Advertisement

ಪೆಟ್ರೋಲಿಯಂ ಉತ್ಪಾದನಾ ಮಟ್ಟ ಕಡಿಮೆಯಾಗಿರುವುದೆ ಬೆಲೆ ಏರಿಕೆಗೆ ಕಾರಣ :ಧರ್ಮೇಂದ್ರ ಪ್ರಧಾನ್

10:26 AM Feb 22, 2021 | Team Udayavani |

ನವ ದೆಹಲಿ : ಫೆಬ್ರವರಿ 9 ರಿಂದ ಸತತ 12 ದಿನಗಳವರೆಗೆ ದರ ಏರಿಕೆ ಕಂಡ ನಂತರ, ತೈಲ ಕಂಪನಿಗಳು ಸೋಮವಾರ ಸತತ ಎರಡನೇ ದಿನವೂ ತೈಲದ ಬೆಲೆಯನ್ನು ಸ್ಥಿರವಾಗಿರಿಸಿಕೊಂಡಿವೆ. ದೆಹಲಿಯ ಪೆಟ್ರೋಲ್ ಈಗಾಗಲೇ ಲೀಟರ್‌ಗೆ 90 ರೂ.ಗಳನ್ನು ದಾಟಿದ್ದರೆ, ಮುಂಬೈಯಲ್ಲಿ ಇದನ್ನು ಲೀಟರ್‌ಗೆ 97 ರೂ.ಗೆ ಮಾರಾಟ ಮಾಡಲಾಗುತ್ತಿದೆ, ಇನ್ನು ಪೆಟ್ರೋಲ್ ನಾಲ್ಕು ಮೆಟ್ರೋ ನಗರಗಳಲ್ಲಿ ಅತ್ಯಂತ ದುಬಾರಿಯಾಗಿದೆ.

Advertisement

ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ಮಧ್ಯೆ, “ಉತ್ಪಾದನಾ ದೇಶಗಳು ಹೆಚ್ಚಿನ ಲಾಭ ಗಳಿಸಲು ಕಡಿಮೆ ಇಂಧನ ಉತ್ಪಾದನೆ”ಯೇ ಬೆಲೆ ಏರಿಕೆಯ ಹಿಂದಿನ ಒಂದು ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಭಾನುವಾರ(ಫೆ.21) ಹೇಳಿದ್ದಾರೆ.

ಓದಿ: ಕೋವಿಡ್-19: ಒಂದೇ ದಿನ 14,199 ಹೊಸ ಪ್ರಕರಣ, ಹಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣ

ಪೆಟ್ರೋಲಿಯಂ ಉತ್ಪಾದನಾ ದೇಶಗಳು ಲಾಭ ಗಳಿಸುವುದಕ್ಕಾಗಿ ಉತ್ಪಾದನಾ ಮಟ್ಟವನ್ನು ಕಡಿಮೆಗೊಳಿಸುವುದರಿಂದ ಪೆಟ್ರೋಲಿಯಂ ಖರೀದಿಸುವ ರಾಷ್ಟ್ರಗಳಿಗೆ ಹೊಡೆತ ಬಿದ್ದಿದೆ ಎಂದು ಪ್ರಧಾನ್ ಎ ಎನ್ ಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

“ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಯೊಂದಿಗೆ ಈ ರೀತಿಯ ಪರಿಸ್ಥಿತಿ  ಸಂಭವಿಸಬಾರದು ಎಂದು ನಾವು ನಿರಂತರವಾಗಿ ಒತ್ತಾಯಿಸುತ್ತಿದ್ದೇವೆ. ಬದಲಾವಣೆಯಾಗಬಹುದೆಂದು ನಾವು ಭಾವಿಸುತ್ತೇವೆ.” ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 10 ದಿನಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಹೆಚ್ಚುತ್ತಿವೆ ಮತ್ತು ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳನ್ನು ದಾಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವ ತೆರಿಗೆಯನ್ನು ಸಮರ್ಥಿಸುತ್ತಾ, ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿವೆ ಎಂದು ಹೇಳಿದರು.

Advertisement

ಪೆಟ್ರೋಲ್ ಬೆಲೆ ಏರಿಕೆಯಾಗುವುದಕ್ಕೆ ಕೋವಿಡ್ ಪರಿಸ್ಥಿತಿಯೂ ಒಂದು ಕಾರಣ. ನಾವು ಅಭಿವೃದ್ಧಿ ಕಾರ್ಯಗಳನ್ನು ದೇಶದಲ್ಲಿ ಮಾಡಬೇಕಾಗಿದೆ. ಹಾಗಾಗಿ ಜನರಿಂದ ತೆರಿಗೆಯನ್ನು ಸಂಗ್ರಹಿಸಲೇಬೇಕಾಗಿದೆ. ಇದರಿಂದ ಉದ್ಯೋಗವು ಸೃಷ್ಟಿಯಾಗುತ್ತದೆ. ತೆರಿಗೆ ಸಂಗ್ರಹಿಸುವುದರೊಂದಿಗೆ  ಸಮತೋಲನದ ಅವಶ್ಯಕತೆಯೂ ಇದೆ. ಹಣಕಾಸು ಸಚಿವರು ಮತ್ತು ರಾಜ್ಯ ಸರ್ಕಾರಗಳು ಒಂದು ಮಾರ್ಗವನ್ನು ಕಂಡುಕೊಳ್ಳಬಹುದು ಎಂದು ನಾನು ನಂಬುತ್ತೇನೆ “ಎಂದು ಸಚಿವರು ಹೇಳಿದ್ದಾರೆ.

ಓದಿ: ಮಧ್ಯಪ್ರದೇಶ: 10 ಅಡಿ ಕೆಳಕ್ಕೆ ಬಿದ್ದ ಮಾಜಿ ಸಿಎಂ ಕಮಲ್ ನಾಥ್ ಪ್ರಯಾಣಿಸುತ್ತಿದ್ದ ಲಿಫ್ಟ್

 

Advertisement

Udayavani is now on Telegram. Click here to join our channel and stay updated with the latest news.

Next