Advertisement
ಇದುವರೆಗೂ ಸೀಟು ಸಿಗದವರು, ಸಿಕ್ಕಿಯೂ ಪ್ರವೇಶ ಪಡೆಯದಿರುವವರು ಅಂತಿಮ ಸುತ್ತಿನಲ್ಲಿ ಸೀಟು ಪಡೆಯಬಹುದು. ಕಡ್ಡಾಯವಾಗಿ 2 ಲಕ್ಷ ರೂ. ಕಾಷನ್ ಡೆಪಾಸಿಟ್ ಪಾವತಿಸಿದವರು ಮಾತ್ರ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ ಭಾಗವಹಿಸಬಹುದು. ಆ. 26ರಿಂದ 27ರ ಮಧ್ಯಾಹ್ನ 2ರ ವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು ಕಾಷನ್ ಡೆಪಾಸಿಟ್ ಮಾಡಬೇಕು. ಬಳಿಕ ಇದುವರೆಗೂ ಮೂಲ ದಾಖಲೆ ಸಲ್ಲಿಸದೇ ಇರುವವರು ಅಂದು ಕೆಇಎ ಕಚೇರಿಯಲ್ಲಿ ಸಲ್ಲಿಸಬೇಕು. ಆ. 27ರ ಸಂಜೆ 6ರಿಂದ ಆ. 29ರ ಬೆಳಗ್ಗೆ 10ರ ವರೆಗೆ ಇಚ್ಛೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು. ಆ. 29ರಂದು ಸಂಜೆ 4ಕ್ಕೆ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಆ. 30ರಿಂದ 31ರೊಳಗೆ ಶುಲ್ಕ ಪಾವತಿಸಿ ಸೆಪ್ಟಂಬರ್ 2ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬಹುದು ಎಂದು ಹೇಳಿದರು. Advertisement
PG ದಂತ ವೈದ್ಯ ಅಂತಿಮ ಸುತ್ತಿನ ಸೀಟು ಹಂಚಿಕೆ ನಾಳೆಯಿಂದ
01:07 AM Aug 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.