Advertisement

ಬೆಂವಿವಿಯಲ್ಲಿ ಔಷಧ ಸಸ್ಯಗಳ ಪಿಜಿ ಆರಂಭ

06:14 AM Mar 15, 2019 | |

ಬೆಂಗಳೂರು: ಬೆಂವಿವಿ ಸಸ್ಯಶಾಸ್ತ್ರ ವಿಭಾಗದ ಶತಮಾನೋತ್ಸವದ ಅಂಗವಾಗಿ ಔಷಧ ಸಸ್ಯಗಳ ಕುರಿತ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಪ್ರತ್ಯೇಕ ವಿಭಾಗ ಪ್ರಾರಂಭಿಸಲಾಗುವುದು ಎಂದು ಕುಲಪತಿ ಡಾ. ಕೆ. ಆರ್‌.ವೇಣುಗೋಪಾಲ್‌ ತಿಳಿಸಿದರು. ಸಸ್ಯಶಾಸ್ತ್ರ ವಿಭಾಗದ ಶತಮಾನೋತ್ಸವದ ಹಿನ್ನೆಲೆ ಉಪನ್ಯಾಸ ಸರಣಿ ಉದ್ಘಾಟಿಸಿ ಮಾತನಾಡಿದರು.

Advertisement

ಸಸ್ಯಶಾಸ್ತ್ರ ವಿಭಾಗಕ್ಕೆ 50 ಎಕರೆ ಜಾಗವನ್ನು ಜ್ಞಾನಭಾರತಿ ಆವರಣದಲ್ಲಿ ನೀಡಿದ್ದು, ಶತಮಾನೋತ್ಸವದ ಅಂಗವಾಗಿ ಬಟಾನಿಕಲ್‌ ಗಾರ್ಡ್‌ನ್‌, ಗಾಜಿನ ಮನೆ, ಅತ್ಯಾಧುನಿಕ ವ್ಯವಸ್ಥೆಯುಳ್ಳ ಸಭಾಂಗಣ, ಅಂಚೆ ಚೀಟಿ ಬಿಡುಗಡೆಗೊಳಿಸಲಾಗುವುದು. ಜತೆಗೆ ಔಷಧಿ ಸಸ್ಯಗಳ ಸ್ನಾತಕೋತ್ತರ ಪದವಿ ವಿಭಾಗ ಆರಂಭಿಸುತ್ತೇವೆ. ಇದಕ್ಕಾಗಿ 2 ಕೋಟಿ ರೂ.ಗಳನ್ನು ಆಯವ್ಯಯ ಶೀರ್ಷಿಕೆ ಅಡಿಯಲ್ಲಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಸಸ್ಯಶಾಸ್ತ್ರ ವಿಭಾಗವನ್ನು 1919ರಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಪ್ರೊ. ಎಂ. ಎ.ಸಂಪತ್‌ ಕುಮಾರ್‌ ಸ್ಥಾಪಿಸಿದರು. 2019ಕ್ಕೆ ಸಸ್ಯಶಾಸ್ತ್ರ ಭಾಗಕ್ಕೆ ನೂರು ವರ್ಷಗಳು ಪೂರೈಸಿದ್ದು, ಈ ವಿಭಾಗವು ಸಂಶೋಧನೆ ಮತ್ತು ಬೋಧನೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದೆ ಎಂದರು.

ಕುಲಸಚಿವ ಬಿ.ಕೆ.ರವಿ ಮಾತನಾಡಿ, ಸಸ್ಯಶಾಸ್ತ್ರ ವಿಭಾಗವು ಬೆಂಗಳೂರು ವಿವಿಯಲ್ಲಿ ಬಲಿಷ್ಟ ವಿಭಾಗವಾಗಿದೆ. ಇಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ವಿಭಾಗದ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next