ಹೊಸದಿಲ್ಲಿ: ಕಳೆದ ಮಾರ್ಚ್ 22ರಂದು ಆರಂಭವಾದ ತೈಲ ಬೆಲೆ ಏರಿಕೆ ಇಂದೂ ಮುಂದುವರಿದಿದೆ. ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಕಳೆದ ಎರಡು ವಾರದಲ್ಲಿ 12ನೇ ಬಾರಿಗೆ ದರ ಹೆಚ್ಚಳವಾಗಿದೆ.
ಮಾರ್ಚ್ 22ರ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 8.40 ರೂ ಹೆಚ್ಚಳವಾಗಿದೆ. ದೆಹಲಿಯಲ್ಲಿ 103.41 ರೂ ಇದ್ದ ಪೆಟ್ರೋಲ್ ಬೆಲೆ 103.81ರೂ ಗೆ ಏರಿಕೆಯಾಗಿದ್ದರೆ, ಡೀಸೆಲ್ ದರಗಳು ಲೀಟರ್‌ಗೆ 94.67 ರೂ. ರಿಂದ 95.07 ರೂ ಗೆ ಕ್ಕೆ ಏರಿದೆ.
ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕ್ರಮವಾಗಿ 42 ಪೈಸೆ ಮತ್ತು 40 ಪೈಸೆಯಷ್ಟು ಏರಿಕೆಯಾಗಿದೆ. ರಾಜ್ಯ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 109.41 ರೂ ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 93.23 ರೂ ಇದೆ.
ಇದನ್ನೂ ಓದಿ:ಹೆಚ್ಚಿದ ಲಂಕೆ ಬಿಕ್ಕಟ್ಟು; ರಾಜೀನಾಮೆ ನೀಡಿದ ಸಂಪೂರ್ಣ ಸಚಿವ ಸಂಪುಟ
ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆಯಲ್ಲಿ ಏರಿಕೆಯಾಗುತ್ತದೆ. ಬದಲಾಗುತ್ತದೆ.