Advertisement
ಶನಿವಾರ 2 ಗಂಟೆ, 19 ನಿಮಿಷಗಳ ಕಾಲ ಸಾಗಿದ ಪ್ರಶಸ್ತಿ ಸಮರದಲ್ಲಿ ಕ್ವಿಟೋವಾ ತವರಿನ ನೆಚ್ಚಿನ ಆಟಗಾರ್ತಿ ಆ್ಯಶ್ಲಿ ಬಾರ್ಟಿ ವಿರುದ್ಧ 1-6, 7-5, 7-6 (3) ಅಂತರದ ಗೆಲುವು ಒಲಿಸಿಕೊಂಡರು. 2015ರಲ್ಲಿ ಮೊದಲ ಸಲ ಅವರಿಲ್ಲಿ ಚಾಂಪಿಯನ್ ಆಗಿದ್ದರು.
“ಆ್ಯಶ್ ಸವಾಲು ಎದುರಿಸುವುದು ಕಷ್ಟ ಎಂಬುದು ತಿಳಿದಿತ್ತು. ತವರಿನಲ್ಲಿ ಗೆಲ್ಲಲಾಗದಿದ್ದುದು ಅವರಿಗೆ ಬಹಳ ನೋವುಂಟು ಮಾಡಿದೆ. ಆದರೆ ಮುಂದೊಂದು ದಿನ ಅವರು ಈ ಸಾಧನೆ ಮಾಡಿಯೇ ಮಾಡುತ್ತಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರಿಗೆ ಗುಡ್ ಲಕ್…’ ಎಂದು ಕ್ವಿಟೋವಾ ಆಸೀಸ್ ಆಟಗಾರ್ತಿ ಬಗ್ಗೆ ಮೆಚ್ಚುಗೆಯ ಮಾತಾಡಿದರು. ಬಾರ್ಟಿ ಸಿಡ್ನಿ ಫೈನಲ್‌ನಲ್ಲಿ ಸೋಲುತ್ತಿರುವುದು ಇದು ಸತತ 2ನೇ ವರ್ಷ.ಗೆಲುವಿಗೆ ನಾನು ಎಲ್ಲ ಪ್ರಯತ್ನ ಮಾಡಿದೆ. ಆದರೂ ಸಾಲಲಿಲ್ಲ. ತವರಿನ ಅಭಿಮಾನಿಗಳನ್ನು ಮತ್ತೆ ನಿರಾಶೆಯಲ್ಲಿ ಕೆಡವಿದ್ದಕ್ಕೆ ಕ್ಷಮೆ ಕೋರುತ್ತಿದ್ದೇನೆ’ ಎಂದು ಪರಾಜಿತ ಆ್ಯಶ್ಲಿ ಬಾರ್ಟಿ ಹೇಳಿದರು. ಕೊನೆಯ ಪಂದ್ಯಾವಳಿ
1885ರಷ್ಟು ಹಿಂದೆ ಆರಂಭಗೊಂಡ “ಸಿಡ್ನಿ ಇಂಟರ್‌ನ್ಯಾಶನಲ್’ ಕೂಟದ ಕೊನೆಯ ಆವೃತ್ತಿ ಇದಾಗಿದೆ. ಮುಂದಿನ ಋತುವಿನಲ್ಲಿ “ಸಿಡ್ನಿ ಎಟಿಪಿ ಕಪ್’ ಹೆಸರಲ್ಲಿ ಪಂದ್ಯಾವಳಿ ನಡೆಯಲಿದೆ.