Advertisement
ಹತ್ತು ವರ್ಷಗಳಲ್ಲಿ ದೇಶದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ, ರಾಜ್ಯ ಸರಕಾರಗಳ ವಿಶ್ವವಿದ್ಯಾನಿಲಯಗಳಲ್ಲಿ, ಖಾಸಗಿ ವಿವಿಗಳಲ್ಲಿ ಹಾಗೂ ಡೀಮ್ಡ್ ಟು ಬಿ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದಿರುವ ಎಲ್ಲ ಪಿಎಚ್.ಡಿ. ಮಹಾ ಪ್ರಬಂಧಗಳನ್ನು ಮರುಪರಿಶೀಲಿಸಲು ಆಯೋಗ ಮುಂದಾಗಿದೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ದತ್ತಾಂಶಗಳ ಪ್ರಕಾರ, ವರ್ಷದಿಂದ ವರ್ಷಕ್ಕೆ ದೇಶದಲ್ಲಿ ಪಿಎಚ್.ಡಿ. ಮಾಡುವವರ ಸಂಖ್ಯೆ ಏರುತ್ತಿದೆ. ಇದು ಸಹಜವಾದರೂ, 2011ರ ಹೊತ್ತಿಗೆ 81,430 ಪಿಎಚ್.ಡಿ. ಪ್ರಬಂಧಗಳು ಅಂಗೀಕಾರಗೊಂಡಿದ್ದವು. ಆದರೆ, 2017ರ ಹೊತ್ತಿಗೆ ಇದು 1,61,412 ರಷ್ಟಾಗಿತ್ತು. ಸರಾಸರಿಗಿಂತ ಶೇ. 50ರಷ್ಟು ಮಹಾಪ್ರಬಂಧಗಳು ಹೀಗೆ ಏಕಾಏಕಿ ಏರಿಕೆ ಆಗಿರುವುದು ಹಲವಾರು ಕುತೂಹಲಗಳನ್ನು ಹುಟ್ಟುಹಾಕಿದ್ದು, ಈ ಹಿನ್ನೆಲೆಯಲ್ಲಿ 10 ವರ್ಷಗಳಲ್ಲಿ ಮಾನ್ಯತೆ ಪಡೆದ ಮಹಾ ಪ್ರಬಂಧಗಳನ್ನು ಪರಿಶೀಲಿಸಲು ಆಯೋಗ ಮುಂದಾಗಿದೆ ಎನ್ನಲಾಗಿದೆ.
Related Articles
ಭಾರತದಲ್ಲಿ ಪಿಎಚ್.ಡಿ. ಪ್ರದಾನದ ಬಗ್ಗೆ ಹಿಂದಿನಿಂದಲೂ ದೂರುಗಳು ಕೇಳಿಬರುತ್ತಿವೆ. ಹಾಗಾಗಿ, ಕಳಪೆ ಅಥವಾ ನಕಲಿ ಮಹಾಪ್ರಬಂಧಗಳನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ, ಉನ್ನತ ಶಿಕ್ಷಣ ರಂಗದಲ್ಲಿ ಮತ್ತಷ್ಟು ಸತ್ವಯುತ ಸಂಶೋಧನೆಗಳಿಗೆ ನಾಂದಿ ಹಾಡಲು ಯುಜಿಸಿ ಇಂಥ ಮಹಾಪ್ರಬಂಧಗಳ ಮರುಪರಿಶೀಲನೆಯಂಥ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
Advertisement