Advertisement

18 ದಿನಗಳಲ್ಲಿ ಪೆಟ್ರೋಲ್‌ ಬೆಲೆ 4.05 ರೂ. ಇಳಿಕೆ

09:05 AM Nov 05, 2018 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಇಳಿಮುಖವಾಗಿರುವುದು ಭಾರತೀಯ ಗ್ರಾಹಕರಲ್ಲಿ ನೆಮ್ಮದಿ ಮೂಡಿಸಿದೆ. ಸತತ 18 ದಿನಗಳಿಂದಲೂ ದೇಶ ದಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆಯಾಗಿದ್ದು, ರವಿವಾರ ಲೀಟರ್‌ ಪೆಟ್ರೋಲ್‌ಗೆ 21 ಪೈಸೆ ಮತ್ತು ಡೀಸೆಲ್‌ಗೆ 17 ಪೈಸೆ ಇಳಿಕೆಯಾಗಿದೆ. ಈ ಮೂಲಕ 18 ದಿನಗಳಲ್ಲಿ ಒಟ್ಟಾರೆಯಾಗಿ ಪೆಟ್ರೋಲ್‌ ಬೆಲೆ ಲೀ.ಗೆ 4.05 ರೂ. ಮತ್ತು ಡೀಸೆಲ್‌ ಬೆಲೆ 2.33 ರೂ. ಇಳಿಕೆಯಾದಂತಾಗಿದೆ.

Advertisement

ಆಗಸ್ಟ್‌ 16ರಿಂದ ಒಂದೇ ಸಮನೆ ಏರಿಕೆಯಾಗುತ್ತಾ ಸಾಗಿದ್ದ ತೈಲ ದರ ಅಕ್ಟೋಬರ್‌ 18ರಿಂದ ಇಳಿಮುಖವಾಗ ತೊಡಗಿತು. ಅಕ್ಟೋಬರ್‌ 4ರಂದು ದಿಲ್ಲಿಯಲ್ಲಿ ಪೆಟ್ರೋಲ್‌ ದರ ಲೀ.ಗೆ 84 ಮತ್ತು ಮುಂಬೈನಲ್ಲಿ 91.34 ರೂ. ತಲುಪಿ ದಾಖಲೆ ನಿರ್ಮಿಸಿತ್ತು. ಆ. 16ರಿಂದ ಅ. 4ರ ವರೆಗಿನ ಅವಧಿ ಯಲ್ಲಿ ಒಟ್ಟಾರೆ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಲೀ.ಗೆ ಕ್ರಮವಾಗಿ 6.86 ಮತ್ತು 6.73 ರೂ. ಹೆಚ್ಚಳವಾಗಿತ್ತು. ಅ.18 ರಿಂದ ಕಚ್ಚಾ ತೈಲದ ದರದಲ್ಲಿ ಆದ ಇಳಿಕೆ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯ ಏರಿಕೆಯು ಪೆಟ್ರೋಲ್‌, ಡೀಸೆಲ್‌ ದರ ಇಳಿಯಲು ಕಾರಣವಾಯಿತು. ಆಗಸ್ಟ್‌, ಸೆಪ್ಟೆಂ ಬರ್‌ ತಿಂಗಳಲ್ಲಿ ಏರಿಕೆಯಾದ ಬೆಲೆಗಿಂತಲೂ ಹೆಚ್ಚಿನ ಬೆಲೆ ಇಳಿಕೆ ಕಳೆದ 18 ದಿನಗಳಲ್ಲಿ  ಕಂಡುಬಂದಿದೆೆ.

Advertisement

Udayavani is now on Telegram. Click here to join our channel and stay updated with the latest news.

Next