇಕು ಎಂಬುದು ಚುನಾವಣ ಆಯೋಗದ ಮನವಿಯಾಗಿದೆ.
–ಮನೋಜ್ ಕುಮಾರ್ ಮೀನಾ,
ರಾಜ್ಯ ಮುಖ್ಯ ಚುನಾವಣಾಧಿಕಾರಿ