Advertisement

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

03:29 PM Nov 29, 2020 | Suhan S |

ಕಿಚ್ಚ ಸುದೀಪ್ ವಿಕ್ರಾಂತ್ ರೋಣನಾಗಿ ಕಾಣಿಸಿಕೊಳ್ಳುತ್ತಿರುವ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ ಫ್ಯಾಂಟಮ್. ಈಗಾಗಲೇ ಫ್ಯಾಂಟಮ್ ತಂಡ ಹೈದರಾಬಾದ್ ನಲ್ಲಿ ಚಿತ್ರೀಕರಣವನ್ನು ಪೂರ್ತಿಗೊಳಿಸಿ, ಅಂತಿಮ ಹಂತದ ಚಿತ್ರೀಕರಣದ ಯೋಜನೆಯಲ್ಲಿ ಬ್ಯುಸಿಯಾಗಿದೆ.

Advertisement

ಇದೇ ಡಿಸೆಂಬರ್‌ ಮೊದಲವಾರದಿಂದ “ಫ್ಯಾಂಟಮ್‌’ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರೀಕರಣದಲ್ಲಿ ಚಿತ್ರದಲ್ಲಿ ಬರುವ ಸ್ಪೆಷಲ್‌ ಸಾಂಗ್‌ ಒಂದನ್ನು ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ. ಇನ್ನು ಈ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಲು ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್ ಅವರನ್ನು ತರೆತರುವ ಯೋಚನೆಯಲ್ಲಿದೆ ಚಿತ್ರತಂಡ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರತಂಡ, “ಸಿನಿಮಾದಲ್ಲಿ ಬರುವ ಸ್ಪೆಷಲ್‌ ಹಾಡೊಂದನ್ನು ವಿಶೇಷವಾಗಿ ಚಿತ್ರೀಕರಿಸಲು ಪ್ಲಾನ್‌ ಮಾಡಿ ಕೊಂಡಿರುವುದು ನಿಜ. ಆದರೆ ಈ ಹಾಡಿನಲ್ಲಿ ಸುದೀಪ್‌ ಅವರ ಜೊತೆ ಯಾರು ನೃತ್ಯ ಮಾಡಲಿದ್ದಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ. ಕತ್ರಿನಾಕೈಫ್ ಅವರೊಂದಿಗೂ ಮಾತುಕತೆ ನಡೆಸಲಾಗಿದೆ.ಕತ್ರಿನಾ ಡೇಟ್‌ ಹೊಂದಾಣಿಕೆ ಆಗದಿದ್ದರೆ, ನೋರಾ ಫ‌ತೇಹಿ ಅವರನ್ನು ಕರೆತರಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದಿದೆ.

ಅನೂಪ್ ಭಂಡಾರಿ ಫ್ಯಾಂಟಮ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಜನೀಶ್ ಲೋಕ್ ನಾಥ್ ಮ್ಯೂಸಿಕ್ ಚಿತ್ರಕ್ಕಿದೆ. ಶಾಲಿನಿ ಮಂಜುನಾಥ್ ಹಾಗೂ ಜ್ಯಾಕ್ ಮಂಜು ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಸುದೀಪ್ ನೊಂದಿಗೆ, ನಿರೂಪ್ ಭಂಡಾರಿ,ನೀತಾ ಅಶೋಕ್ ಹಾಗೂ ಇತರ ಕಲಾವಿದರು ಪ್ರಮುಖರ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next