Advertisement

ಗ್ರಾಹಕರಿಗೆ ಪೆಟ್ರೋಲ್-ಡೀಸೆಲ್ ಗುಣಮಟ್ಟ ಜಾಗೃತಿ

02:15 PM Jun 25, 2019 | Team Udayavani |

ವಾಡಿ: ಬಂಕ್‌ಗಳಲ್ಲಿ ದೊರೆಯುವ ಪೆಟ್ರೋಲ್ ಹಾಗೂ ಡೀಸೆಲ್ ಗುಣಮಟ್ಟದ ಮೇಲೆ ಗ್ರಾಹಕರು ವ್ಯಕ್ತಪಡಿಸುವ ಕಲಬೆರಕೆ ಸಂಶಯ ದೂರ ಮಾಡಲು ಮುಂದಾಗಿರುವ ಹಿಂದೂಸ್ತಾನ್‌ ಪೆಟ್ರೋಲಿಯಂ (ಎಚ್ಪಿ) ಕಂಪನಿ ತನ್ನೆಲ್ಲ ಬಂಕ್‌ಗಳಲ್ಲಿ ಮೂಲಸೌಕರ್ಯ ಖಾತ್ರಿ ಪಡಿಸುವ ಜತೆಗೆ ತೈಲದ ಪ್ರಮಾಣ ಮತ್ತು ಗುಣಮಟ್ಟ ಪರೀಕ್ಷಾ ಸೌಲಭ್ಯ ಜಾರಿಗೊಳಿಸುವ ಮೂಲಕ ಪಾರದರ್ಶಕತೆ ಮೆರೆದಿದೆ.

Advertisement

ಪಟ್ಟಣದ ಹೊರ ವಲಯದ ಶ್ರೀಧನಲಕ್ಷ್ಮೀ ಫಿಲ್ಲಿಂಗ್‌ ಸ್ಟೇಷನ್‌ (ಪೆಟ್ರೋಲ್ ಬಂಕ್‌)ನಲ್ಲಿ ಸೋಮವಾರ ಗ್ರಾಹಕರಿಗೆ ತೈಲದ ಗುಣಮಟ್ಟ ಹಾಗೂ ಖರೀದಿಸುವ ತೈಲದ ಪ್ರಮಾಣವನ್ನು ಮೊದಲು ಮಾಪಕಗಳಲ್ಲಿ ತುಂಬಿಸಿ ತೋರಿಸಲಾಯಿತು. ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಲು ಬಂದಿದ್ದ ಪ್ರತಿಯೊಬ್ಬ ಗ್ರಾಹಕರಿಗೂ ಕಡ್ಡಾಯವಾಗಿ ತೈಲದ ಗುಣಮಟ್ಟ-ಪ್ರಮಾಣ ಪರೀಕ್ಷಿಸುವ ಸ್ವಾತಂತ್ರ್ಯ ನೀಡಲಾಯಿತು. ಅನೇಕರು ಪಾರದರ್ಶಕ ನಿಯಮವನ್ನು ಸ್ವಾಗತಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಧನಲಕ್ಷ್ಮೀ ಫಿಲ್ಲಿಂಗ್‌ ಸ್ಟೇಷನ್‌ ಮುಖ್ಯಸ್ಥ ಭೀಮರಾವ ದೊರೆ, ಬಂಕ್‌ಗಳಲ್ಲಿ ತೈಲದ ಕ್ವಾಲಿಟಿ ಮತ್ತು ಕ್ವಾಂಟಿಟಿ ಖಾತ್ರಿಪಡಿಸುವ ಹಕ್ಕು ಗ್ರಾಹಕರಿಗೆ ನೀಡಲಾಗಿದೆ. ಗ್ರಾಹಕರಿಗಾಗಿ ಬಂಕ್‌ನಲ್ಲಿ ಪ್ರಥಮ ಚಿಕಿತ್ಸೆ, ವಾಹನಗಳಿಗೆ ಗಾಳಿ, ದೂರವಾಣಿ, ಕುಡಿಯುವ ಶುದ್ಧ ನೀರು, ಶೌಚಾಲಯ, ವಿಶ್ರಾಂತಿ ಕೋಣೆಯ ಸೌಲಭ್ಯ ಒದಗಿಸಲಾಗಿದೆ. ವಿದ್ಯುತ್‌ ಕಡಿತಗೊಂಡರೂ ದಿನದ 24 ತಾಸು ತೈಲ ದೊರೆಯುವಂತೆ ಜನರೇಟರ್‌ ಅಳವಡಿಸಲಾಗಿದೆ. ಬಂಕ್‌ಗಳಲ್ಲಿ ಪಾರದರ್ಶಕ ಪರೀಕ್ಷಾ ನಿಯಮ ಜಾರಿಗೆ ತರುವ ಮೂಲಕ ಗ್ರಾಹಕರ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ. ಹಿಂದೂಸ್ತಾನ್‌ ಪೆಟ್ರೋಲಿಯಂ ಕಂಪನಿಯಿಂದ ಸ್ಥಳೀಯ ಮಟ್ಟದಲ್ಲಿ ನಡೆಯುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಾಯ ಸಹಕಾರದ ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದರು.

ಸುನೀಲ ದೊರೆ, ಮರಲಿಂಗ್‌, ಮಹ್ಮದ್‌, ಭಾಗಣ್ಣ ಬಿ.ಡಿ. ಶಿವುಕುಮಾರ, ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next