ಮುಂಬಯಿ: ಕೋವಿಡ್-19 ವಿರುದ್ಧ ಹೋರಾಟದಲ್ಲಿ ಬಸವಳಿದಿರುವಂತೆಯೇ, ಮಹಾರಾಷ್ಟ್ರ ಸರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅನ್ನು ಏರಿಕೆ ಮಾಡಿದೆ.
ಇದರಿಂದ ಮಹಾರಾಷ್ಟ್ರದಲ್ಲಿ ಸೋಮವಾರದಿಂದ ಅನ್ವಯವಾಗುವಂತೆ ಪೆಟ್ರೋಲ್, ಡೀಸೆಲ್ ಬೆಲೆ 2 ರೂ. ಹೆಚ್ಚಳವಾಗಿದೆ.
ಈ ಸಂಬಂಧ ಸರಕಾರ ಅಧಿಕೃತ ಸೂಚನೆಯನ್ನೂ ಹೊರಡಿಸಿದೆ. ಈವರೆಗೆ ಪೆಟ್ರೋಲ್ ಮೇಲಿನ ರಾಜ್ಯದ ಸೆಸ್ ಲೀಟರ್‌ಗೆ 8.12 ರೂ. ಇದ್ದು ಡೀಸೆಲ್ ಮೇಲಿನ ಸುಂಕ 1 ರೂ.ಗಳಿಂದ 3 ರೂ.ಗೆ ಏರಿಕೆ ಮಾಡಲಾಗಿದೆ. ಜತೆಗೆ ವ್ಯಾಟ್ ಅನ್ನು ಎರಡೂ ತೈಲಗಳ ಮೇಲೆ ಶೇ.24ರಿಂದ ಶೇ.26ಕ್ಕೆ ಏರಿಕೆ ಮಾಡಲಾಗಿದೆ.
ಇದರಿಂದ ಪೆಟ್ರೋಲ್ ಬೆಲೆ 78.31 ರೂ. ಮತ್ತು ಡೀಸೆಲ್ ಬೆಲೆ 68.21 ರೂ. ಆಗಲಿದೆ. ಸುಂಕ ಏರಿಕೆ ಮೊದಲು ಈ ಬೆಲೆಗಳು 76.31 ರೂ. ಮತ್ತು 66.21 ರೂ. ಆಗಿದ್ದವು.
ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚಳಗೊಂಡ ಬಳಿಕ ಅಂದರೆ ಕಳೆದ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಇಳಿಕೆ ಕಂಡಿದೆ. ಪೆಟ್ರೋಲ್ ಶೇ.17ರಷ್ಟು ಮತ್ತು ಡೀಸೆಲ್ ಶೇ.26ರಷ್ಟು ಇಳಿಕೆ ಕಂಡಿದೆ.