Advertisement

ಮಿಯಾಮಿ ಓಪನ್‌ ಟೆನಿಸ್‌ : ಪೆಟ್ರಾ ಕ್ವಿಟೋವಾಗೆ ಪ್ರಶಸ್ತಿ

12:13 AM Apr 03, 2023 | Team Udayavani |

ಮಿಯಾಮಿ ಗಾರ್ಡನ್ಸ್‌: ಮ್ಯಾರಥಾನ್‌ ಟೈಬ್ರೇಕರ್‌ನಲ್ಲಿ ಏಳನೇ ಶ್ರೇಯಾಂಕದ ಎಲೆನಾ ರಿಬಕಿನಾ ಅವರನ್ನು ಸೋಲಿಸಿದ ಪೆಟ್ರಾ ಕ್ವಿಟೋವಾ ಅವರು ಮಿಯಾಮಿ ಓಪನ್‌ ಟೆನಿಸ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Advertisement

ತನ್ನ ಎದುರಾಳಿಗಿಂತ 10 ವರ್ಷ ಹಿರಿಯರಾದ 33ರ ಹರೆಯದ ಕ್ವಿಟೋವಾ 7-6 (14), 6-2 ಸೆಟ್‌ಗಳಿಂದ ಜಯ ಸಾಧಿಸಿದರು. ಈ ಮೂಲಕ ರಿಬಕಿನಾ ಅವರ ಸತತ 13 ಪಂದ್ಯ ಗೆಲುವಿನ ಸರಮಾಲೆಗೆ ಕಡಿವಾಣ ಹಾಕಿದರಲ್ಲದೇ ಸನ್‌ಸೈನ್‌ ಡಬಲ್‌ ಪ್ರಶಸ್ತಿ (ಇಂಡಿಯನ್‌ ವೇಲ್ಸ್‌ ಮತ್ತು ಮಿಯಾಮಿ) ಗೆಲ್ಲುವ ಅವಕಾಶ ತಪ್ಪಿಸಿದರು.

ಇಲ್ಲಿ 13ನೇ ಬಾರಿ ಆಡಿದ ಕ್ವಿಟೋವಾ ಡಬ್ಲ್ಯುಟಿಎಯಲ್ಲಿ ತನ್ನ 30ನೇ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. 2018ರಲ್ಲಿ ಮ್ಯಾಡ್ರಿಡ್‌ನ‌ಲ್ಲಿ ಗೆದ್ದ ಬಳಿಕ ಅವರು ಇದೇ ಮೊದಲ ಸಲ ಪ್ರಶಸ್ತಿ ಜಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next