Advertisement

ಪಿಎಫ್, ಇಎಸ್‌ಐಗೆ ಶೀಘ್ರ ಸಾಮಾನ್ಯ ಅರ್ಜಿ

03:45 AM Mar 06, 2017 | Harsha Rao |

ಹೊಸದಿಲ್ಲಿ: ನೌಕರರ ಭವಿಷ್ಯ ನಿಧಿ (ಪಿಎಫ್) ಮತ್ತು ನೌಕರರ ರಾಜ್ಯ ವಿಮಾ (ಇಎಸ್‌ಐಸಿ)ನಿಧಿಗೆ ಸಾಮಾನ್ಯ ಅರ್ಜಿ ತುಂಬುವ ಪದ್ಧತಿ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ!

Advertisement

ಸರಕಾರ ಈ ಸಂಬಂಧ ಈಗಾಗಲೇ ಯೋಜನೆ ರೂಪಿಸಿದ್ದು, ಕಂಪನಿ ಸಿಬ್ಬಂದಿಗೆ ಕ್ಲಿಷ್ಟ ವಿಧಾನಗಳಿಂದ 
ಕಿರಿಕಿರಿ ಅನುಭವಿಸುವುದನ್ನು ತಪ್ಪಿಸಲು ಮುಂದಾಗಿದೆ. ಕೇವಲ ಒಂದೇ ಅರ್ಜಿಯ ಮೂಲಕ ಪಿಎಫ್ ಮತ್ತು 
ಇಎಸ್‌ಐಸಿ ನೋಂದಣಿಯನ್ನು ಸುಲಭಗೊಳ್ಳಲಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, “ಪಿಎಫ್ ಮತ್ತು ಇಎಸ್‌ಐಸಿ ನೋಂದಣಿ ಅರ್ಜಿಯನ್ನು ಸರಳ ಮಾದರಿಯಲ್ಲಿ ಸಿದ್ಧಗೊಳಿಸಲಾಗುತ್ತಿದೆ. ಇದರಿಂದ ದೇಶದ ಕೋಟ್ಯಂತರ ಸಿಬ್ಬಂದಿಗಳಿಗೆ ನೆರವಾಗಲಿದೆ’ ಎಂದಿದ್ದಾರೆ. 

20 ಅಥವಾ 20ಕ್ಕಿಂತ ಹೆಚ್ಚು ಸಿಬ್ಬಂದಿಗಳಿರುವ ಕಂಪನಿಗಳಿಗೆ ಪಿಎಫ್ ನೋಂದಣಿ ಕಡ್ಡಾಯವಾಗಿದ್ದರೆ, 10 ಅಥವಾ 10ಕ್ಕಿಂತ ಜಾಸ್ತಿ ಸಿಬ್ಬಂದಿಗಳಿರುವವರಿಗೆ ಇಎಸ್‌ಐ ಕಡ್ಡಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next