Advertisement

ಮುಂಬಯಿಯಲ್ಲಿ ಗರಿಷ್ಠ: ಪೆಟ್ರೋಲ್‌ 89.01, ಡೀಸೆಲ್‌ 78.07 ರೂ.

03:51 PM Sep 15, 2018 | Team Udayavani |

ಮುಂಬಯಿ : ಈ ವರ್ಷ ಆಗಸ್ಟ್‌ನಿಂದ ದೇಶದಲ್ಲಿ ಒಂದೇ ಸಮನೆ ಏರುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಂದು ಶನಿವಾರ ಅನುಕ್ರಮವಾಗಿ 34 ಪೈಸೆ ಮತ್ತು 25 ಪೈಸೆ ಏರಿದೆ. 

Advertisement

ಹಾಗಾಗಿ ಮುಂಬಯಿಯಲ್ಲಿ, ದೇಶದಲ್ಲೇ ಗರಿಷ್ಠವಾಗಿ, ಪೆಟ್ರೋಲ್‌ ದರ ಲೀಟರಿಗೆ 89.01 ರೂ. ಮತ್ತು ಡೀಸೆಲ್‌ ದರ ಲೀಟರಿಗೆ 78.07 ರೂ. ಆಗಿದೆ. 

ದೇಶದ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರಿಗೆ 81.63 ರೂ. ಮತ್ತು ಡೀಸೆಲ್‌ ಬೆಲೆ ಲೀಟರಿಗೆ 73.54 ರೂ. ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಲೀಟರಿಗೆ ಅನುಕ್ರಮವಾಗಿ 84.85 ಮತ್ತು 77.74 ರೂ. ಆಗಿದೆ. ಕೋಲ್ಕತದಲ್ಲಿ ಇದು ಅನುಕ್ರಮವಾಗಿ 83.49 ರೂ ಮತ್ತು 75.39 ರೂ. ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next