ನವದೆಹಲಿ: ನಿಷೇಧಿತ ಪಿಎಫ್ಐ ಸಂಘಟನೆಗೆ ಭಯೋತ್ಪಾದಕ ಸಂಘಟನೆಗಳ ಜತೆಗೆ ನಿಕಟ ಸಂಪರ್ಕ ಇದೆ. ಜತೆಗೆ ಕೊಲ್ಲಿ ರಾಷ್ಟ್ರಗಳಿಂದ ಹಣ ಸಂಗ್ರಹಿಸುತ್ತಿದೆ ಎಂದು ನವದೆಹಲಿಯ ಸ್ಥಳೀಯ ಕೋರ್ಟ್ನಲ್ಲಿ ಸಲ್ಲಿಕೆ ಮಾಡಿರುವ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
Advertisement
ಅದು, ವಿವಿಧ ಕೋಮುಗಳ ನಡುವೆ ದ್ವೇಷ ಹರಡುವ ಕೆಲಸವನ್ನೂ ಮಾಡುತ್ತಿದೆ ಎಂದೂ ಅದರಲ್ಲಿ ಉಲ್ಲೇಖೀಸಲಾಗಿದೆ.
ಪರ್ವೇಜ್ ಅಹ್ಮದ್, ಮೊಹಮ್ಮದ್ ಇಲ್ಯಾಸ್ ಮತ್ತು ಅಬ್ದುಲ್ ಮಕೀತ್ ಎಂಬ ಮೂವರ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಈ ಅಂಶಗಳಿವೆ. ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಆರೋಪಪಟ್ಟಿಯನ್ನು ಪಾಟಿಯಾಲ ಹೌಸ್ನಲ್ಲಿರುವ ವಿಶೇಷ ಕೋರ್ಟ್ ಪರಿಶೀಲನೆ ನಡೆಸಿದೆ.