Advertisement
ಬುಧವಾರ ರಾತ್ರಿ ವೇಳೆಗೆ ಕೇಂದ್ರ ಸರಕಾರವು ಪೆಟ್ರೋಲ್‌ಗೆ 5 ರೂ. ಮತ್ತು ಡೀಸೆಲ್‌ಗೆ 10 ರೂ. ಅಬಕಾರಿ ಸುಂಕವನ್ನು ಇಳಿಕೆ ಮಾಡಿದ್ದು, ಅದರಂತೆಯೇ ದ.ಕ. ಜಿಲ್ಲೆಯಲ್ಲಿ ಗುರುವಾರ ನೂತನ ದರದಲ್ಲಿ ತೈಲ ಮಾರಾಟವಾಗಿತ್ತು. ಈ ಬೆನ್ನಲ್ಲೇ ರಾಜ್ಯ ಸರಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್‌ಗೆ ತಲಾ 7 ರೂ. ಅಬಕಾರಿ ಸುಂಕ ಕಡಿತಗೊಳಿಸಿದ್ದರೂ ಈ ದರ ಗುರುವಾರ ಸಂಜೆ 6 ಗಂಟೆಯ ಬಳಿಕವಷ್ಟೇ ಜಿಲ್ಲೆಯಲ್ಲಿ ಜಾರಿಗೆ ಬಂದಿತ್ತು.ಮಂಗಳೂರಿನಲ್ಲಿ ಗುರುವಾರ ಬೆಳಗ್ಗಿನಿಂದ ಸಂಜೆಯವರೆಗೆ ಪೆಟ್ರೋಲ್‌ಗೆ ಲೀಟರ್‌ಗೆ 106.24 ರೂ. ಮತ್ತು ಡೀಸೆಲ್‌ಗೆ 91.23 ರೂ. ದರ ನಿಗದಿಯಾಗಿತ್ತು. ರಾತ್ರಿ ವೇಳೆಗೆ ದರ ಬದಲಾವಣೆಯಾಗಿದ್ದು, ಪೆಟ್ರೋಲ್‌ಗೆ ಲೀಟರ್‌ಗೆ 99.76 ರೂ. ಮತ್ತು ಡೀಸೆಲ್‌ಗೆ 84.24 ರೂ. ದರ ಜಾರಿಯಾಗಿತ್ತು. ನೂತನ ದರ ರಾತ್ರಿ ವೇಳೆ ಜಾರಿಯಾದ ಪರಿಣಾಮ ರಾತ್ರಿ ವೇಳೆಗೆ ನಗರದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳು ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತ್ತು.
Related Articles
Advertisement
ಡೀಲರ್‌ಗಳ ಹಸ್ತಕ್ಷೇಪವಿಲ್ಲ:
ಉಡುಪಿ: ಪೆಟ್ರೋಲಿಯಂ ಉತ್ಪನ್ನಗಳ ದರ ನಿಗದಿಯಲ್ಲಿ ಡೀಲರ್‌ಗಳ ಯಾವುದೇ ಹಸ್ತಕ್ಷೇಪವಿಲ್ಲ ಎಂದು ರಾಜ್ಯ ಪೆಟ್ರೋಲಿಯಂ ವಿತರಕರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಆನಂದ ಕಾರ್ನಾಡ್ ತಿಳಿಸಿದ್ದಾರೆ.
ಗುರುವಾರ ಸಂಜೆ 6ಕ್ಕೆ ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಿಂದ ರಾಜ್ಯದ ಕೊಡುಗೆಯಾಗಿ ದರವನ್ನು ಪರಿಷ್ಕರಿಸಿದ ಮಾಹಿತಿ ಬಂದಿತ್ತು. ಆದರೆ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್‌ಗೆ ಯಾವುದೇ ಮಾಹಿತಿ ಬಂದಿರಲಿಲ್ಲ. ರಾತ್ರಿ 8.30ಕ್ಕೆ ಸಂದೇಶ ಬಂದಿತ್ತು. ಆದರೆ ದರ ಗುರುವಾರ ಬೆಳಗ್ಗೆ 6 ಗಂಟೆಯಿಂದ ಅನ್ವಯ ಎಂದು ಬಂದಿದೆ. ನಮಗೆ ಅಧಿಕೃತ ಆದೇಶಗಳು ಬಾರದೆ ದರವನ್ನು ಪರಿಷ್ಕರಿಸಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.