Advertisement

ಪೆಟ್ರೋಲ್‌, ಡೀಸೆಲ್‌ ಬೆಲೆ ವರ್ಷದಲ್ಲೇ ಕನಿಷ್ಠ

06:00 AM Dec 28, 2018 | Team Udayavani |

ಹೊಸದಿಲ್ಲಿ: ಕೆಲವು ದಿನಗಳಿಂದ ಇಳಿಮುಖ ಕಾಣುತ್ತಿರುವ ಪೆಟ್ರೋಲ್‌, ಡೀಸೆಲ್‌ ದರಗಳು ಗುರುವಾರದ ಪರಿಷ್ಕರಣೆ  ಅನಂತರ ಈ ವರ್ಷದಲ್ಲೇ ಅತ್ಯಂತ ಕನಿಷ್ಠ ದರಕ್ಕೆ ಕುಸಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‌ ಬೆಲೆ ಬುಧವಾರ ಪ್ರತಿ ಲೀಟರಿಗೆ 69.79 ರೂ.ಗಳಷ್ಟಿದ್ದು, ಗುರುವಾರ 69.74 ರೂ.ಗಳಿಗೆ ಇಳಿದಿದೆ. ಡೀಸೆಲ್‌ 63.83 ರೂ.ಗಳಿಂದ 63.76 ರೂ.ಗಳಿಗೆ ಇಳಿದಿದೆ.

Advertisement

ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಕ್ರಮವಾಗಿ 70.35 ರೂ.ಗಳಿಂದ 70.30 ರೂ.ಗಳಿಗೆ ಮತ್ತು 64.18 ರೂ.ಗಳಿಂದ 64.11 ರೂ.ಗಳಿಗೆ ಇಳಿಕೆಯಾಗಿದೆ. 

ಅಲ್ಲಿ ಏರಿಕೆ, ಇಲ್ಲಿ ಇಳಿಕೆ
ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಕಚ್ಚಾ ತೈಲ ಬೆಲೆ ಹಂತ ಹಂತವಾಗಿ ಏರಿಕೆ ಕಾಣುತ್ತಿದ್ದರೂ ಭಾರತದಲ್ಲಿ ದರ ಇಳಿಕೆಗೆ ಕ್ರಮಕೈಗೊಂಡಿರುವುದು ಗಮನಾರ್ಹ ವಿಚಾರ. ಗುರುವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 8ರಷ್ಟು ಏರಿಕೆಯಾಗಿತ್ತು. ಏಷ್ಯಾದ ಮಟ್ಟದಲ್ಲಿ ಪ್ರತಿ ಬ್ಯಾರೆಲ್‌ನ ಬೆಲೆ 3,794.15 ರೂ.ಗಳಷ್ಟಿತ್ತು. ಅಕ್ಟೋಬರ್‌ನಲ್ಲಿದ್ದ ಕಚ್ಚಾ ತೈಲದ ದರಗಳಿಗೆ ಹೋಲಿಸಿದರೆ ಇದು ಶೇ. 40ರಷ್ಟು ಹೆಚ್ಚು.

ಬಸ್‌ ಯಾನ ದರ ಏರಿಕೆ ಪ್ರಸ್ತಾವ: ತಮ್ಮಣ್ಣ
ಬೆಂಗಳೂರು
: ಡೀಸೆಲ್‌ ದರ ಇಳಿಕೆಯಾಗಿದ್ದು, ಸಾರಿಗೆ ಬಸ್‌ ಪ್ರಯಾಣ ದರ ಇಳಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದ್ದರೆ, ಇತ್ತ ಸಾರಿಗೆ ಇಲಾಖೆ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವ ಸಲ್ಲಿಸಲು ಸಿದ್ಧತೆ ನಡೆಸಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಸಿ. ತಮ್ಮಣ್ಣ, ಸಾರಿಗೆ ನಿಗಮಗಳು 687 ಕೋಟಿ ರೂ. ನಷ್ಟದಲ್ಲಿವೆ. ಆ ಹಿನ್ನೆಲೆಯಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಲು ಸಾರಿಗೆ ನಿಗಮಗಳ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

Advertisement

ಡೀಸೆಲ್‌ ದರ 53 ರೂ. ಇದ್ದಾಗ 2013ರಲ್ಲಿ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಅನಂತರ ದರ ಏರಿಕೆ ಮಾಡಿಲ್ಲ. ಕೆಲವು ತಿಂಗಳ ಹಿಂದೆ ಶೇ.18ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದರೂ ಮುಖ್ಯಮಂತ್ರಿಗಳು ತಡೆಹಿಡಿದಿದ್ದರು. ಈಗ ಡೀಸೆಲ್‌ ದರ 70 ರೂ.ಗೆ ಇಳಿಕೆಯಾಗಿರಬಹುದು. ಆದರೆ ನಿಗಮಗಳು ನಷ್ಟದಲ್ಲೇ ಇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next