ಸ್ಥಗಿತಗೊಳಿಸಲು ನಿರ್ಧರಿಸಿದೆ.
Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖೀಲ ಕರ್ನಾಟಕ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್‌ನ ಬೆಂಗಳೂರು ಅಧ್ಯಕ್ಷ ರವೀಂದ್ರನಾಥ್, ಕೇಂದ್ರ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತೈಲ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಹೊಸ ನಿಯಮಾವಳಿಗಳಿಂದಾಗಿ ಡೀಲರ್‌ಗಳು ದಿನನಿತ್ಯ ಹಿಂಸೆ ಅನುಭವಿಸುವಂತಾಗಿದೆ. ತೈಲಬೆಲೆಯ ದೈನಂದಿನ ಪರಿಷ್ಕರಣೆಯೂ ಕೂಡ ಬಾಲಿಶತನದಿಂದ ಕೂಡಿದೆ. ಬಂಕ್‌ನಲ್ಲಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೂ ಅವಕಾಶ ನೀಡ ಬೇಕೆಂಬ ಆದೇಶ ಹೊರಡಿಸಿ ಒಂದು ವೇಳೆ ಸ್ವಚ್ಛತೆ ಕಾಪಾಡದಿದ್ದರೆ 2 ಲಕ್ಷ ರೂ.ದಂಡ ವಿಧಿಸುವನಿಯಮ ರೂಪಿಸಿದೆ. ಇಂತಹ ದಬ್ಟಾಳಿಕೆ ನೀತಿಯನ್ನು ಕೇಂದ್ರ ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.
ಪೆಟ್ರೋಲಿಯಂ ಇಲಾಖೆ, ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸದಲ್ಲಿ ನಿರತವಾಗಿದೆ. ಗ್ರಾಹಕರಿಗೆ ಮನೆ ಇಂಧನವನ್ನು ತಲುಪಿಸುವ ಯೋಜನೆ ರೂಪಿಸಿದ್ದು, ಇದು ಸುರಕ್ಷತಾ ದೃಷ್ಠಿಯಿಂದ ಒಳ್ಳೆಯ ಯೋಜನೆ ಅಲ್ಲ. ಈ ಯೋಜನೆ ಕಾರ್ಯಗತವಾಗುವ ಮೊದಲು ಸರ್ಕಾರ ಇದರ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ಆದರೆ ಆ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದರು. ಅಪೂರ್ಣ ಚಂದ್ರ ಕಮಿಟಿಯ ವರದಿ ಜಾರಿ ಸೇರಿದಂತೆ ತಮ್ಮ ಸಂಘಟನೆಯ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಮುಂದಾಗದಿದ್ದರೆ ಮತ್ತೆ ಅ.27 ರಿಂದ ಅನಿರ್ದಿಷ್ಟ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದರು.