Advertisement

ತೈಲ ಬೆಲೆಯಲ್ಲಿ ದಾಖಲೆ ಏರಿಕೆ

06:00 AM Aug 28, 2018 | |

ನವದೆಹಲಿ: ರೂಪಾಯಿ ಮೌಲ್ಯ ಕುಸಿದಿರುವುದರಿಂದಾಗಿ ಆಮದು ವೆಚ್ಚ ಹೆಚ್ಚಳವಾಗಿದ್ದು ತೈಲೋತ್ಪನ್ನಗಳ ಬೆಲೆಯ ಮೇಲೆ ಪರಿಣಾಮ ಉಂಟುಮಾಡಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ದರದಲ್ಲಿ 19 ಪೈಸೆ ಏರಿಕೆಯಾಗಿ ಲೀಟರ್‌ಗೆ 80.54 ರೂ. ಆಗಿದೆ. ಅಲ್ಲದೆ, ಡೀಸೆಲ್‌ ಲೀಟರ್‌ಗೆ ರೂ. 71.73 ರೂ. ಆಗಿದೆ. ಕಳೆದ ಮಾರ್ಚ್‌ನಲ್ಲಿಯೂ ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆ ತಾರಕಕ್ಕೇರಿತ್ತು. ಕರ್ನಾಟಕ ಚುನಾವಣೆ ವೇಳೆ ಪೆಟ್ರೋಲ್‌ ಬೆಲೆ ಏರಿಕೆ ಭಾರಿ ಚರ್ಚೆಗೀಡಾಗಿತ್ತು. ಅದರ ನಂತರ ಪುನಃ ಪೆಟ್ರೋಲ್‌ 80ರ ಗಡಿ ದಾಟಿದೆ. ಆಗಸ್ಟ್‌ 16 ರಿಂದ ರೂಪಾಯಿ ಮೌಲ್ಯ ವಿಪರೀತ ಕುಸಿಯುತ್ತಿರುವುದರಿಂದ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕಳೆದ 12 ದಿನಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ಸುಮಾರು 77 ಪೈಸೆ ಏರಿಕೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next