Advertisement

ಪಿಎಫ್‌ಐ : ಇನ್ನೂ ನಾಲ್ವರಿಗೆ ಶೋಧ ಚುರುಕು… 

10:41 AM Sep 24, 2022 | Team Udayavani |

ಮಂಗಳೂರು : ಜಿಲ್ಲೆಯಲ್ಲಿ ಎನ್‌ಐಎ ಹಾಗೂ ಕರ್ನಾಟಕ ಪೊಲೀಸರು ಸೆ. 22ರಂದು ನಡೆಸಿದ ಕಾರ್ಯಾಚರಣೆಗಳು ಏಕಕಾಲಕ್ಕೇ ನಡೆದರೂ ಎರಡರ ಹಿನ್ನೆಲೆ, ಉದ್ದೇಶಗಳೂ ಬೇರೆಯೇ ಎನ್ನುವ ಮಾಹಿತಿಯೀಗ ಹೊರಬಿದ್ದಿದೆ.

Advertisement

ಎನ್‌ಐಎ ತಮ್ಮ ಕಾರ್ಯಾಚರಣೆಯ ವಿವರಗಳನ್ನು ಸೆ.22ರ ರಾತ್ರಿ ಪ್ರಕಟನೆ ಮೂಲಕ ನೀಡಿದ್ದು ಅದರಲ್ಲಿ ಜಿಲ್ಲೆಯ ಯಾವುದೇ ಆರೋಪಿಗಳ ಹೆಸರಿಲ್ಲ.

ಪಿಎಫ್‌ಐಯ ಐವರು ಮುಖಂಡರನ್ನು ಬಂಧಿಸಿದ್ದು ಎನ್‌ಐಎ ಅಲ್ಲ, ಬದಲಾಗಿ ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಸೆ.22ರಂದು ದಾಖಲಾಗಿರುವ ಪ್ರಕರಣದ ಆಧಾರದಲ್ಲಿ ಕರ್ನಾಟಕ ಪೊಲೀಸರು ಎನ್ನುವ ಅಂಶ ಸ್ಪಷ್ಟಗೊಂಡಿದೆ.

ಲಭ್ಯ ಮಾಹಿತಿ ಪ್ರಕಾರ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಈ ಕಾರ್ಯಾಚರಣೆ ನಡೆಸಿದೆ. ಎನ್‌ಐಎ ನಡೆಸಿದ ದಾಳಿ ಪ್ರತ್ಯೇಕವಾಗಿದ್ದು, ಕೆ.ಜಿ.ಹಳ್ಳಿ ಪ್ರಕರಣದೊಂದಿಗೆ ಸಂಬಂಧವಿಲ್ಲ.

ಉಗ್ರ ನಿಗ್ರಹ ದಳದಿಂದ ಪ್ರಕರಣ
ಪೊಲೀಸರು ಗುರುವಾರ ಜಿಲ್ಲೆಯಲ್ಲಿ ಪಿಎಫ್ಐಯ ಐದು ಮುಖಂಡರನ್ನು ಬಂಧಿಸಿದ್ದಾರೆ. ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಸಂಚು ಮತ್ತು ಅಪರಾಧಿಕ ಸಂಚು ಅಡಿಯಲ್ಲಿ ಕೆ.ಜಿ.ಹಳ್ಳಿ ಠಾಣೆಯಲ್ಲಿ ಸೆ.22ರಂದು ಪ್ರಕರಣ ದಾಖಲಾಗಿತ್ತು. ರಾಜ್ಯ ಉಗ್ರ ನಿಗ್ರಹ ದಳದ(ಎಟಿಸಿ) ಅಧಿಕಾರಿಗಳು ವಿವಿಧ ಜಿಲ್ಲೆಗಳ 19 ಮಂದಿಯ ವಿರುದ್ಧ ಕೇಸು ದಾಖಲಿಸಿದ್ದರು. ರಾಜ್ಯದಲ್ಲಿ ಅಶಾಂತಿಗೆ ಷಡ್ಯಂತ್ರ ರೂಪಿಸಿದ್ದಲ್ಲದೆ, ಯುವಕರನ್ನು ಪ್ರಚೋದಿಸಿ ಸಮಾಜದ ನೆಮ್ಮದಿಗೆ ಭಂಗ ತರುವ ಸಂಚಿನ ಬಗ್ಗೆ ಪ್ರಕರಣ ದಾಖಲಾಗಿತ್ತು. ಪಿಎಫ್ಐ ಮುಖಂಡ ಅಬ್ದುಲ್‌ ಖಾದರ್‌, ವಿಟ್ಲ ಮಹಮ್ಮದ್‌ ತಪಿರ್‌, ಜೋಕಟ್ಟೆಯ ಎ.ಕೆ.ಅಶ್ರಫ್, ಕಾವೂರಿನ ನವಾಜ್‌ ಹಾಗೂ ಹಳೆಯಂಗಡಿಯ ಮೊಯ್ದಿನ್‌ ಅವರನ್ನು ಬಂಧಿಸಲಾಗಿತ್ತು.

Advertisement

ಇನ್ನೂ ನಾಲ್ವರಿಗಾಗಿ ಶೋಧ
ಈಗ ತಲೆಮರೆಸಿಕೊಂಡಿರುವ ಎಸ್‌ಡಿಪಿಐ ವಲಯ ಕಾರ್ಯದರ್ಶಿ ಬಜಪೆಯ ಮಹಮ್ಮದ್‌ ಶರೀಫ್, ಪಿಎಫ್ಐ ರಾಜ್ಯ ಕಾರ್ಯದರ್ಶಿ, ಉಪ್ಪಿನಂಗಡಿಯ ಅಯೂಬ್‌ ಅಗ್ನಾಡಿ, ಪಿಎಫ್ಐ ಮುಖಂಡ, ಕಂಕನಾಡಿಯ ಮಹಮ್ಮದ್‌ ಅಶ್ರಫ್ ಹಾಗೂ ಬಂದರು ನಿವಾಸಿ ಅಬ್ದುಲ್‌ ರಜಾಕ್‌ ಬಂಧನಕ್ಕಾಗಿ ಉಗ್ರ ನಿಗ್ರಹ ದಳ ಪೊಲೀಸರು ಸ್ಥಳೀಯ ಪೊಲೀಸರ ನೆರವಿನಲ್ಲಿ ಕಾರ್ಯಾ ಚರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next