Advertisement

12ರಂದು ರಾಷ್ಟ್ರವ್ಯಾಪಿ ಪೆಟ್ರೋಲ್‌ ಬಂಕ್‌ ಮುಷ್ಕರ

03:45 AM Jul 04, 2017 | Team Udayavani |

ನವದೆಹಲಿ: ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ.100ರಷ್ಟು ಸ್ವಯಂಚಾಲಿತ ವ್ಯವಸ್ಥೆ ಅಳವಡಿಸುವಲ್ಲಿ ತೈಲ ಕಂಪನಿಗಳ ವೈಫ‌ಲ್ಯ ಮತ್ತು ದೈನಂದಿನ ತೈಲ ದರ ನಿಗದಿಯಲ್ಲಿ ಪಾರದರ್ಶಕತೆಯ ಕೊರತೆಯನ್ನು ವಿರೋಧಿಸಿ ಇದೇ 12ರಂದು ರಾಷ್ಟ್ರವ್ಯಾಪಿ ಮುಷ್ಕರ ಕೈಗೊಳ್ಳಲು ಅಖೀಲ ಭಾರತ ಪೆಟ್ರೋಲ್‌ ವ್ಯಾಪಾರಿಗಳ ಒಕ್ಕೂಟ(ಎಐಪಿಡಿಎ) ನಿರ್ಧರಿಸಿದೆ.
ಅದರಂತೆ, 5ರಂದು ದೇಶಾದ್ಯಂತ ಪೆಟ್ರೋಲ್‌ ಬಂಕ್‌ಗಳು “ಖರೀದಿ ಮಾಡುವುದಿಲ್ಲ'(ನೋ ಪರ್ಚೇಸ್‌) ಎಂಬ ಪ್ರತಿಭಟನೆಯನ್ನು ನಡೆಸಲಿದ್ದು, 12ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದೇವೆ ಎಂದು ಒಕ್ಕೂಟದ ವಕ್ತಾರ ಅಲಿ ದಾರುವಲ್ಲಾ ತಿಳಿಸಿದ್ದಾರೆ.

Advertisement

ನಾವು ಜೂ.29ರಂದು ಸತತ 3 ಗಂಟೆಗಳ ಕಾಲ ತೈಲ ಕಂಪನಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದೇವೆ. ಆಗ ದರ ಸುರಕ್ಷತೆ ಕುರಿತು ನಮಗೆ ಕಂಪನಿಗಳು ಭರವಸೆ ನೀಡಿದ್ದವು. ಆದರೆ, ಇನ್ನೂ ಅದನ್ನು ಅನುಷ್ಠಾನಗೊಳಿಸಿಲ್ಲ. ಅದಕ್ಕಾಗಿ 5ರಂದು ತೈಲವನ್ನು ಖರೀದಿಸದೇ ಇರಲು, 12ರಂದು ಖರೀದಿ ಮತ್ತು ಮಾರಾಟ ಎರಡನ್ನೂ ಮಾಡದಿರಲು ನಿರ್ಧರಿಸಿದ್ದೇವೆ ಎಂದೂ ಹೇಳಿದ್ದಾರೆ ದಾರುವಲ್ಲಾ.

Advertisement

Udayavani is now on Telegram. Click here to join our channel and stay updated with the latest news.

Next