Advertisement

ಜಾಗತಿಕ ಸನ್ನಿವೇಶ ಹೇಗಿದೆ…ದೇಶದಲ್ಲಿ ತೈಲ ಬೆಲೆ ಏರಿಕೆ ಬಗ್ಗೆ ಸಚಿವ ಪುರಿ ಸಮರ್ಥನೆ

03:40 PM Mar 24, 2022 | Team Udayavani |

ನವದೆಹಲಿ: ದೇಶದಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಹೆಚ್ಚಳ ಮಾಡಿರುವುದನ್ನು ಲೋಕಸಭೆಯಲ್ಲಿ ಗುರುವಾರ (ಮಾರ್ಚ್ 24) ಸಮರ್ಥಿಸಿಕೊಂಡಿರುವ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾದ ಪರಿಣಾಮ ದರ ಏರಿಕೆ ಮಾಡಲಾಗಿದೆ ಎಂದರು.

Advertisement

ಇದನ್ನೂ ಓದಿ:ಮೃತ ಅಣ್ಣನ ಹೆಸರಲ್ಲಿ 24 ವರ್ಷ ಸರ್ಕಾರಿ ಶಿಕ್ಷಕನಾಗಿ ಕೆಲಸ ಮಾಡಿದ್ದ ನಕಲಿ ಶಿಕ್ಷಕ ಅಂದರ್

ತೈಲ ಬೆಲೆ ಹೆಚ್ಚಳದ ನಡುವೆಯೂ ಜನರಿಗೆ ಅಗ್ಗದ ದರದಲ್ಲಿ ತೈಲ ಲಭ್ಯವಾಗುವಂತೆ ಪ್ರಯತ್ನಿಸಲಾಗುವುದು ಎಂದು ಈ ಸಂದರ್ಭದಲ್ಲಿ ಪುರಿ ಭರವಸೆ ನೀಡಿರುವುದಾಗಿ ವರದಿ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಅನಿಲದ ಬೆಲೆ ಶೇ.37ಕ್ಕಿಂತಲೂ ಅಧಿಕವಾಗಿ ಹೆಚ್ಚಳವಾಗಿದೆ. ಕೋವಿಡ್ ಬಿಕ್ಕಟ್ಟು ಮತ್ತು ಯುದ್ಧದ ಪರಿಣಾಮ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದರು.

ಅದೇ ರೀತಿ ಎಲ್ ಪಿಜಿ ಬೆಲೆ ಕೂಡಾ ಸೌದಿ ಅರೇಬಿಯಾದ ಗುತ್ತಿಗೆ ದರ ಆಧಾರದ ಮೇಲೆ ಹೇಳುವುದಾದರೆ 2020ರ ಏಪ್ರಿಲ್ ನಿಂದ 2022ರ ಮಾರ್ಚ್ ವರೆಗೆ ಶೇ.285ರಷ್ಟು ಹೆಚ್ಚಳವಾಗಿದೆ. ನಾವು ಕಳೆದ ಆರು ತಿಂಗಳಿನಿಂದ ಶೇ.37ರಷ್ಟು ಮಾತ್ರ ಹೆಚ್ಚಳ ಮಾಡಿರುವುದಾಗಿ ಸಚಿವ ಪುರಿ ಮಾಹಿತಿ ನೀಡಿದ್ದಾರೆ.

Advertisement

ನಾನು ಈ ಅಂಕಿ ಅಂಶ ಯಾಕೆ ಹೇಳುತ್ತಿದ್ದೇನೆ ಅಂದರೆ ಸಂಸದರಿಗೆ ಈ ಸತ್ಯ ತಿಳಿಯಬೇಕಾಗಿದೆ. ಅಷ್ಟೇ ಅಲ್ಲ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸನ್ನಿವೇಶ ಹೇಗಿದೆ ಎಂಬುದನ್ನು ಮನಗಾಣಬೇಕಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next