Advertisement

ಮತ್ತೆ ಏರಿಕೆ ಕಂಡ ತೈಲ ಬೆಲೆ; 9 ದಿನದಲ್ಲಿ 5.60 ರೂ. ಏರಿಕೆ ಕಂಡ ಪೆಟ್ರೋಲ್

08:43 AM Mar 30, 2022 | Team Udayavani |

ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಪ್ರತಿ ಲೀಟರ್‌ ಗೆ ತಲಾ 80 ಪೈಸೆಗಳಷ್ಟು ಏರಿಕೆಯಾಗಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಲೀಟರ್‌ಗೆ 5.60 ರೂ  ಏರಿಕೆಯಾಗಿದೆ.

Advertisement

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 100.21 ರೂ ದಿಂದ 101.01 ರೂ. ಗೆ ಏರಿಕೆಯಾಗಿದ್ದರೆ, ಡೀಸೆಲ್ ದರಗಳು ಲೀಟರ್‌ ಗೆ 91.47 ರೂ ದಿಂದ  92.27 ರೂ. ಗೆ ಏರಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯಲ್ಲಿ 84 ಪೈಸೆ ಏರಿಕೆಯಾಗಿದ್ದರೆ, ಡೀಸಲ್ ಬೆಲೆಯಲ್ಲಿ 79 ಪೈಸೆ ಏರಿಕೆಯಾಗಿದೆ. ರಾಜ್ಯ ರಾಜಧಾನಿಯಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 106.46 ರೂ ಮತ್ತು 90.49 ರೂ ಇದೆ.

ಮುಂಬೈನಲ್ಲಿ 84 ಪೈಸೆ ಮತ್ತು 85 ಪೈಸೆ ಏರಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 115.88 ರೂ. ಮತ್ತು 100.10 ರೂ. ತಲುಪಿದೆ.

ಇದನ್ನೂ ಓದಿ:ಭಾರತ-ಶ್ರೀಲಂಕಾ ನಡುವೆ 6 ಒಪ್ಪಂದ; ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಕ್ರಮ

Advertisement

ದೇಶಾದ್ಯಂತ ತೈಲ ದರಗಳನ್ನು ಹೆಚ್ಚಿಸಲಾಗಿದೆ. ಸ್ಥಳೀಯ ತೆರಿಗೆ ದರವನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ತೈಲ ಬೆಲೆಯಲ್ಲಿ ಬದಲಾವಣೆಯಾಗುತ್ತದೆ.

ನಾಲ್ಕು ತಿಂಗಳ ಬಳಿಕ ಮಾರ್ಚ್ 22ರಂದು ಮೊದಲ ಬಾರಿಗ ತೈಲ ಬೆಲೆಯಲ್ಲಿ ಏರಿಕೆಯಾಗಿತ್ತು. ನಂತರ 9 ದಿನದಲ್ಲಿ 8 ಬಾರಿ ಬೆಲೆ ಏರಿಕೆ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next