Advertisement

ವಾರದಲ್ಲಿ 3 ರೂ. ಏರಿದ ಪೆಟ್ರೋಲ್‌, ಡೀಸೆಲ್‌

02:03 PM Jun 13, 2020 | mahesh |

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಬೆಲೆ ಸತತ 6ನೇ ದಿನವೂ ಏರಿಕೆಯಾಗಿದೆ. ಈಗಾಗಲೇ ಕೋವಿಡ್ ದಿಂದ ಕಂಗೆಟ್ಟಿರುವ ಜನ, ಈ ಏರಿಕೆಯ ಪರಿಣಾಮ ಇನ್ನಷ್ಟು ಕಂಗೆಡುವ ಸಾಧ್ಯತೆಯಿದೆ. ಬರೀ ಒಂದೇ ವಾರದಲ್ಲಿ  ಒಟ್ಟು 3 ರೂ. ಹೆಚ್ಚಳವಾಗಿದೆ. ಪೆಟ್ರೋಲ್‌ ಲೀ.ಗೆ 57 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್‌ ಲೀ.ಗೆ 59 ಪೈಸೆ ಏರಿದೆ.   ಇದರ ಪರಿಣಾಮ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ76.98 ರೂ., ಡೀಸೆಲ್‌ 69.22 ರೂ. ಆಗಿದೆ. ಕೊರೊನಾ ಭಾರತದಲ್ಲಿ ತೀವ್ರವಾದ ನಂತರ, ಅಂದರೆ ಮಾ.16ರ ನಂತರ ಮುಂದಿನ 82 ದಿನಗಳವರೆಗೆ ತೈಲ ಬೆಲೆ,  ದೈನಂದಿನ ಆಧಾರದಲ್ಲಿ ಪರಿಷ್ಕರಣೆಯಾಗಿರಲಿಲ್ಲ. ಇದೀಗ ಮತ್ತೆ ವಾಹನಗಳು ರಸ್ತೆಗಿಳಿದಿರುವುದರಿಂದ, ಸರ್ಕಾರಿ ಅಧೀನದ ತೈಲ ಸಂಸ್ಥೆಗಳು ದೈನಂದಿನ ಪರಿಷ್ಕರಣೆ ಆರಂಭಿಸಿವೆ. ಅದರ ಫ‌ಲವೇ ಈ ಏರಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next