Advertisement

ಪೆಟ್ರೋಲ್‌,ಡೀಸೆಲ್‌ ಇಳಿಕೆ

03:16 PM Oct 22, 2018 | Team Udayavani |

ಹೊಸದಿಲ್ಲಿ:  ದೇಶಾದ್ಯಂತ ರವಿವಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ. ಸತತ 2 ತಿಂಗಳ ಏರಿಕೆಯ ಬಳಿಕ ಸತತ ನಾಲ್ಕನೇ ದಿನ ತೈಲೋತ್ಪನ್ನಗಳ ದರ ಇಳಿಕೆಯಾಗಿದೆ. ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 25 ಪೈಸೆ,  ಪ್ರತಿ ಲೀಟರ್‌ ಡೀಸೆಲ್‌ಗೆ 17 ಪೈಸೆ ಇಳಿಕೆಯಾಗಿದೆ. ಹೀಗಾಗಿ ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 81.74 ರೂ., ಡೀಸೆಲ್‌ಗೆ 75.19ರೂ., ಮುಂಬಯಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 87.21 ರೂ., ಡೀಸೆಲ್‌ಗೆ 78.82, ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 82.38 ರೂ., (26 ಪೈಸೆ ಇಳಿಕೆ), ಡೀಸೆಲ್‌ಗೆ 75.58 ರೂ. (17 ಪೈಸೆ ಇಳಿಕೆ)ಯಾಗಿದೆ. ಅ.9ರಂದು ಸತತ ದರ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 2.50 ರೂ. ತೆರಿಗೆ ಪ್ರಮಾಣ ಕಡಿತ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next