Advertisement

ಪಿಜಿ ಸಿಇಟಿ ಪಠ್ಯ ಪ್ರಕಟ: ಮುಂದಿನ ತಿಂಗಳು ಪರೀಕ್ಷೆ

12:35 AM May 12, 2024 | Team Udayavani |

ಬೆಂಗಳೂರು: ರಾಜ್ಯದ ವಿವಿಗಳಲ್ಲಿನ ಎಂಬಿಎ, ಎಂಸಿಎ, ಎಂಟೆಕ್‌, ಎಂಇ ಮತ್ತು ಎಂಆರ್ಕ್‌ ಕೋರ್ಸ್‌ಗಳಿಗೆ ನಡೆಯಲಿರುವ ಪಿಜಿಸಿಇಟಿ- 2024-25ರ ಪಠ್ಯವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.

Advertisement

ಯುಜಿಸಿಇಟಿಯಲ್ಲಿ ಪಠ್ಯ ಹೊರತಾದ ಪ್ರಶ್ನೆಗಳನ್ನು ಕೇಳಿ ಸೃಷ್ಟಿಯಾಗಿದ್ದ ಗೊಂದಲಗಳಿಂದ ಎಚ್ಚೆತ್ತುಕೊಂಡಿರುವ ಕೆಇಎ, ತನ್ನ ವೆಬ್‌ಸೈಟ್‌ನಲ್ಲೇ ಪಿಜಿಸಿಇಟಿ ಪಠ್ಯವನ್ನು ಪ್ರಕಟಿಸಿದೆ. ಜೂ.29 ಮತ್ತು 30ರಂದು ಪಿಜಿ ಸಿಇಟಿ ನಡೆಯಲಿದೆ ಎಂದು ತಾತ್ಕಾಲಿಕ ದಿನಾಂಕವನ್ನು ಕೆಇಎ ನೀಡಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ (ವಿಟಿಯು)ಯ ಜತೆ ಸಮಾಲೋಚನೆ ನಡೆಸಿ ಸಿಲೆಬಸ್‌ ಸಿದ್ಧಪಡಿಸಲಾಗಿದೆ.

ವಿವಿಗಳು ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಮಾದರಿ ಗಮನಿಸಿ ಸಿಲೆಬಸ್‌ ಮತ್ತು ಪ್ರಶ್ನಾ ಪತ್ರಿಕೆ ಮಾದರಿ ರಚಿಸಲಾಗಿದೆ. ಕೆಇಎಯ ಪ್ರಕಟಿಸಿರುವ ಪರಿಷ್ಕೃತ ಸಿಲೆಬಸ್‌ನ ಆಧಾರದಲ್ಲಿ ಪಿಜಿ ಸಿಇಟಿ ನಡೆಸಲಾಗುತ್ತದೆ ಎಂದು ಕೆಇಎ ತನ್ನ ಸುತ್ತೋಲೆಯಲ್ಲಿ ಹೇಳಿದೆ.

ನೀಟ್‌ ಅಭ್ಯರ್ಥಿಗಳ ಸಿಇಟಿ ನೋಂದಣಿ: ಕೆಇಎ ಸ್ಪಷ್ಟನೆ
ಬೆಂಗಳೂರು: ನೀಟ್‌ ಪರೀಕ್ಷೆ ಬರೆದವರು ಕೂಡ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಪಡೆಯಲು ಸಿಇಟಿಗೆ ನೋಂದಣಿ ಮಾಡಿಸಬೇಕು ಎಂಬ ನಿಯಮ ಹಿಂದಿನಿಂದಲೂ ಜಾರಿಯಲ್ಲಿದೆ. ಇದು ಹೊಸದಾಗಿ ಜಾರಿಯಾಗಿರುವ ನಿಯಮವಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪಷ್ಟಪಡಿಸಿದೆ. ಈ ಸಂಬಂಧ ಕೆಇಎ ಹೊಸ ನಿಯಮ ಜಾರಿಗೊಳಿಸಿರುವುದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನನು ಕೂಲವಾಗಿದೆ ಎಂದು ಕೆಲವರು ಅನಗತ್ಯವಾಗಿ ಗುಲ್ಲೆಬ್ಬಿಸುತ್ತಿ ದ್ದಾರೆ ಎಂದು ಕೆಇಎ ಹೇಳಿದೆ.

ಪ್ರಸಕ್ತ ಸಾಲಿನಲ್ಲಿ ನೀಟ್‌ ಬರೆದಿರುವ ಸುಮಾರು 2 ಲಕ್ಷ ಅಭ್ಯರ್ಥಿಗಳು ಸಿಇಟಿಗೆ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 50,000 ವಿದ್ಯಾರ್ಥಿಗಳು ಹೊರ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ವೈದ್ಯಕೀಯ ಸೀಟು ಹಂಚಿಕೆಗೆ ಕೆಇಎ ನೋಡಲ್‌ ಸಂಸ್ಥೆ ಎಂದೂ ಕೆಇಎ ಸ್ಪಷ್ಟಪಡಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next