Advertisement

ಫಾರ್ಮಸಿಸ್ಟ್‌ಗಳ ವೇತನ ಹೆಚ್ಚಳಕ್ಕೆ ಆಗ್ರಹ

01:00 PM Jan 11, 2020 | Suhan S |

ಬೈಲಹೊಂಗಲ: ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 3500 ಕ್ಕಿಂತ ಹೆಚ್ಚು ಫಾರ್ಮಸಿಸ್ಟ್‌ರ ವೇತನ, ಭತ್ಯೆಗಳ ಹಾಗೂ ವೃಂದ ಮತ್ತು ನೇಮಕಾತಿ ಬದಲಾವಣೆ ಮಾಡಲು ಆಗ್ರಹಿಸಿ ಫಾರ್ಮಸಿಸ್ಟ್‌ಗಳು ಶಾಸಕ ಮಹಾಂತೇಶ ದೊಡಗೌಡರ, ತಹಶೀಲ್ದಾರ ಡಾ.ದೊಡ್ಡಪ್ಪ ಹೂಗಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಫಾರ್ಮಸಿಸ್ಟ್‌ಗಳ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ವಾಲಿ ಮಾತನಾಡಿ, ಸರ್ಕಾರಹಾಗೂ ಇಲಾಖೆಗಳಿಗೆ ಹಲವು ಮನವಿಗಳನ್ನು ಸಲ್ಲಿಸಿದರೂ ಇದುವರೆಗೆ ಕ್ರಮ ಜರುಗಿಸಿಲ್ಲ. ಅಖೀಲ ಭಾರತೀಯ ತಾಂತ್ರಿಕ ಪರಿಷತ್ತುಕಾಯ್ದೆ 1987 ರಂತೆ ಫಾರ್ಮಸಿಯನ್ನು ಇಂಜಿನಿಯರಿಂಗ್‌ ಕೋರ್ಸ್‌ಗಳಂತೆ ತಾಂತ್ರಿಕ ವಿದ್ಯಾರ್ಹತೆ ಎಂದು ಪರಿಗಣಿಸಿ ವೇತನ ಭತ್ಯೆ ನೀಡುವುದು. ಕೇಂದ್ರ ಹಾಗೂ ನೆರೆ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್‌ಗಳಿಗಿಂತ ಇಲ್ಲಿಯವರು ಕಡಿಮೆ ವೇತನ ಹಾಗೂ ಭತ್ಯೆಗಳನ್ನುಪಡೆಯುತ್ತಿದ್ದು, ಈ ಅನ್ಯಾಯ ಸರಿಪಡಿಸಲು ಇದುವರೆಗೆ ಇಲಾಖೆಯಿಂದ ಸಾಧ್ಯವಾಗಿಲ್ಲ. ನೆರೆ ರಾಜ್ಯ ಹಾಗೂ ಕೇಂದ್ರ ಸರಕಾರದ ಫಾರ್ಮಸಿಸ್ಟರು ಪಡೆಯುತಿರುವ ಆ ಸೌಲಭ್ಯವನ್ನು ನಮಗೆ ವಿಸ್ತರಿಸುವುದು.

1965 ರಂದು ಹೊರಡಿಸಿರುವ ವೃಂದ ಮತ್ತು ನೇಮಕಾತಿಯನ್ನು ಮುಂದುವರೆಸಿರುವುದರಿಂದ ಫಾರ್ಮಸಿಸ್ಟರಿಗೆ ಬಡ್ತಿ ಅವಕಾಶಗಳಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಈಗಿರುವ ವಿದ್ಯಾರ್ಹತೆಗನುಗುಣವಾಗಿ ವೃಂದ ಮತ್ತು ನೇಮಕಾತಿ ಬದಲಾಯಿಸಿ ಬಡ್ತಿ ಅವಕಾಶಗಳನ್ನು ಹೆಚ್ಚಿಸುವುದು. ನೆರೆ ರಾಷ್ಟ್ರದಲ್ಲಿರುವಂತೆ ಫಾರ್ಮಸಿಸ್ಟ್‌ ಹುದ್ದೆಯ ಪದನಾಮವನ್ನು, ಫಾರ್ಮಸಿ ಅಧಿಕಾರಿ ಎಂದು ಬದಲಾವಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿಯಲ್ಲಿ ತಿಳಿಸಲಾಗಿದೆ.

ಅಶೊಕ ಮೊಖಾಸಿ, ನಿರ್ಮಲಾ ಕುರಕುರಿ, ವಿರೇಶ ಕುಬಸದ, ನಾಗರಾಜ ರಾಜನಾಳ,ಮಹೇಶ ಅಕ್ಕಸಾಲಿಗ, ಮಾಹಾದೇವ ಕುಂದರಗಿ, ರಾಜಕುಮಾರ ಕೋಲಕಾರ, ಮಂಜುನಾಥ ದೇವಲಾಪೂರ, ವೈಶಾಲಿ ಮುತ್ತೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next